August 2022

ಭಾರೀ ಮಳೆ ಹಿನ್ನಲೆ; ಸುಳ್ಯ,ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆಆ.3ರಂದು ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ಮತ್ತು ‌ಕಡಬ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಭಯ ತಾಲೂಕಿನ ‌ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಆ.3ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಸುಳ್ಯ,ಕಡಬ ತಾಲೂಕಿನ ಶಾಲಾ ಕಾಲೇಜುಗಳಿಗೆಆ.3ರಂದು ರಜೆ Read More »

ರೆಸ್ಕ್ಯೂ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್| ನದಿಗೆ ಜಿಗಿದು ಪ್ರಾಣ ಉಳಿಸಿದ ಯುವಕ

ಸಮಗ್ರ ನ್ಯೂಸ್: ಸೇತುವೆಗೆ ಅಡ್ಡಲಾಗಿ ನಿಂತಿದ್ದ ಮರಗಳನ್ನು ಕ್ರೇನ್ ಮೂಲಕ ತೆರವುಗೊಳಿಸುವಾಗ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ನದಿಗೆ ಉರುಳಿದ್ದು, ಈ ವೇಳೆ ಯುವಕನೋರ್ವ ಆತನನ್ನು ರಕ್ಷಿಸಿದ ಘಟನೆ ಸುಳ್ಯ ತಾಲೂಕಿನ ಹರಿಹರಪಲ್ಲತ್ತಡ್ಕದಲ್ಲಿ ನಡೆದಿದೆ. ಕ್ರೇನ್ ಆಪರೇಟರ್ ಶರೀಪ್ ಎಂಬವರು ಇಲ್ಲಿನ ಸೇತುವೆಯ ಮೇಲೆ ಕ್ರೇನ್ ಮೂಲಕ ಮರದ ದಿಮ್ಮಿಗಳನ್ನು ತೆರವು ಮಾಡುತ್ತಿದ್ದರು. ಈ ವೇಳೆ ಅವರು ಆಯತಪ್ಪಿ ನದಿಗೆ ಬಿದ್ದಿದ್ದು‌ ಇದನ್ನು ಗಮನಿಸಿದ ಸ್ಥಳೀಯ ಸೋಮಶೇಖರ್ ಎಂಬವರು ನದಿಗೆ ಜಿಗಿದು ಆತನ ಪ್ರಾಣ ಉಳಿಸಿದ್ದಾರೆ.

ರೆಸ್ಕ್ಯೂ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದ ಕ್ರೇನ್ ಆಪರೇಟರ್| ನದಿಗೆ ಜಿಗಿದು ಪ್ರಾಣ ಉಳಿಸಿದ ಯುವಕ Read More »

ಕೇರಳ ಗಡಿಭಾಗದ ಸಿಸಿಟಿವಿಗಳು ಅದೆಷ್ಟು ಸೇಫ್?| ಕೇರಳ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಬಾರದೇಕೆ?

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಭಾಗದಲ್ಲಿ ಕಳೆದೊಂದು ವಾರದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಕೇರಳದ ಲಿಂಕ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಕೇರಳ ಗಡಿಭಾಗದಲ್ಲಿ ತಪಾಸಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದು, ಇರೋ ಬರೋ ವಾಹನಗಳನ್ನೆಲ್ಲಾ ತಪಾಸಣೆ ನಡೆಸುತ್ತಿದ್ದಾರೆ. ಒಂದೆಡೆ ಕ್ರಿಮಿನಲ್ ಗಳ ಕುರಿತು ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದ್ದು ಇದು ಎಷ್ಟು ಸೇಫ್ ಎಂಬ ಪ್ರಶ್ನೆ ಉಧ್ಬವಿಸಿದೆ.

ಕೇರಳ ಗಡಿಭಾಗದ ಸಿಸಿಟಿವಿಗಳು ಅದೆಷ್ಟು ಸೇಫ್?| ಕೇರಳ ಮಾದರಿಯನ್ನು ಕರ್ನಾಟಕದಲ್ಲಿ ಅಳವಡಿಸಬಾರದೇಕೆ? Read More »

ದ.ಕ ದಲ್ಲಿ ಮತ್ತೆರಡು ದಿನ ನಿರ್ಬಂಧ ವಿಸ್ತರಣೆ;

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳನ್ನು ಎರಡು ದಿನಗಳ ಕಾಲ ವಿಸ್ತರಿಸಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಜುಲೈ 29 ರಂದು ಫಾಝಿಲ್ ಹತ್ಯೆಯ ಹಿನ್ನೆಲೆಯಲ್ಲಿ, ಆಗಸ್ಟ್ 3 ರವರೆಗೆ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ನಗರ ಪೊಲೀಸ್ ಅಧಿಕಾರಿಗಳ ಮನವಿಗೆ ಅನುಗುಣವಾಗಿ ಈಗ ಆಗಸ್ಟ್ 5 ರವರೆಗೆ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು

ದ.ಕ ದಲ್ಲಿ ಮತ್ತೆರಡು ದಿನ ನಿರ್ಬಂಧ ವಿಸ್ತರಣೆ; Read More »

ಸುರತ್ಕಲ್: ಫಾಝಿಲ್ ಹಂತಕರು ಖಾಕಿ ಬಲೆಗೆ|6 ಮಂದಿ ಆರೋಪಿಗಳು ಅಂದರ್| ಕೊಲೆಯ ಹಿಂದಿದೆ ರೋಚಕ ಕಹಾನಿ

ಸಮಗ್ರ ನ್ಯೂಸ್: ಸುರತ್ಕಲ್‌ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣವನ್ನು ಕೊನೆಗೂ ಭೇದಿಸಿದ ಮಂಗಳೂರು ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಮತ್ತಷ್ಟು ಜನರ ಹತ್ಯೆಗೆ ಪಟ್ಟಿ ಸಿದ್ಧಪಡಿಸಿದ್ದರು ಎಂಬ ಆಘಾತಕಾರಿ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಜಿತ್(31) ಸುಹಾಸ್ ಶೆಟ್ಟಿ (29) ಮಹೋನ್ (26) ಗಿರಿಧರ್ (23) ಅಭಿಷೇಕ್ (21) ಶ್ರೀನಿವಾಸ್ (23) ದೀಕ್ಷಿತ್ (21) ಬಂಧಿತ ಆರೋಪಿಗಳು . ಪ್ರಕರಣದಲ್ಲಿ ಮತ್ತಷ್ಟು ಜನರು ಭಾಗಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು,

ಸುರತ್ಕಲ್: ಫಾಝಿಲ್ ಹಂತಕರು ಖಾಕಿ ಬಲೆಗೆ|6 ಮಂದಿ ಆರೋಪಿಗಳು ಅಂದರ್| ಕೊಲೆಯ ಹಿಂದಿದೆ ರೋಚಕ ಕಹಾನಿ Read More »

ಖಾಸಗಿ ಬಸ್ ಮತ್ತು ಓಮ್ನಿ ಡಿಕ್ಕಿ; ನಾಲ್ವರು ಸಾವು,ಮೂವರಿಗೆ ಗಾಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಸಮೀಪ ಖಾಸಗಿ ಬಸ್ ಮತ್ತು ಓಮ್ನಿ ನಡುವೆ ಅಪಘಾತ ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಳಗುಪ್ಪ ಸಮೀಪದ ಬಳೆಗಾರು ಬಳಿ ಅಪಘಾತ ಸಂಭವಿಸಿದೆ. ಮೃತಪಟ್ಟವರು ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದವರು. ಜೋಗ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಬಸ್ ಚಾಲಕ

ಖಾಸಗಿ ಬಸ್ ಮತ್ತು ಓಮ್ನಿ ಡಿಕ್ಕಿ; ನಾಲ್ವರು ಸಾವು,ಮೂವರಿಗೆ ಗಾಯ Read More »

ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ

ತೀರ್ಥಹಳ್ಳಿ: ಆಗುಂಬೆ ಸಮೀಪದ ನೇರಲಕೊಡಿಗೆ ಗ್ರಾಮದ ಸಮೀಪ ಸೋಮವಾರ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭಾವೀಕೆರೆ ನಿವಾಸಿ ರಾಮನಾಯ್ಕ (68) ಅವರು ಮಂಗಳೂರಿನ ವೆನ್‌ಲಾಕ್‌ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಮೃತದೇಹ ಸಾಗಿಸುತ್ತಿದ್ದಾಗ ಘಟನೆ ನಡೆದಿದೆ. ಆಂಬುಲೆನ್ಸ್‌ನಲ್ಲಿದ್ದ ರಾಮಾನಾಯ್ಕ ಅವರ ಮಗಳು, ಸಂಬಂಧಿಕರು ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮೃತದೇಹ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ Read More »

ಎಚ್.ಡಿ. ಕೆ ಅವರ ಬೆಂಗಾವಲು ವಾಹನ ಅಪಘಾತ; 3 ಪೋಲಿಸ್ ಸಿಬ್ಬಂದಿ ಗೆ ಗಾಯ

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಮೂವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಕುಣಿಗಲ್ ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೆಂಗಾವಲು ವಾಹನ ರಸ್ತೆಯ ತಡೆಗೋಡೆಗೆ ಗುದ್ದಿ ರಸ್ತೆಯಿಂದಾಚೆಗೆ ನುಗ್ಗಿದೆ. ಪರಿಣಾಮ ವಾಹನದಲ್ಲಿದ್ದ ಐವರಲ್ಲಿ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಲಿಸ್ ಸಿಬ್ಬಂದಿ ಮಹೇಶ್, ಮಂಜುನಾಥ್ ಹಾಗೂ ಆನಂದ್ ಹರೀಶ್​ ಎಂಬವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಮೃತ್ತೂರು

ಎಚ್.ಡಿ. ಕೆ ಅವರ ಬೆಂಗಾವಲು ವಾಹನ ಅಪಘಾತ; 3 ಪೋಲಿಸ್ ಸಿಬ್ಬಂದಿ ಗೆ ಗಾಯ Read More »

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧ

ಸುಬ್ರಹ್ಮಣ್ಯ : ಸೋಮವಾರ ಸುರಿದ ಧಾರಾಕಾರ ಮಳೆಯಿಂದಾಗಿ ದರ್ಪಣತೀರ್ಥ ನದಿಯು ತುಂಬಿ ಹರಿದಿದ್ದು, ಕುಕ್ಕೆಯ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದೆ. ಹೀಗಾಗಿ ಕುಕ್ಕೆ ದೇಗುಲಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಭಕ್ತರು ಸಹಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕೋರಿದ್ದಾರೆ. ಕುಕ್ಕೆ ದೇವಳದ ಸಮೀಪ ಇರುವ ದರ್ಪಣತೀರ್ಥ ನದಿಯ ಸ್ನಾನ ಘಟ್ಟವು ಮುಳುಗಡೆಯಾಗಿದೆ. ಸಮೀಪದ ರುದ್ರಪಾದ ಸೇತುವೆಯು ಜಲಾವೃತಗೊಂಡಿದೆ. ಈ ಮಧ್ಯೆ ಸುಬ್ರಹ್ಮಣ್ಯ- ಪುತ್ತೂರು- ಮಂಜೇಶ್ವರ ಅಂತರರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆಯಾಗುವ ಸಾಧ್ಯತೆ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಎರಡು ದಿನ ಭಕ್ತರಿಗೆ ಪ್ರವೇಶ ನಿಷೇಧ Read More »

ಪ್ರವೀಣ್ ಹತ್ಯೆ ಪ್ರಕರಣ; ಮತ್ತಿಬ್ಬರು ಆರೋಪಿಗಳು ಅಂದರ್

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಹತ್ಯೆಗೆ ಬಳಸಲಾಗಿದ್ದ ತಲ್ವಾರ್ ಮತ್ತು ಬೈಕ್ ವಶಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ಜುಲೈ 28 ರಂದು ಶಫೀಕ್ ಮತ್ತು ಜಾಕೀರ್ ಅವರನ್ನು ಬಂಧಿಸಲಾಗಿತ್ತು. ಶಂಕಿತ ಸಂಚುಕೋರರು, ಹಲ್ಲೆಕೋರರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಇವರು ಹತ್ಯೆಗೆ ಬಳಸಲಾಗಿದ್ದ ತಲ್ವಾರ್ ಮತ್ತು ಬೈಕ್ ವಶಕ್ಕೆ

ಪ್ರವೀಣ್ ಹತ್ಯೆ ಪ್ರಕರಣ; ಮತ್ತಿಬ್ಬರು ಆರೋಪಿಗಳು ಅಂದರ್ Read More »