Ad Widget .

ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ

ರಕ್ತಸ್ರಾವದಿಂದ ಹಸು ಸಾವು

Ad Widget . Ad Widget .

29 ವರ್ಷದ ವ್ಯಕ್ತಿ ಬಂಧನ

Ad Widget . Ad Widget .

ಕೋಲ್ಕತ್ತಾ: ಗರ್ಭಿಣಿ ಹಸುವಿನ ಮೇಲೆ ಅತ್ಯಾಚಾರ ಎಸಗಿದ 29 ವರ್ಷದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ ಘಟನೆ ದಕ್ಷಿಣ 24 ಪರಗಣ ಜಿಲ್ಲೆಯ ನಮ್‍ಖಾನಾ ಬ್ಲಾಕ್‍ನ ಉತ್ತರ ಚಂದನ್‍ಪಿಡಿ ಪ್ರದೇಶದಲ್ಲಿ ನಡೆದಿದೆ.

ಆರೋಪಿಯನ್ನು ಪ್ರದ್ಯುತ್ ಭೂಯಾ ಎಂದು ಗುರುತಿಸಲಾಗಿದೆ. ಇದೀಗ ಗರ್ಭಿಣಿ ಹಸುವಿನ ಮಾಲೀಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು

ಕೆಲವು ದಿನಗಳ ಹಿಂದೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಪ್ರದ್ಯುತ್, ತಮ್ಮ ಮನೆಯ ಹಿಂದೆ ಇರುವ ದನದ ಕೊಟ್ಟಿಗೆಗೆ ನುಗ್ಗಿ ತಮ್ಮ ಹಸುವಿನ ಮೇಲೆ “ಕ್ರೂರವಾಗಿ ಅತ್ಯಾಚಾರ” ಎಸಗಿದ್ದಾನೆ. ಮಧ್ಯರಾತ್ರಿ ಸುಮಾರಿಗೆ ಅತ್ಯಾಚಾರಕ್ಕೊಳಗಾದ ಹಸು ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿದೆ ಎಂದು ಉತ್ತರ ಚಂದನಪಿಡಿ ನಿವಾಸಿ ಆರತಿ ಭೂಯಾ ಮತ್ತು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಸದ್ಯ ಆರೋಪಿ ಪ್ರದ್ಯುತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಮಂಗಳವಾರ ಕಾಕದ್ವೀಪ ಉಪವಿಭಾಗೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈಗಾಗಲೇ ಪ್ರದ್ಯುತ್ ವಿರುದ್ಧ ಲೆಕ್ಕವಿಲ್ಲದಷ್ಟು ಆರೋಪಗಳಿವೆ. ಈತ ಈ ಹಿಂದೆ ಮೇಕೆಗಳು, ವಾಹನಗಳು ಮತ್ತು ಹೊಲಗಳಲ್ಲಿ ತರಕಾರಿಗಳನ್ನು ಕಳ್ಳತನ ಮಾಡಿದ್ದನು ಎಂದು ಚಂದನಪಿಡಿ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.

Leave a Comment

Your email address will not be published. Required fields are marked *