Ad Widget .

ಕೊಟ್ಟಿಗೆಹಾರ: ಕೂಲಿ ಕಾರ್ಮಿಕನ ಮೇಲೆ ಕರಡಿ ದಾಳಿ

ಸಮಗ್ರ ನ್ಯೂಸ್: ತೋಟದಲ್ಲಿ ಕೆಲಸ ಮಾಡುವಾಗ ಕೂಲಿ ಕಾರ್ಮಿಕನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್‍ನ ಕಾಫಿತೋಟದಲ್ಲಿ ನಡೆದಿದೆ. ಕರಡಿ ದಾಳಿಗೊಳಗಾದ ಕೂಲಿ ಕಾರ್ಮಿಕನನ್ನ ಬೆಳ್ಳಪ್ಪ ಎಂದು ಗುರುತಿಸಲಾಗಿದೆ.

Ad Widget . Ad Widget .

ಕಾರ್ಮಿಕ ಬೆಳ್ಳಪ್ಪ ತೋಟದಲ್ಲಿ ಕೆಲಸ ಮಾಡುವ ವೇಳೆ ಮರಿಗಳೊಂದಿಗೆ ತೋಟಕ್ಕೆ ಬಂದ ಕರಡಿ ಏಕಾಏಕಿ ದಾಳಿ ಮಾಡಿದೆ. ಕೂಡಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇತರೆ ಕಾರ್ಮಿಕರು ಅವರನ್ನ ಆಸ್ಪತ್ರೆಗೆ ಸೇರಿದ್ದಾರೆ. ಆದರೆ, ಕರಡಿ ದಾಳಿಯಿಂದ ಬೆಳ್ಳಪ್ಪನವರ ಒಂದು ಕಾಲು ಗಂಭೀರ ಗಾಯವಾಗಿದೆ. ಮಂಡಿಯಿಂದ ಕೆಳಬಾಗದಲ್ಲಿ ಮಾಂಸಖಂಡಗಳನ್ನ ಸಂಪೂರ್ಣವಾಗಿ ಕಿತ್ತು ಹಾಕಿದೆ. ಕೂಡಲೇ ಅವರನ್ನ ಕಳಸ ತಾಲೂಕು ಆಸ್ಪತ್ರೆ ದಾಖಲಿಸಿ ಗಂಭೀರ ಗಾಯಗೊಂಡಿದ್ದ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

Ad Widget . Ad Widget .

ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Comment

Your email address will not be published. Required fields are marked *