August 2022

ಪ್ರವೀಣ್ ಹಂತಕರಿಗೆ ರಾಜಧಾನಿ ನಂಟು? ರಾತ್ರೋರಾತ್ರಿ ಬೆಂಗಳೂರಿನ ಇಬ್ಬರನ್ನು ಎತ್ತಾಕೊಂಡು ಬಂದ ಸುಳ್ಯ ಪೊಲೀಸರು!

ಸಮಗ್ರ ನ್ಯೂಸ್: ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಇಬ್ಬರು ಆರೋಪಿಗಳನ್ನು ಸುಳ್ಯ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಅಡಗಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಮಧ್ಯರಾತ್ರಿ ಅಪರೇಷನ್ ನಡೆಸಿ ವಶಕ್ಕೆ ಪಡೆದ ತಂಡ, ವಶಕ್ಕೆ ಪಡೆದು ಮಂಗಳೂರಿಗೆ ಕರೆದೊಯ್ಯಲಾಗಿದೆ. ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಸ್ಪೆಷಲ್ ಟೀಂ ನಿನ್ನೆ ಬೆಳಗ್ಗೆಯಿಂದಲೂ ಕಾರ್ಯಾಚರಣೆ ನಡೆಸಿದ್ದರು. ಶಂಕಿತರು ಇದ್ದ ಮನೆ ಸುತ್ತುವರೆದು ರಾತ್ರಿ ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಮಂಗಳೂರಿಗೆ ಕರೆದೊಯ್ದಿದ್ದಾರೆ. HRBR […]

ಪ್ರವೀಣ್ ಹಂತಕರಿಗೆ ರಾಜಧಾನಿ ನಂಟು? ರಾತ್ರೋರಾತ್ರಿ ಬೆಂಗಳೂರಿನ ಇಬ್ಬರನ್ನು ಎತ್ತಾಕೊಂಡು ಬಂದ ಸುಳ್ಯ ಪೊಲೀಸರು! Read More »

ವೈಟ್ ಲಿಪ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಪದಕ ಬೇಟೆಯಾಡಿದ ಅಚಿಂತಾ

ಸಮಗ್ರ ನ್ಯೂಸ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಅಚಿಂತಾ ಶೆಯುಲಿ ತನ್ನ ಗುರಿಯನ್ನು ಸಾಧಿಸಿದ್ದು, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಇದು ಭಾರತ ದೇಶಕ್ಕೆ ಬಂದ ಆರನೇ ಪದಕ ಹಾಗೂ ಮೂರನೇ ಚಿನ್ನದ ಪದಕವಾಗಿದೆ.

ವೈಟ್ ಲಿಪ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಪದಕ ಬೇಟೆಯಾಡಿದ ಅಚಿಂತಾ Read More »

ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥಾಪಕ ಟಿ.ಮೋಹನ್ ದಾಸ್ ಪೈ ಇನ್ನಿಲ್ಲ

ಸಮಗ್ರ ನ್ಯೂಸ್: ಪ್ರಖ್ಯಾತ ಪೈ ಕುಟುಂಬ ಸದಸ್ಯ ಹಾಗೂ ಹೆಸರಾಂತ ಪತ್ರಿಕೋದ್ಯಮಿಯಾಗಿದ್ದ ಟಿ ಮೋಹನದಾಸ್ ಪೈ ಭಾನುವಾರ ವಿಧಿವಶರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ತೋನ್ಸೆ ಮೋಹನದಾಸ್ ಪೈ(89) ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತಮ್ಮ ಕುಟುಂಬ ಸದಸ್ಯರಾದ ಡಾ. ಟಿ. ರಾಮದಾಸ್ ಪೈ, ಟಿ. ಅಶೋಕ್ ಪೈ, ನಾರಾಯಣ ಪೈ, ವಾಸಂತಿ ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸತೀಶ್ ಯು ಪೈ ಅವರನ್ನು ಟಿ ಮೋಹನದಾಸ್ ಪೈ ಅಗಲಿದ್ದಾರೆ. ಡಾ. ಟಿಎಂಎಂ ಪೈ ಫೌಂಡೇಶನ್, ಮಣಿಪಾಲ್

ಮಣಿಪಾಲ್ ಮೀಡಿಯಾ ನೆಟ್ವರ್ಕ್ ಸಂಸ್ಥಾಪಕ ಟಿ.ಮೋಹನ್ ದಾಸ್ ಪೈ ಇನ್ನಿಲ್ಲ Read More »

ಇಂದಿನಿಂದ ‌ಮೀನುಗಾರಿಕೆ‌ ಪರ್ವ ಶುರು| ಬಲೆ‌ ಬೀಸಲಿದ್ದಾರೆ ಕಡಲ‌ ಮಕ್ಕಳು|

ಸಮಗ್ರ ನ್ಯೂಸ್: ಮೀನುಗಾರಿಕೆಗೆ ಸರಕಾರ ವಿಧಿಸಿದ್ದ 61 ದಿನಗಳ ನಿಷೇಧ ಜು. 31ಕ್ಕೆ ಮುಕ್ತಾಯಗೊಂಡಿದ್ದು, ಆ. 1ರಿಂದ ದೋಣಿಗಳು ಸಮುದ್ರಕ್ಕಿಳಿಯಲಿವೆ. ಈ ನಿಟ್ಟಿನಲ್ಲಿ ಮೀನುಗಾರಿಕೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೀನುಗಾರಿಕೆಗೆ ಬೋಟು, ಎಂಜಿನ್‌ಗಳನ್ನು ದುರಸ್ತಿಗೊಳಿಸಿ ಬಲೆಗಳನ್ನು ಸಿದ್ಧಗೊಳಿಸಲಾಗಿದೆ. ಐಸ್‌ಪ್ಲಾಂಟ್‌ಗಳು ರವಿವಾರವೇ ಕಾರ್ಯಾರಂಭಿಸಿದ್ದು, ಕಡಲಿಗಿಳಿಯುವ ಬೋಟುಗಳಿಗೆ ಮಂಜುಗಡ್ಡೆ ತುಂಬಿಸಲಾಗುತ್ತಿದೆ. ಸರಕಾರದ ತೆರಿಗೆ ರಹಿತ ಡೀಸೆಲ್‌ ನೀಡುವ ಕಾರ್ಯ ಸೋಮವಾರದಿಂದ ಪ್ರಾರಂಭವಾಗಲಿದೆ. ಆಳಸಮುದ್ರಕ್ಕೆ ತೆರಳುವ ಬೋಟುಗಳಲ್ಲಿ 15 ದಿನಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತದೆ. ದೋಣಿಗಳ ಕಾರ್ಮಿಕರಲ್ಲಿ ಹೆಚ್ಚಿನವರು ಹೊರ

ಇಂದಿನಿಂದ ‌ಮೀನುಗಾರಿಕೆ‌ ಪರ್ವ ಶುರು| ಬಲೆ‌ ಬೀಸಲಿದ್ದಾರೆ ಕಡಲ‌ ಮಕ್ಕಳು| Read More »