Ad Widget .

ಕಚ್ ಮತ್ತು ಭುಜ್ ನಲ್ಲಿ ನಡೆದ ರೋಡ್ ಶೋ ವೈರಲ್| ಮಂಗಳೂರಿನಲ್ಲಿ ಇಷ್ಟೊಂದು ಜನ ಸೇರಿದ್ದರೇ? ಪ್ಯಾಕ್ಟ್ ಚೆಕ್

ಸಮಗ್ರ ನ್ಯೂಸ್: ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಾಗೂ ತಮ್ಮ ತವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಆ.28ರ ಭಾನುವಾರ ಕಚ್ ಜಿಲ್ಲೆಯ ಭುಜ್ ಪಟ್ಟಣದಲ್ಲಿ ರೋಡ್ ಶೋ ನಡೆಸಿದ್ದರು. ಇದೇ ವಿಡಿಯೋವನ್ನು ಕೆಲವರು ಮಂಗಳೂರಿನಲ್ಲಿ ಸೇರಿದ್ದ ಜನಸ್ತೋಮ ಎಂದು ಸ್ಟೇಟಸ್ ಹಾಕಿದ್ದು, ಈ ವಿಡಿಯೋ ವೈರಲ್ ಆಯಿತು.

Ad Widget . Ad Widget .

ಈ ವಿಡಿಯೋದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಮೂಹವು ಮೋದಿ ಮೋದಿ ಎಂದು ಕೂಗುತ್ತಲೇ ಇದ್ದರು ಮತ್ತು ತ್ರಿವರ್ಣ ಧ್ವಜವನ್ನು ಬೀಸುತ್ತಾ ಪ್ರಧಾನಿಯವರ ಮೇಲಿನ ಪ್ರೀತಿಯನ್ನು ಅಲ್ಲಿನ ಜನತೆ ವ್ಯಕ್ತಪಡಿಸಿತು. ಮೋದಿ ಅವರು ತಮ್ಮ ಕಾರಿನಲ್ಲಿ ನಿಂತು ಜನರತ್ತ ಕೈ ಬೀಸುವ ಮೂಲಕ ಪ್ರತ್ಯುತ್ತರ ನೀಡಿದರು. ಒಂದು ಹಂತದಲ್ಲಿ ಮೋದಿಯವರು ಕಾರಿನಿಂದ ಇಳಿದು ಕೆಲ ಕಾಲ ನಡೆದಿದ್ದರು.

Ad Widget . Ad Widget .

ಇದೇ ವಿಡಿಯೋ ಇಂದು ಮಂಗಳೂರಿಗೆ ಮೋದಿ ಆಗಮಿಸಿದ ಸಂದರ್ಭದಲ್ಲಿ ವೈರಲ್ ಆಯಿತು. ಕೆಲವರು ಕುಡ್ಲದಲ್ಲಿ ಕೇಸರಿ ಪಡೆ ಎಂದು ಹಾಕಿಕೊಂಡರೆ, ಹಲವರು ವಿಡಿಯೋವನ್ನು ತಮ್ಮ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದರು. ಈ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಕಮೆಂಟ್ ಗಳು ಬರುತ್ತಿವೆ.

Leave a Comment

Your email address will not be published. Required fields are marked *