ಪುತ್ತೂರು: ಮಂಗಳೂರಿಗೆ ಪ್ರಧಾನಿ ಆಗಮನದ ಹಿನ್ನಲೆ, ಸರಕಾರಿ ಬಸ್ಸುಗಳೆಲ್ಲವೂ ಅಲ್ಲಿಗೆ ತೆರಳಿದ್ದು ದಕ ಸೇರಿದಂತೆ ಸುತ್ತಮುತ್ತಲಿನ ಕೆಲವು ಜಿಲ್ಲೆಗಳಲ್ಲಿ ಬಸ್ಸಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಬಸ್ ಸಂಪರ್ಕ ದ ಬಗ್ಗೆ ವಿಚಾರಿಸಿದಾಗ, ಸಾರಿಗೆ ಸಿಬ್ಬಂದಿಗಳಿಂದ ಸರಿಯಾದ ಉತ್ತರ ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಹಿರಿಯ ನಾಗರಿಕರು ಅತಿಯಾಗಿ ಕಷ್ಟ ಅನುಭವಿಸುವಂತಾಗಿದೆ.
ಪ್ರಧಾನಿ ನೋಡಲು ತೆರಳುವ ಜನರಿಗೆ ಸರಕಾರಿ ಸಾರಿಗೆ ಬಸ್ ಗಳನ್ನು ನಿಯೋಜಸಿಲಾಗಿದೆ. ಆದರೆ ಸಾಮಾನ್ಯ ಜನರ ಪ್ರಯಾಣಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಜನತೆ ಭಾರಿ ತೊಂದರೆಗೀಡಾಗಿದ್ದಾರೆ.
ಅದಲ್ಲದೆ ಇಂದು ಪುತ್ತೂರು-ಸುಳ್ಯ ನಡುವಿನ ಸಾಮಾನ್ಯ ಪ್ರಯಾಣಕ್ಕೆ ರಾಜಹಂಸ ಬಸ್ ನಿಯೋಜಿಸಲಾಗಿದೆ, ಜೊತೆಗೆ ಪ್ರಯಾಣಿಕರಿಗೆ ಎಕ್ಸ್ಪ್ರೆಸ್ ಪ್ರಯಾಣ ದರ ವಿಧಿಸಲಾಗುತ್ತಿದೆ. ಇನ್ನು ಈ ಬಸ್ ಗಳಲ್ಲಿ ವಿದ್ಯಾರ್ಥಿ ಬಸ್ ಪಾಸ್ ಗೆ ಅವಕಾಶ ನೀಡದೆ ಸತಾಯಿಸಿರುವುದು ಕಂಡುಬಂದಿದೆ. ಒಟ್ಟಾರೆ ಪ್ರಧಾನಿ ಕಾರ್ಯಕ್ರಮಕ್ಕೆ ಬಸ್ ನಿಯೋಜಿಸಿ ಇತ್ತ ಸಾಮಾನ್ಯ ಜನರ ಪ್ರಯಾಣಕ್ಕೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಕೆ ಎಸ್ ಆರ್ ಟಿ ಸಿ ವಿಫಲತೆ ಎದ್ದು ಕಾಣುತ್ತಿದೆ.