ಕೆಎಸ್ ಆರ್ ಟಿಸಿ ರಿಯಾಯಿತಿ ಬಸ್ ಪಾಸ್ ಅವಧಿ ವಿಸ್ತರಣೆ

ಶಿವಮೊಗ್ಗ: ಕ.ರಾ.ರ.ಸಾ.ನಿಗಮದಿಂದ ವಿತರಿಸಲಾಗುತ್ತಿರುವ ರಿಯಾಯಿತಿ ಪಾಸ್ ಆಧಾರಿತ ಪ್ರಯಾಣದ ಅವಧಿಯನ್ನು ಆಗಸ್ಟ್ 22 ರಿಂದ ಅಕ್ಟೋಬರ್ 22 ರ ಅಂತ್ಯದವರೆಗೆ ವಿಸ್ತರಿಸಲಾಗಿದ್ದು, ವಿದ್ಯಾರ್ಥಿಗಳಿಂದ ನಿಗದಿತ ಮೊತ್ತ ಪಡೆದುಕೊಂಡು ರಶೀದಿ ನೀಡಿ ವಿದ್ಯಾರ್ಥಿಗಳು ರಶೀದಿ ಮತ್ತು ಹಳೆಯ ಪಾಸ್ ಎರಡನ್ನು ತೋರಿಸಿ ಅಕ್ಟೋಬರ್ 22ರ ವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

Ad Widget ... ..

ಅಂತಿಮ ವರ್ಷದ ಕೊನೆಯ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ಪದವಿ/ಸ್ನಾತಕೋತ್ತರ/ಡಿಪ್ಲೊಮಾ/ಕಾನೂನು ಇತರೆ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಂತಿಮ ವರ್ಷದ ಪರೀಕ್ಷೆ ಮುಗಿಯುವವರಿಗೆ ಮಾತ್ರ ಅಂದರೆ ಅಕ್ಟೋಬರ್ 22ರ ಅಂತ್ಯದವರೆಗೆ ಹಳೆಯ ಪಾಸ್ ಹಾಗೂ ಅವಧಿ ವಿಸ್ತರಣೆ ಸಮಯದಲ್ಲಿ ನೀಡಿರುವ ರಶೀದಿ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.

Ad Widget

ಇನ್ನುಳಿದ ಇತರೆ ತರಗತಿ/ಸೆಮಿಸ್ಟರ್‍ನ ವಿದ್ಯಾರ್ಥಿಗಳು ಸೇವಾಸಿಂಧು ಪೊರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿ ಹೊಸ ಪಾಸ್‍ಗಳನ್ನು ಶಿವಮೊಗ್ಗ ವಿಭಾಗದ ಬಸ್ ನಿಲ್ದಾಣಗಳ ಬಸ್‍ಪಾಸ್ ವಿತರಣಾ ಕೌಂಟರ್ ಗಳಲ್ಲಿ ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *