August 2022

50 ಅಡಿ ಕೆಳಗೆ ಕುಸಿದ ಮನೆ; ಮನೆ ಸದಸ್ಯರು ಪಾರು

ಸಮಗ್ರ ನ್ಯೂಸ್ : ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆಯೊಂದು ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ. ಕುಟುಂಬ ಸದಸ್ಯರು ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿತು. ಏನೋ ಅನಾಹುತ ಸಂಭವಿಸಲಿದೆ ಎಂದು ತಿಳಿದ ಮನೆಯ ಸದಸ್ಯರು ಹೊರ ಬಂದಿದ್ದು, ಕ್ಷಣಾರ್ಧದಲ್ಲಿ ಮನೆ ನೆಲಕ್ಕುರುಳಿದೆ. ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗುತ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು […]

50 ಅಡಿ ಕೆಳಗೆ ಕುಸಿದ ಮನೆ; ಮನೆ ಸದಸ್ಯರು ಪಾರು Read More »

ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಮುಂದಿನ ತಿಂಗಳಲ್ಲಿ ಹೊಸ ರೈತ ಶಕ್ತಿ ಯೋಜನೆ ಗೆ ಚಾಲನೆ- ಬಿ.ಸಿ.ಪಾಟೀಲ್

ಬೆಂಗಳೂರು: ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಮುಂದಿನ ತಿಂಗಳು ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರ ಮೇಲಿನ ಆರ್ಥಿಕ ಹೊರೆಯನ್ನು ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಮೊದಲ ಬಾರಿಗೆ ರೈತ ಶಕ್ತಿ

ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಮುಂದಿನ ತಿಂಗಳಲ್ಲಿ ಹೊಸ ರೈತ ಶಕ್ತಿ ಯೋಜನೆ ಗೆ ಚಾಲನೆ- ಬಿ.ಸಿ.ಪಾಟೀಲ್ Read More »

ಮಳೆಯಿಂದ ಸೇತುವೆ ಕುಸಿದು, ಸ್ವಲ್ಪದರಲ್ಲೇ ಪಾರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

ಸಮಗ್ರ ನ್ಯೂಸ್: ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದ ಕುಸಿದು ಬಿದ್ದಿದ್ದು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೇವಲ 5 ನಿಮಿಷಕ್ಕೆ ತೀತಾ ಸೇತುವೆ ಕುಸಿತವಾಗಿದೆ. ಕೊರಟಗೆರೆ ತಾಲೂಕಿನ ತೀತಾ ಸೇತುವೆ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದ್ದರು. ಸ್ಥಳ ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು.

ಮಳೆಯಿಂದ ಸೇತುವೆ ಕುಸಿದು, ಸ್ವಲ್ಪದರಲ್ಲೇ ಪಾರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ Read More »

ಚಿತ್ರದುರ್ಗದ‌ ಮುರುಘಾ ಶರಣರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ| ಎಫ್ಐಆರ್ ದಾಖಲು

ಸಮಗ್ರ ನ್ಯೂಸ್: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಶ್ರೀಗಳು ವಿರುದ್ಧ ಮಠದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮೈಸೂರಿನ ನಜರ್‍ಬಾದ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರ ದೂರಿನನ್ವಯ ಎಫ್‍ಐಆರ್ ದಾಖಲಿಸಲಾಗಿದೆ. ಕೋರ್ಟ್‍ನ ಮಾರ್ಗದರ್ಶನದಂತೆ ಇದೀಗ ಎಫ್‍ಐಆರ್ ಪ್ರತಿಯನ್ನು ಚಿತ್ರದುರ್ಗದ ಎಸ್ಪಿಗೆ ಕಳುಹಿಸಲಾಗಿದೆ.

ಚಿತ್ರದುರ್ಗದ‌ ಮುರುಘಾ ಶರಣರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ| ಎಫ್ಐಆರ್ ದಾಖಲು Read More »

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು ಲಲಿತ್ ಪ್ರಮಾಣವಚನ ಸ್ವೀಕಾರ

ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಂದು(ಆ.27) ನ್ಯಾಯಮೂರ್ತಿ ಯು.ಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉದಯ್ ಉಮೇಶ್ ಲಲಿತ್ ಅವರ ಇಡೀ ಕುಟುಂಬವೇ ವಕೀಲರು ಮತ್ತು ನ್ಯಾಯಮೂರ್ತಿಗಳ ಕುಟುಂಬವಾಗಿದೆ. ಮಹಾರಾಷ್ಟ್ರದ ಯುಯು ಲಲಿತ್ ಅವರ ಕುಟುಂಬಕ್ಕೆ 102 ವರ್ಷ. ಅವರ ಅಜ್ಜ ರಂಗನಾಥ್ ಲಲಿತ್ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಸೊಲ್ಲಾಪುರದಲ್ಲಿ ವಕೀಲರಾಗಿದ್ದರು. ಇಂದು ನ್ಯಾಯಮೂರ್ತಿ ಯುಯು ಲಲಿತ್ ಸಿಜೆಐ ಆಗಿ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು ಲಲಿತ್ ಪ್ರಮಾಣವಚನ ಸ್ವೀಕಾರ Read More »

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ವಿಧಿವಶ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರು ಅನಾರೋಗ್ಯದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಹೊಸಹಳ್ಳಿಯಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ರಾಮೇಗೌಡ ಅವರಿಗೆ 69 ವರ್ಷ ವಯಸ್ಸಾಗಿತ್ತು, ಮೃತರು ಪತ್ನಿ ರುಕ್ಮಿಣಿ ಮಕ್ಕಳಾದ ರವಿ ರಘು ಮಗಳು ನಾಗರತ್ನ (ಬೋರಮ್ಮ) ಸೇರಿದಂತೆ ಕುಟುಂಬದ ಬಳಗವನ್ನು ಅಗಲಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ವಿಧಿವಶ Read More »

ಸೆ. ೧೨ರಿಂದ ಕರ್ನಾಟಕ ವಿಧಾನಸಭೆ ‌ಮುಂಗಾರು ಅಧಿವೇಶನ

ಸಮಗ್ರ ನ್ಯೂಸ್: ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ನಿರ್ಧರಿಸಿದೆ. ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ವಿಧಾನಮಂಡಲದ ಮುಂಗಾರು ಅಧಿವೇಶನ ನಡೆಸಲು ನಿರ್ಧರಿಸಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಶನಿವಾರ ಮತ್ತು ಭಾನುವಾರ ಹೊರತುಪಡಿಸಿ

ಸೆ. ೧೨ರಿಂದ ಕರ್ನಾಟಕ ವಿಧಾನಸಭೆ ‌ಮುಂಗಾರು ಅಧಿವೇಶನ Read More »

ಸುಳ್ಯ: ಶಿಲಾಯುಗ ಕಾಲದ ಬೃಹತ್ ಕಲ್ಲು ಪತ್ತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಂತಿಕಲ್ಲು ಊರಿನಲ್ಲಿ ಬೃಹತ್ ಶಿಲಾಯುಗ ಕಾಲದ ನಿಲ್ಸ್ಕಲ್ ಮಾದರಿಯ ಸಮಾಧಿ ಕಂಡು ಬಂದಿದೆ ಎಂದು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ. ಮುರುಗೇಶಿಯವರು ತಿಳಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಈ ಮಾದರಿಯ ಬೃಹತ್ ಶಿಲಾಯುಗದ ಸಮಾಧಿ ಪತ್ತೆಯಾಗಿದೆಯೆಂದು ಅವರು ತಿಳಿಸಿದ್ದಾರೆ. ಸಮಾಧಿಯ ಆಸುಪಾಸಿನಲ್ಲಿ ಅಥವಾ

ಸುಳ್ಯ: ಶಿಲಾಯುಗ ಕಾಲದ ಬೃಹತ್ ಕಲ್ಲು ಪತ್ತೆ Read More »

ಕೆಟ್ಟ ದೃಷ್ಟಿಯಿಂದ ಚಿಕ್ಕ ಮಕ್ಕಳ ಖಾಸಗಿ ಅಂಗಗಳನ್ನು ಮುಟ್ಟುವುದು ತಪ್ಪು- ಬಾಂಬೆ ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ಲೈಂಗಿಕ ಬಯಕೆಯಿಂದ ಚಿಕ್ಕ ಮಕ್ಕಳ ಖಾಸಗಿ ಅಂಗಗಳನ್ನ ಸ್ಪರ್ಶಿಸುವುದು ಅಪರಾಧ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಅನಗತ್ಯವಾಗಿ ಮಗುವನ್ನ ಸ್ಪರ್ಶಿಸುವುದು ಸಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಮುಂಬೈ ಹೈಕೋರ್ಟ್ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಪರಿಗಣಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಸೆಕ್ಷನ್ 7ನ್ನ ಉಲ್ಲೇಖಿಸಿದೆ. ಮಗುವಿಗೆ ಯಾವುದೇ ರೀತಿಯ ಗಾಯವಿಲ್ಲದಿದ್ದರೆ ಮತ್ತು ಯಾವುದೇ ಕಾರಣವಿಲ್ಲದೇ ಯಾರಾದರೂ ಲೈಂಗಿಕ ಬಯಕೆಯಿಂದ ಅವರ ಖಾಸಗಿ ಅಂಗಗಳನ್ನ ಸ್ಪರ್ಶಿಸಿದರೆ ಅದು

ಕೆಟ್ಟ ದೃಷ್ಟಿಯಿಂದ ಚಿಕ್ಕ ಮಕ್ಕಳ ಖಾಸಗಿ ಅಂಗಗಳನ್ನು ಮುಟ್ಟುವುದು ತಪ್ಪು- ಬಾಂಬೆ ಹೈಕೋರ್ಟ್ ತೀರ್ಪು Read More »

ಮಂಗಳೂರು: ಕೆಪಿಟಿ ವಿದ್ಯಾರ್ಥಿಗಳಿಂದ ಡ್ಯುಯಲ್ ಮೋಟಾರ್ ಇ ಬೈಕ್ ಆವಿಷ್ಕಾರ

ಸಮಗ್ರ ನ್ಯೂಸ್: ಇ-ಬೈಕ್ ಪ್ರಾಜೆಕ್ಟ್‌ನ ಮುಖ್ಯ ಪರಿಕಲ್ಪನೆಯಲ್ಲಿ ಡ್ಯುಯಲ್ ಮೋಟಾರ್ ಅನ್ನು ಬಳಸಿಕೊಂಡು ಎಲೆಕ್ಟ್ರಿಕ್ ಬೈಕ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಕ್ಕಾಗಿ ಮಂಗಳೂರಿನ ಕೆಪಿಟಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಡ್ಯುಯಲ್ ಮೋಟಾರ್ ಇ ಬೈಕ್ ಅನ್ನು ಆವಿಷ್ಕಾರ ಮಾಡಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಹಬ್-ಮೋಟಾರ್ ಮತ್ತು ಮಿಡ್-ಡ್ರೈವ್ ಮೋಟರ್ ಹಬ್ ಮೋಟಾರ್ 30 % ಶಕ್ತಿಯನ್ನು ಹೊಂದಿದೆ ಆದರೆ ಮಧ್ಯದಲ್ಲಿ – ಡ್ರೈವ್ ಮೋಟಾರ್ 70% ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಮೋಟಾರುಗಳನ್ನು ನಿಯಂತ್ರಕಗಳಿಂದ ನಿರ್ವಹಿಸಲಾಗುತ್ತದೆ. ಡ್ಯುಯಲ್ ಮೋಟಾರ್

ಮಂಗಳೂರು: ಕೆಪಿಟಿ ವಿದ್ಯಾರ್ಥಿಗಳಿಂದ ಡ್ಯುಯಲ್ ಮೋಟಾರ್ ಇ ಬೈಕ್ ಆವಿಷ್ಕಾರ Read More »