Ad Widget .

ಅರಂತೋಡು – ಎಲಿಮಲೆ ನಿತ್ಯ ಅವಘಡ| ರಸ್ತೆ ಅಭಿವೃದ್ಧಿ ಮಾಡಲಾಗದಿದ್ದರೇ ಒಂದು ಕ್ರೇನ್ ಕೊಡಿ; ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ

ಸಮಗ್ರ ನ್ಯೂಸ್: ಸುಮಾರು 30 ವರ್ಷಗಳಿಂದ ಅರಂತೋಡಿನಿಂದ ಎಲಿಮಲೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಯಾಗದೇ ಇರುವುದರಿಂದ ಈ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ಹಾಗಾಗಿ ಈ ಭಾಗಕಕ್ಕೆ ಒಂದು ಕ್ರೇನ್ ಮತ್ತು ಆಂಬ್ಯುಲೆನ್ಸ್ ಅನ್ನು ಕೊಟ್ಟು ಸಹಕರಿಸಿ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

Ad Widget . Ad Widget .

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಿಗುವ ಈ ಅರಂತೋಡು ಎಲಿಮಲೆ ರಸ್ತೆ ಸುಬ್ರಹ್ಮಣ್ಯ ಕ್ಕೆ ಸಂಪರ್ಕಿಸುವ ಹತ್ತಿರದ ರಸ್ತೆಯಾಗಿದೆ. ಅರಂತೋಡಿನಿಂದ ಸುಮಾರು 20 ಕಿ.ಮೀ. ಸಂಚರಿಸಿದರೆ ಎಲಿಮಲೆ ತಲುಪಿ ಅಲ್ಲಿಂದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ತಲುಪುವ ಹತ್ತಿರದ ರಸ್ತೆಯಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ಹಲವಾರು ವಾಹನಗಳು ಓಡಾಡುತ್ತವೆ.

Ad Widget . Ad Widget .

ಈ ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಕ್ಕೆ ತೆರಳುವವರಿಗಾಗಿ ಮತ್ತು ಇತರ ಸಾರ್ವಜನಿಕರಿಗಾಗಿ ಸರಕಾರಿ ಬಸ್ಸು ವ್ಯವಸ್ಥೆ ಮಾಡಲಾಗಿದೆ. ಆದರೆ ಇದು ಕಿರಿದಾದ ರಸ್ತೆಯಾಗಿರುವುದರಿಂದ ಬಸ್ಸು ಸಂಚರಿಸುವ ವೇಳೆ ಹಲವು ಅನಾಹುತಗಳು ನಿತ್ಯ ಸಂಭವಿಸುತ್ತಿವೆ.

ಕಳೆದ ಕೆಲ ದಿನಗಳ ಹಿಂದೆ ಪ್ರಯಾಣಿಕರನ್ನು ಹೊತ್ತು ಅರಂತೋಡಿನಿಂದ ಅಡ್ತಲೆ ಮಾರ್ಗವಾಗಿ ಮರ್ಕಂಜಕ್ಕೆ ತೆರಳುವ ವೇಳೆ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಬಸ್ಸು ಕಮರಿಗೆ ಬಿದ್ದ ಘಟನೆಯು ನಡೆದಿದಲ್ಲದೆ ಇದರಿಂದ ಭಾರೀ ದೊಡ್ಡ ಅನಾಹುತ ತಪ್ಪಿದೆ. ಬಳಿಕ ಕ್ರೇನ್ ಮೂಲಕ ಬಸ್ಸನ್ನು ಮೇಲೆತ್ತಲಾಗಿತ್ತು. ಇದಾದ ಕೆಲದಿನ ಬಳಿಕ ಇದೇ ರಸ್ತೆಯಲ್ಲಿ ಕಾರೊಂದು ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ವೇಳೆ ಡಿಕ್ಕಿ ಹೊಡೆದು ಕಮರಿಗೆ ಬಿದ್ದು, ಬಳಿಕ ಕ್ರೇನ್ ಮೂಲಕ ಮೇಲೆತ್ತಲಾಗಿತ್ತು.

ಹೀಗೆ ಈ ಭಾಗದಲ್ಲಿ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಲೇ ಇದೆ. ಇದಕ್ಕೆ ಮೂಲ ಕಾರಣ ರಸ್ತೆ ಅಗಲೀಕರಣ ಆಗದೇ ಇರುವುದು. ಈ ಭಾಗದಲ್ಲಿ ತಿರುವುಗಳು ಹೆಚ್ಚಾಗಿದ್ದು ಅಲ್ಲದೆ ಎದುರಿನಿಂದ ಬರುವ ವಾಹನಗಳಿಗೆ ಬಿಟ್ಟು ಕೊಡಲು ಜಾಗವೇ ಇಲ್ಲದಷ್ಟು ಕಿರಿದಾದ ರಸ್ತೆಯಾಗಿದೆ. ಹಾಗಾಗಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ.
ಈ ಎಲ್ಲ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಈ ರಸ್ತೆಯನ್ನು ಅಗಲೀಕರಣಗೊಳಿಸಿ ಎಂದು ಹಲವು ಭಾರೀ ಈ ಭಾಗದ ಜನತೆ ಗ್ರಾಮ ಪಂಚಾಯತ್ ನಿಂದ ಹಿಡಿದು ಪ್ರಧಾನ ಮಂತ್ರಿ ಕಾರ್ಯಾಲಯದವರೆಗೆ ಮನವಿ ಸಲ್ಲಿಸುತ್ತ ಬಂದಿದ್ದಾರೆ. ಆದರೂ ಈವರೆಗೂ ಯಾವನೇ ಒಬ್ಬ ಜನ ಪ್ರತಿನಿಧಿ ಕೂಡ ಇತ್ತ ತಲೆ ಹಾಕಿ ನೋಡಿದವರಿಲ್ಲ. ಕೊನೆಗೆ ಬೇಸತ್ತು ಈ ಊರಿನವರು ರಸ್ತೆಯುದ್ದಕ್ಕೂ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸಿದ್ದಾರೆ.
ಈ ಬಗ್ಗೆ ಸಚಿವರಾದ ಎಸ್. ಅಂಗಾರ ಸೇರಿದಂತೆ ಜನಪ್ರತಿನಿಧಿಗಳು ಟೊಲ್ಲು ಭರವಸೆಯ ಮಾತನಾಡುತ್ತಾರೆ ಹೊರತು ಈ ವರೆಗೆ ಆ ಭಾಗಕ್ಕೆ ಬಂದು ಜನರ ಸಮಸ್ಯೆಯನ್ನು ಕೇಳಿದವರಲ್ಲ.

ಹಾಗಾಗಿ ಕೊನೆ ಪಕ್ಷ ನಿಮ್ಮಿಂದ ರಸ್ತೆಯಂತು ಅಭಿವೃದ್ಧಿ ಮಾಡಲು ಆಗುವುದಿಲ್ಲ, ಹಾಗಾಗಿ ಈ ರಸ್ತೆಯಲ್ಲಿ ಸಂಭವಿಸುವ ಅನಾಹುತದಿಂದ ಜೀವ ಉಳಿಸಿಕೊಳ್ಳಲು ಆಂಬ್ಯುಲೆನ್ಸ್ ಸೇವೆ ಹಾಗೂ ಕಮರಿಗೆ ಬಿದ್ದ ವಾಹನವನ್ನು ಮೇಲೆತ್ತಲು ಕ್ರೇನ್ ಸೇವೆ ಕೊಟ್ಟು ಸಹಕರಿಸಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *