September 2022

ಪ್ರವೀಣ್ ನೆಟ್ಟಾರು‌ ಪತ್ನಿಗೆ ಸಿಎಂ ಕಚೇರಿಯಲ್ಲಿ ನೇಮಕಾತಿ ಮಾಡಿ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಇತ್ತೀಚೆಗೆ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸಿಎಂ ಸಚಿವಾಲಯದಲ್ಲಿ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರವೀಣ್ ಅವರ ಪತ್ನಿ ನೂತನ ಕುಮಾರಿ ಎಂ. ಅವರಿಗೆ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ […]

ಪ್ರವೀಣ್ ನೆಟ್ಟಾರು‌ ಪತ್ನಿಗೆ ಸಿಎಂ ಕಚೇರಿಯಲ್ಲಿ ನೇಮಕಾತಿ ಮಾಡಿ ಸರ್ಕಾರ ಆದೇಶ Read More »

ರಾಜ್ಯದ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ| ಹಲವು ತಿಮಿಂಗಿಲಗಳು ಬಲೆಗೆ?

ಸಮಗ್ರ ನ್ಯೂಸ್: ರಾಜ್ಯದ ಹಲವು ಚೆಕ್ ಪೋಸ್ಟ್ ಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ತಂಡ ಇಂದು ಧಿಡೀರ್ ದಾಳಿ ನಡೆಸಿದ್ದು, ಬೆಳ್ಳಂಬೆಳಗ್ಗೆ ಸಾರಿಗೆ ಇಲಾಖಾಧಿಕಾರಿಗಳಿಗೆ ಶಾಕ್ ನೀಡಿದೆ. ಬೀದರ್ ನ ಹುಮ್ನಾಬಾದ್, ಚೆಕ್ ಪೋಸ್ಟ್, ಬಳ್ಳಾರಿಯ ಹಗರಿ ಚೆಕ್ ಪೋಸ್ಟ್, ಅತ್ತಿಬೆಲೆಯ ಆರ್.ಟಿ.ಒ. ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೀದರ್ -ಕಲಬುರ್ಗಿ ಲೋಕಾಯುಕ್ತ ಎಸ್.ಪಿ. ನೇತೃತ್ವದ ತಂಡ ಬೆಳಗಿನ ಜಾವ ನಾಲ್ಕು ಗಂಟೆಗೆ ದಾಳಿ ನಡೆಸಿದ್ದು, ಚೆಕ್ ಪೋಸ್ಟ್

ರಾಜ್ಯದ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ| ಹಲವು ತಿಮಿಂಗಿಲಗಳು ಬಲೆಗೆ? Read More »

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು

ಸಮಗ್ರ ನ್ಯೂಸ್: ಸುಳ್ಯ ನ.ಪಂ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ ಕುರಿತು ‘ಸಮಗ್ರ ಸಮಾಚಾರ.ಕಾಂ’ ವರದಿ ಬೆನ್ನಲ್ಲೇ ಸುಳ್ಯ ಪೊಲೀಸರು ಗಸ್ತು ತಿರುಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಪಾರ್ಕ್ ನಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಸಮಾಚಾರವು ಸಾಕ್ಷಾತ್‌ವರದಿ ಮಾಡಿತ್ತು. ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಪಾರ್ಕ್ ಗೆ ಭೇಟಿ ನೀಡಿದೆ.

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು Read More »

ಸುಳ್ಯ: ಮನೆಯ ಬಳಿ ಹಾದುಹೋಗುತ್ತಿರುವ ವಿದ್ಯುತ್ ಹೈಟೆನ್ಷನ್ ತಂತಿ| ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ‌ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಉಬರಡ್ಕ ಗ್ರಾಮದ ಪಾಲಡ್ಕದ ಶಂಕರ್ ನಾಯ್ಕ ಎಂಬ ವರ ಮನೆಯ ಹತ್ತಿರ ಹಾದುಹೋಗುವ ವಿದ್ಯುತ್ ತಂತಿ ಅಪಾಯಕಾರಿಯಾಗಿದ್ದು, ಇದನ್ನು ಸರಿಪಡಿಸುವಂತೆ ಮೆಸ್ಕಾಂ ಇಲಾಖೆಯವರಿಗೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಸಿದೆ. ವಿದ್ಯುತ್ ಲೈನ್ ನೆಲದಿಂದ ಸುಮಾರು ಒಂಬತ್ತು ಅಡಿ ಎತ್ತರದಲ್ಲಿ ಇದ್ದು ಆ ಜಾಗದಲ್ಲಿ ಇರುವ ಮನೆಯಲ್ಲಿ ಸಣ್ಣ ಮಕ್ಕಳಿರುವುದರಿಂದ ವಿದ್ಯುತ್ ಲೈನ್ ನಿಂದ ತೊಂದರೆಯಾಗುತ್ತಿದೆ. ಪಕ್ಕದಲ್ಲೇ ಇರುವ ತೆಂಗಿನ ಮರಕ್ಕೆ ವಿದ್ಯುತ್ ತಂತಿ ತಾಗುತ್ತಿದ್ದು, ಅಪಾಯವಾಗುವ ಸಾಧ್ಯತೆ ಹೆಚ್ಚು. ಈ

ಸುಳ್ಯ: ಮನೆಯ ಬಳಿ ಹಾದುಹೋಗುತ್ತಿರುವ ವಿದ್ಯುತ್ ಹೈಟೆನ್ಷನ್ ತಂತಿ| ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ‌ಮನವಿ Read More »

ಚಿಕ್ಕಮಗಳೂರು: ಆರ್.ಎಸ್.ಎಸ್ ಕಾರ್ಯಕರ್ತನ ಕಾರಿನ ಮೇಲೆ ಬರಹ| ಇಬ್ಬರು ಅಪ್ರಾಪ್ತರ ಬಂಧನ

ಸಮಗ್ರ ನ್ಯೂಸ್: ಆರ್ ಎಸ್ಎಸ್‌ ಕಾರ್ಯಕರ್ತ ಕಡೂರಿನ ಡಾ. ಶಶಿಧರ್ ಚಿಂದಿಗೆರೆ ಅವರ ಕಾರಿನ ಮೇಲೆ ಕ್ಷುಲ್ಲಕ ಬರವಣಿಗೆ ಬರೆದ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಕಾರಿನ ಮೇಲೆ ‘ಕಿಲ್ ಯೂ, ಜಿಹಾದಿ ಹಾಗೂ ಇನ್ನಿತರ ಅಶ್ಲೀಲ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.29ರಂದು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೂತನ ಮಾದರಿಯ ಕಾರು ಇದಾಗಿದ್ದು, ಇಂತಹ ಕಾರು ಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲ್ಲಿನಲ್ಲಿ ಬರಹ ಗೀಚಿರುವುದಾಗಿ ಪ್ರಾಥಮಿಕ ತನಿಖೆಯಿಂದ

ಚಿಕ್ಕಮಗಳೂರು: ಆರ್.ಎಸ್.ಎಸ್ ಕಾರ್ಯಕರ್ತನ ಕಾರಿನ ಮೇಲೆ ಬರಹ| ಇಬ್ಬರು ಅಪ್ರಾಪ್ತರ ಬಂಧನ Read More »

ಕೊಟ್ಟಿಗೆಹಾರ: ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಬಾಳೂರು ಠಾಣಾ ವ್ಯಾಪ್ತಿಯ ಮಲೆಮನೆ ಎಂಬಲ್ಲಿ ಬಾಳೂರು ಪೊಲೀಸರು ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ್ದು ಕಳ್ಳಬಟ್ಟಿ ಹಾಗೂ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಮಲೆ ಮನೆ ಗ್ರಾಮದ ಸುರೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಬಾಳೂರು ಠಾಣಾಧಿಕಾರಿ ಪವನ್ ಹಾಗೂ ಸಿಬ್ಬಂದಿ ಸುರೇಶ ಎಂಬವರು ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.ಈ ವೇಳೆ 200 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿದ್ದಾರೆ.

ಕೊಟ್ಟಿಗೆಹಾರ: ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ Read More »

ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಗುಂಡಿಕ್ಕಿ ಕೊಂದ| ಪರಾರಿಯಾಗಲು ಯತ್ನಿಸಿದವನ ಪ್ರಾಣ ಕಸಿದ ವಿಧಿ

ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಘಟನೆ ಮುಂಬೈನ ಬೋಯ್ಸರ್ ಎಂಬಲ್ಲಿ ನಡೆದಿದ್ದು, ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್‌ ಮತ್ತವನ ಪ್ರೇಯಸಿ ನೇಹಾ ಮಹತೋ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಿಟ್ಟಿಗೆದ್ದ ಯಾದವ್‌ ತನ್ನ ಜೇಬಿನಿಂದ ಪಿಸ್ತೂಲ್‌ ತೆಗೆದು ನೇಹಾಗೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಆರೋಪಿ ಶ್ರೀಕೃಷ್ಣ ಯಾದವ್‌ ಅಲ್ಲಿಂದ

ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಗುಂಡಿಕ್ಕಿ ಕೊಂದ| ಪರಾರಿಯಾಗಲು ಯತ್ನಿಸಿದವನ ಪ್ರಾಣ ಕಸಿದ ವಿಧಿ Read More »

ಪಿಎಫ್ಐ ಬಳಿಕ SDPI ಮೇಲೆ ನಿಷೇಧದ ತೂಗುಗತ್ತಿ!? ಪಕ್ಷದ ಮೇಲೆ ಚುನಾವಣಾ ಆಯೋಗ ಹದ್ದಿನಕಣ್ಣು

ಸಮಗ್ರ ನ್ಯೂಸ್: ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿದ ಬಳಿಕ, ಅದರ ರಾಜಕೀಯ ವಿಭಾಗವಾದ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ (SDPI) ಮೇಲೆ ಚುನಾವಣಾ ಆಯೋಗ ಹದ್ದಿನಗಣ್ಣು ಇಟ್ಟಿದೆ ಎಂದು ತಿಳಿದುಬಂದಿದೆ. ಪಿಎಫ್‌ಐ ಹಾಗೂ ಅದರ ಜತೆ ನಿಕಟವಾಗಿರುವ ಹಲವು ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಪ್ರಕಟಣೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಎಸ್‌ಡಿಪಿಐ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಎರಡೂ ಕಡೆ ಸಕ್ರಿಯವಾಗಿರುವ ಕಾರ್ಯಕರ್ತರ ಕಾನೂನುಪಾಲನಾ ಸಂಸ್ಥೆಗಳು

ಪಿಎಫ್ಐ ಬಳಿಕ SDPI ಮೇಲೆ ನಿಷೇಧದ ತೂಗುಗತ್ತಿ!? ಪಕ್ಷದ ಮೇಲೆ ಚುನಾವಣಾ ಆಯೋಗ ಹದ್ದಿನಕಣ್ಣು Read More »

ಮಹತ್ವದ ಹುದ್ದೆಗಾಗಿ‌ ಶೋಭಾ ಕರಂದ್ಲಾಜೆ ಹೆಸರು ಬದಲಾಯಿಸ್ತಿದಾರೆ!! ಏನಿರಬಹುದು ಶಾಸ್ತ್ತ, ಜ್ಯೋತಿಷ್ಯ ಪ್ರಕಾರ ಹೊಸ ಹೆಸರು?

ಸಮಗ್ರ ನ್ಯೂಸ್: ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಮತ್ತು ಇತರ ಕಾರಣಗಳಿಗಾಗಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಿದರೆ, ಇನ್ನು ಕೆಲವರು ತಮ್ಮ ಹೆಸರುಗಳಿಗೆ ವರ್ಣಮಾಲೆಗಳನ್ನು ಸೇರಿಸುತ್ತಾರೆ. ಇಂತಹ ಪಟ್ಟಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದ್ದಾರೆ. ಸಚಿವೆ ಶೋಭಾ ತಮ್ಮ ಜೊತೆ ದೀರ್ಘಕಾಲ ಸಂಬಂಧ ಹೊಂದಿರುವ ಕರಂದ್ಲಾಜೆ ಎಂಬ ಹೆಸರನ್ನು ಬದಲಿಸಿ ತಮ್ಮ ದಿವಂಗತ ತಂದೆ ಮೋನಪ್ಪ ಗೌಡರ ಹೆಸರನ್ನು ಸೇರಿಸುವ ಸಾಧ್ಯತೆಯಿದೆ ಎಂದು ಅವರ ಮೂಲಗಳು ತಿಳಿಸಿವೆ. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಒಕ್ಕಲಿಗ

ಮಹತ್ವದ ಹುದ್ದೆಗಾಗಿ‌ ಶೋಭಾ ಕರಂದ್ಲಾಜೆ ಹೆಸರು ಬದಲಾಯಿಸ್ತಿದಾರೆ!! ಏನಿರಬಹುದು ಶಾಸ್ತ್ತ, ಜ್ಯೋತಿಷ್ಯ ಪ್ರಕಾರ ಹೊಸ ಹೆಸರು? Read More »

ಮಂಗಳೂರು: ಇನ್ನೂ ಪತ್ತೆಯಾಗದ ಕಾಲೇಜು ಡೀನ್

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ಡೀನ್ ಅವರು ಸೆಪ್ಟೆಂಬರ್ 25ರಂದು ನಾಪತ್ತೆಯಾಗಿದ್ದರು. ಆದರೆ ಅವರು ಇನ್ನೂ ಪತ್ತೆ ಆಗಿಲ್ಲ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಾ.ಅರ್ಬನ್ ಜೆ ಅರ್ನಾಲ್ಡ್ ಡಿಸೋಜಾ ಅವರು ಭಾನುವಾರ ಬೇಗನೆ ಮನೆಗೆ ಬುರುತ್ತೇನೆ ಎಂದು ಹೇಳಿ ಹಿಂತಿರುಗಿ ಬರಲೇ ಇಲ್ಲ ಎಂದು ದೂರಿನಲ್ಲಿ ದಾಖಲಾಗಿದೆ. ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ವಿವಿಧ ಮೂಲಗಳ ಪ್ರಕಾರ, ಡಾ.ಡಿಸೋಜಾ ಅವರು ತಮ್ಮ ಹೆಂಡತಿಗೆ ಹತ್ತಿರದ

ಮಂಗಳೂರು: ಇನ್ನೂ ಪತ್ತೆಯಾಗದ ಕಾಲೇಜು ಡೀನ್ Read More »