Ad Widget .

ಎಸ್​ಎಸ್​ಎಲ್​ಸಿ ಆದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಸಮಗ್ರ ನ್ಯೂಸ್: ಭಾರತೀಯ ಅಂಚೆ ಇಲಾಖೆಯಲ್ಲಿ (India Post Office) 20 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸ್ಟಾಫ್​​ ಕಾರ್​​ ಡ್ರೈವರ್​ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮತ್ತು ನವದೆಹಲಿಯಲ್ಲಿ ಈ ಹುದ್ದೆಗಳ ಭರ್ತಿ ನಡೆಯಲಿದೆ. ಎಸ್​ಎಸ್​ಎಲ್​ಸಿ ಓದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Ad Widget . Ad Widget .

ಅರ್ಜಿಯನ್ನು ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ 26 ಸೆಪ್ಟೆಂಬರ್​ ಆಗಿದೆ.

Ad Widget . Ad Widget .

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆಯ ಹೆಸರು: ಭಾರತ ಅಂಚೆ ಕಚೇರಿ (ಭಾರತೀಯ ಅಂಚೆ)
ಹುದ್ದೆಯ ಹೆಸರು: ಸ್ಟಾಫ್ ಕಾರ್ ಡ್ರೈವರ್
ಹುದ್ದೆಗಳ ಸಂಖ್ಯೆ: 20
ಉದ್ಯೋಗ ಸ್ಥಳ: ಬೆಂಗಳೂರು – ನವದೆಹಲಿ
ವೇತನ: 19900-63200 ರೂ. ಪ್ರತಿ ತಿಂಗಳು
ಹುದ್ದೆ ಹುದ್ದೆ ಸಂಖ್ಯೆ ವಯೋಮಿತಿ ವಿದ್ಯಾರ್ಹತೆ
ಸಿಬ್ಬಂದಿ ಕಾರು ಚಾಲಕ (ಗ್ರೇಡ್​ ಸಿ) 1 ವಯೋಮಿತಿ ಗರಿಷ್ಟ 56 ವರ್ಷ, ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ.
ಸಿಬ್ಬಂದಿ ಕಾರ್ ಚಾಲಕ, ವಯೋಮಿತಿ 19 ಕನಿಷ್ಟ 18 ಗರಿಷ್ಟ 27ವರ್ಷ, ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಸಲ್ಲಿಕೆ: ಆಫ್​​ ​ಲೈನ್

ಆಯ್ಕೆ ಪ್ರಕ್ರಿಯೆ
ಡ್ರೈವಿಂಗ್ ಟೆಸ್ಟ್, ಥಿಯರಿ ಟೆಸ್ಟ್ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆ ವಿಳಾಸ:
ಸ್ಟಾಫ್ ಕಾರ್ ಡ್ರೈವರ್: ವಿನಾಯಕ್ ಮಿಶ್ರಾ ಸಹಾಯಕ ಮಹಾನಿರ್ದೇಶಕ (ಅಡ್ಮಿನ್.), ವಿಭಾಗದ ಮುಖ್ಯಸ್ಥರು, ನವದೆಹಲಿ
ಸಿಬ್ಬಂದಿ ಕಾರ್ ಡ್ರೈವರ್ (ಗ್ರೇಡ್​ಸಿ ): ಮ್ಯಾನೇಜರ್, ಮೇಲ್ ಮೋಟಾರ್ ಸೇವೆ, ಬೆಂಗಳೂರು-560001, ಕರ್ನಾಟಕ.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26 ಆಗಸ್ಟ್​ 2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಸೆಪ್ಟೆಂಬರ್​​ 2022

ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಸಿಬ್ಬಂದಿ ಕಾರು ಚಾಲಕ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: indiapost.gov.in

ಅರ್ಜಿ ಸಲ್ಲಿಕೆ ಪ್ರಕ್ರಿಯೆ:
-ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

-ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

  • ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

-ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಸ್ಪೀಡ್​ ಪೋಸ್ಟ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮೂಲಕ ಸಲ್ಲಿಸಿ.

Leave a Comment

Your email address will not be published. Required fields are marked *