ವಿದ್ಯಾರ್ಥಿನಿ ಕಾಲು ಜಾರಿ ರೈಲ್ವೆ ಹಳಿಗೆ ಬಿದ್ದು ರೈಲು ಹರಿದು ಸಾವು
ಹಾಸನ: ತಾಲೂಕಿನ ಅಂಕಪುರ ಗ್ರಾಮದ ಬಳಿ ಕಾಲು ಜಾರಿ ರೈಲ್ವೆ ಹಳಿ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ರೈಲು ಹರಿದಿರುವ ಘಟನೆಯೊಂದು ನಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಗುಡ್ಡೆ ತೆರಣ್ಯ ಗ್ರಾಮದ ಪ್ರೀತಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ಮೊಸಳೆ ಹೊಸಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿನಿ ಕಾಲು ಜಾರಿ ರೈಲ್ವೆ ಹಳಿಗೆ ಬಿದ್ದು ರೈಲು ಹರಿದು ಸಾವು Read More »