Ad Widget .

ಬಾಲಕನ ಚಿಕಿತ್ಸೆಗೆ ಹರಿದು ಬಂದ ನೆರವಿನ ಮಹಾಪೂರ/ಅಪರೂಪದ ಥಲೆಸ್ಸೀಮಿಯ ರೋಗದಿಂದ ಬಳಲುತ್ತಿರುವ ಕೂವೆ ಗ್ರಾಮದ ರಿತ್ವಿಕ್

ಕೊಟ್ಟಿಗೆಹಾರ:ಅಪರೂಪದ ಥಲೆಸ್ಸೀಮಿಯ ರೋಗದಿಂದ ಬಳಲುತ್ತಿರುವ ಕೂವೆ ಗ್ರಾಮದ ರಿತ್ವಿಕ್ ಚಿಕಿತ್ಸೆಗೆ ಧಾನಿಗಳಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ.

Ad Widget . Ad Widget .

ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಪಕ್ಷದ ಮುಖಂಡರಿಂದ ಸುಮಾರು ೪೧ ಲಕ್ಷ ನೆರವು ಹರಿದು ಬಂದಿದೆ. ಕೂವೆ ಗ್ರಾಮದ ದಿವಾಕರ ಮತ್ತು ಶಾಲಿನಿ ದಂಪತಿಗಳ ಪುತ್ರ ಏಳು ವರ್ಷದ ರಿತ್ವಿಕ್‌ ಬಿಳಿರಕ್ತ ಕಣಗಳು ಉತ್ಪತ್ತಿಯಾಗದ ಅಪರೂಪದ ಥಲೇಸ್ಸಿಮಿಯ ಎಂಬ ರೋಗದಿಂದ ಬಳಲುತ್ತಿದ್ದು ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿನ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು.

Ad Widget . Ad Widget .

ಬಾಲಕ ರಿತ್ವಿಕ್‌ನ ರೋಗ ಗುಣವಾಗಬೇಕಾದರೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲೇಟೇಶನ್ ಶಸ್ತçಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದ್ದರು. ಈ ಶಸ್ತ್ರಚಿಕಿತ್ಸೆ ಗೆ ಸುಮಾರು ೪೦ ಲಕ್ಷ ಖರ್ಚು ಆಗುವುದರಿಂದ ರಿತ್ವಿಕ್‌ನ ಪೋಷಕರು ದಾನಿಗಳಲ್ಲಿ ನೆರೆವಿಗೆ ಮೊರೆ ಇಟ್ಟಿದ್ದರು.
ರಿತ್ವಿಕ್ ಚಿಕಿತ್ಸೆಗೆ ದಾನಿಗಳು ನೆರವಿಗೆ ಬಂದಿದೆ. ಶಸ್ತ್ರಚಿಕಿತ್ಸೆ ಗೆ ಬೇಕಾದ ಹಣ ಸಂಗ್ರಹವಾಗಿದೆ. ದಾನಿಗಳಿಗೆ ದಿವಾಕರ ಮತ್ತು ಶಾಲಿನಿ ದಂಪತಿಗಳು ಕೃತಜ್ಞತೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *