Ad Widget .

ಮಂಗಳೂರು: ಪ್ರಧಾನಿ ಸಮಾವೇಶದಲ್ಲಿ ಲೋಪ ಆಗದೆ ಸಕ್ಸಸ್| ಆದರೆ ಜನಸಾಮಾನ್ಯನಿಗೆ ಆದ ಲೋಪಕ್ಕೆ ಯಾರು ಹೊಣೆ?

ಸಮಗ್ರ ನ್ಯೂಸ್: ಸೆ.2 ರಂದು ನಡೆದ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಆಗದಂತೆ ಭದ್ರತೆ ಕಲ್ಪಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಿಂದ ಸಮಾಜಕ್ಕೆ, ಸಾರ್ವಜನಿಕರಿಗೆ ಆದ ಲೋಪಕ್ಕೆ ಯಾರು ಹೊಣೆ?ಎಂಬ ಪ್ರಶ್ನೆ ಎದುರಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಧಾನ ಮಂತ್ರಿ ಮಂಗಳೂರಿಗೆ ಬರುತ್ತಿರುವ ಸುದ್ದಿ ಆಗುತ್ತಿದಂತೆ ದ.ಕ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕ ಜಿಲ್ಲೆಯ ಲಕ್ಷಾಂತರ ಜನ ವಿಶ್ವ ನಾಯಕನಿಗೆ ಸ್ವಾಗತ ಕೋರಲು ಸಿದ್ದರಾಗಿದ್ದರು. ಈ ಹಿನ್ನಲೆ ಪ್ರಧಾನ ಮಂತ್ರಿಯವರ ಸಮಾವೇಶದಲ್ಲಿ ಯಾವುದೇ ಲೋಪ ಉಂಟಾಗದಂತೆ ಬಿಜೆಪಿ ಘಟಾನುಘಟಿ ನಾಯಕರ ಆದೇಶದಂತೆ ದ.ಕ ಜಿಲ್ಲಾಡಲಿತ ಸಿದ್ದತೆ ಮಾಡಿಕೊಂಡಿತು. ಹಾಗಾಗಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು, ಸರ್ಕಾರಿ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿತ್ತು.

Ad Widget . Ad Widget . Ad Widget .

ಇನ್ನು ಪ್ರಧಾನ ಮಂತ್ರಿಯವರನ್ನು ನೋಡಲು ಬರುವ ಜನ ತಮ್ಮ ಸ್ವಂತ ವಾಹನದಲ್ಲಿ ಬಂದರೇ ವಾಹನ ದಟ್ಟಣೆ ಹೆಚ್ಚಾದರೆ ಪಾರ್ಕಿಂಗ್ ಸಮಸ್ಯೆ, ಟ್ರ್ಯಾಫಿಕ್ ಸಮಸ್ಯೆ ಆಗ ಬಹುದು ಎಂಬ ಕಾರಣದಿಂದ ಹಾಗೂ ಇದು ಸರಕಾರಿ ಕಾರ್ಯಕ್ರಮ ಎಂದು ಸರಕಾರಿ ಬಸ್ ಗಳನ್ನು ಬಳಸಿಕೊಳ್ಳಲಾಗಿತ್ತು.

ಹೌದು, ಇದು ಒಂದು ಆರ್ಥದಲ್ಲಿ ಸರಿಯಾದ ಮಾರ್ಗ. ಆದರೆ ಇದರ ಜೊತೆಗೆ ಸಾರ್ವಜನಿಕರ ಬಗ್ಗೆ ಒಂದಿಷ್ಟು ಕಾಳಜಿ ಇರಲಿಲ್ಲವೇ?

ಸಾರ್ವಜನಿಕರಿಗೆ ಮಾಹಿತಿ ನೀಡದೆ ಗ್ರಾಮೀಣ ಭಾಗಕ್ಕೆ ತೆರಳುವ ಬಸ್ ಗಳನ್ನು ಬಂದ್ ಮಾಡಿ ಸಮಾವೇಶಕ್ಕೆ ಕಳುಹಿಸಿದ್ದು ಎಷ್ಟರ ಮಟ್ಟಿಗೆ ಸರಿ? ನಿಮ್ಮ ಈ ಅವ್ಯವಸ್ಥೆಯಿಂದ ಇಂದು ದಿನ ಎಷ್ಟೋ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಸಾರ್ವಜನಿಕರು ನಡೆದುಕೊಂಡು ಹೊಗುವ ಪ್ರಸಂಗವು ನಡೆದಿದೆ. ಇನ್ನೂ ಕೆಲವರು ಬಸ್ ಸ್ಟಾಂಡ್ ಗೆ ಬಂದು ಬಸ್ಸಿಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಹಿಂತಿರುಗಿದ ಘಟನೆಯು ನಡೆದಿದೆ. ಶಾಲಾಮಕ್ಕಳು ಖಾಸಗಿ ವಾಹನಗಳಲ್ಲಿ ತೆರಳಿ ಪರದಾಡುವಂತಾಯಿತು.

ಅದಲ್ಲದೆ ಕೆಲವೆಡೆ ಇದೇ ಅವಕಾಶವನ್ನು ಕೆಎಸ್ ಆರ್ ಟಿಸಿ ಲಾಭವಾಗಿ ಬಳಸಿಕೊಂಡು ಸಾಮಾನ್ಯ ಪ್ರಯಾಣಕ್ಕೆ ರಾಜಹಂಸ ಬಸ್ ನಿಯೋಜಿಸಿ, ಪ್ರಯಾಣಿಕರಿಗೆ ಎಕ್ಸ್ ಪ್ರೆಸ್ ಪ್ರಯಾಣ ದರ ವಿಧಿಸಿತ್ತು. ಇನ್ನು ಈ ಬಸ್ ಗಳಲ್ಲಿ ವಿದ್ಯಾರ್ಥಿ ಬಸ್ ಪಾಸ್ ಗೆ ಅವಕಾಶ ನೀಡದೆ ಸತಾಯಿಸಲಾಯಿತು. ಒಟ್ಟಾರೆ ಪ್ರಧಾನಿ ಕಾರ್ಯಕ್ರಮಕ್ಕೆ ಬಸ್ ನಿಯೋಜಿಸಿ ಇತ್ತ ಸಾಮಾನ್ಯ ಜನರ ಪ್ರಯಾಣಕ್ಕೆ ಸರಿಯಾದ ವ್ಯವಸ್ಥೆ ಮಾಡುವಲ್ಲಿ ಕೆ ಎಸ್ ಆರ್ ಟಿ ಸಿ ಹಾಗೂ ದ.ಕ ಜಿಲ್ಲಾಡಳಿತ ವಿಫಲವಾಗಿದ್ದು, ಆಡಳಿತ ವ್ಯವಸ್ಥೆಯ ವಿರುದ್ದ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *