Ad Widget .

ಬಹಿಷ್ಕಾರದ ಭೀತಿಯಿಂದ ಅಧಿಕಾರಿಗಳ ಕುತ್ತಿಗೆ ಹಿಡಿದ ಬಿಜೆಪಿ ಸರ್ಕಾರ| ಉಚಿತ ಬಸ್, ಊಟದ ವ್ಯವಸ್ಥೆ ಸೇರಿ‌ ಖರ್ಚುವೆಚ್ಚವೆಲ್ಲಾ ಜಿಲ್ಲಾಡಳಿತದ ಖಾತೆಗೆ!!

ಸಮಗ್ರ ನ್ಯೂಸ್: ಸಪ್ಟೆಂಬರ್ 2 ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮವನ್ನು ಸಾರ್ವಜನಿಕರು ಬಹಿಷ್ಕರಿಸುವ ಭೀತಿಯಿಂದ ಸರಕಾರ ಹಲವು ಕಸರತ್ತು ಮಾಡಿದ್ದು ಕಾರ್ಯಕ್ರಮಕ್ಕೆ ಜನಸೇರಿಸಲು ಪಂಚಾಯತಿ ನೌಕರರಿಗೆ ಸುತ್ತೋಲೆಯನ್ನೂ ಹೊರಡಿಸಿದ್ದಾರೆ.

Ad Widget . Ad Widget .

ಬಿಜೆಪಿ ಕಾರ್ಯಕ್ರಮವನ್ನು‌ ಸಾರ್ವಜನಿಕರು ಬಹಿಷ್ಕರಿಸುತ್ತಾರೆ ಎಂಬ ಹೆದರಿಕೆಯಿಂದ ಸರ್ಕಾರದ ಕಾರ್ಯಕ್ರಮ ಎಂದು ಬಿಂಬಿಸಿ, ನಿಟ್ಟಿನಲ್ಲಿ ಜನರನ್ನು ಸೇರಿಸಬೇಕೆಂಬ ಸಾಹಸಕ್ಕಿಳಿದ ಬಿಜೆಪಿ ಹಲವಾರು ತಂತ್ರ ಮಾಡಿದೆ ಎನ್ನಲಾಗಿದೆ.

Ad Widget . Ad Widget .

ಮಂಗಳೂರು ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ, ಮನೆ ಮನೆಗೆ ತೆರಳಿ ಶಾಸಕರಿಂದ ಆಹ್ವಾನ, ಬಿಜೆಪಿ ಮುಖಂಡರಿಂದಲೇ ಸಾರ್ವಜನಿಕರಿಗೆ ಕರಪತ್ರ ಹಂಚಿಕೆ ಮಾಡಿದ್ದಲ್ಲದೆ ಪಂಚಾಯತಿ ನೌಕರರಿಗೆ ಜನ ಸೇರಿಸಲು ಸುತ್ತೋಲೆಯನ್ನೂ ಹೊರಡಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಉಚಿತ ವಾಹನ ವ್ಯವಸ್ಥೆಯೊಂದಿಗೆ ಹೆಚ್ಚಿನ‌ ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಕೆಂದು ಆದೇಶ ಹೊರಡಿಸಲಾಗಿತ್ತು ಮತ್ತು ಮೋದಿ‌ ಸಭೆಗೆ ಸಾರ್ವಜನಿಕರನ್ನು‌ ಕರೆದುಕೊಂಡು ಹೋಗಲು ಪಂಚಾಯಿತಿ ಸಿಬ್ಬಂದಿಗಳನ್ನು ಒತ್ತಾಯಿಸಲಾಗಿತ್ತು.

ಬಿಜೆಪಿ ಚುನಾವಣಾ ಭಾಗವಾಗಿ ನಡೆದ ಮೋದಿ ಕಾರ್ಯಕ್ರಮವನ್ನು ಸರಕಾರದ ಕಾರ್ಯಕ್ರಮ ಎಂದು ಬಿಂಬಿಸಿ‌ ಸಂಪೂರ್ಣ ಖರ್ಚನ್ನು ಜಿಲ್ಲಾಡಳಿತಕ್ಕೆ ವಹಿಸಿ ಬಿಜೆಪಿ ಕೈ ತೊಳೆದಿದೆ. ಜಿಲ್ಲಾಡಳಿತದಿಂದ ಸಮಾವೇಶಕ್ಕೆ ಸೇರಿರುವ ಅಷ್ಟೂ ಜನರಿಗೆ ಬಲವಂತದಿಂದ ಊಟದ ವ್ಯವಸ್ಥೆ ಮಾಡಿಸಿ ಆ ಒತ್ತಡದಿಂದಲೂ ಬಿಜೆಪಿ‌ ನಾಯಕರು ಬಚಾವಾಗಿದ್ದು, ಚಾಣಾಕ್ಷತನ ಮೆರೆದಿದ್ದಾರೆ.

Leave a Comment

Your email address will not be published. Required fields are marked *