August 2022

ಸುಳ್ಯ:ಪ್ರವೀಣ್ ಹತ್ಯೆಯಾಗಿ ವಾರಕಳೆದರೂ ಪತ್ತೆಯಾಗದ ಪ್ರಮುಖ ಹಂತಕರು| ತನಿಖಾ ಅಖಾಡಕ್ಕೆ ಜಿಗಿದ ಎನ್ಐಎ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬೆಳ್ಳಾರೆಯಲ್ಲಿ ಜು.26ರಂದು ರಾತ್ರಿ ನಡೆದಿದ್ದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಓರ್ವ ಆರೋಪಿಯ ಪೊಲೀಸ್ ಕಸ್ಟಡಿ ಅವಧಿಯನ್ನು 5 ದಿನ ವಿಸ್ತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಾದ ಸವಣೂರಿನ ಝಾಕಿರ್ ಮತ್ತು ಬೆಳ್ಳಾರೆ ಪೇಟೆ ನಿವಾಸಿ ಶಫೀಕ್‌ನನ್ನು ಆ.2ರಂದು ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಬೆಳ್ಳಾರೆ ಪೊಲೀಸರು ಆರೋಪಿ ಶಫೀಕ್‌ ನ್ನು ಮತ್ತೆ ತಮ್ಮ […]

ಸುಳ್ಯ:ಪ್ರವೀಣ್ ಹತ್ಯೆಯಾಗಿ ವಾರಕಳೆದರೂ ಪತ್ತೆಯಾಗದ ಪ್ರಮುಖ ಹಂತಕರು| ತನಿಖಾ ಅಖಾಡಕ್ಕೆ ಜಿಗಿದ ಎನ್ಐಎ Read More »

ಕೇವಲ 28 ಸೆ.ಮೀ. ಮಳೆ ; ಇಷ್ಟಕ್ಕೇ ಪ್ರಕೃತಿ ಮುನಿದಿದ್ದು ಯಾಕೆ ? ಯಾರೋ ಮಾಡಿದ ಕರ್ಮಕ್ಕೆ ಇನ್ಯಾರೋ ಬಲಿಪಶು !! ಪಶ್ಚಿಮ ಘಟ್ಟಗಳಲ್ಲಿ ಬಿರುಕು, ಗೀರು ಗಾಯಕ್ಕೆ ಹೊಣೆ ಯಾರು ? ರಾಜಕಾರಣಿಗಳ ತೀಟೆಗೆ ಜನಸಾಮಾನ್ಯರ ಬಲಿಯೇ?

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಇತಿಹಾಸ ಕಂಡು ಕೇಳರಿಯದ ರೀತಿ ಮಳೆಯಾಗಿದೆ ಅಂದ್ರೆ ತಪ್ಪು ಹೇಳಿದಂತಾಗುತ್ತದೆ. ಆಗಸ್ಟ್ 1ರ ಸೋಮವಾರ ಒಂದೇ ದಿನ ಬಿದ್ದ ಮಳೆ 28 ಸೆಂಟಿ ಮೀಟರ್. ಆದರೆ ಅಷ್ಟಕ್ಕೇ ಸುಬ್ರಹ್ಮಣ್ಯ ಆಸುಪಾಸಿನ ಗ್ರಾಮಗಳಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ 28 ಸೆಂಟಿ ಮೀಟರ್ ಮಳೆಯಾಗಿದ್ದರೆ, ಸಂಪಾಜೆ, ಕಲ್ಲುಗುಂಡಿ ಆಸುಪಾಸಿನಲ್ಲಿ 140 ಸೆಂಟಿ ಮೀಟರ್ ಮಳೆ ಬಿದ್ದಿದೆ. ಇದೇ ವೇಳೆ, ಭಟ್ಕಳ ಆಸುಪಾಸಿನಲ್ಲಿ 50 ಸೆಂಟಿ ಮೀಟರ್ ಮಳೆಯಾಗಿದೆ.

ಕೇವಲ 28 ಸೆ.ಮೀ. ಮಳೆ ; ಇಷ್ಟಕ್ಕೇ ಪ್ರಕೃತಿ ಮುನಿದಿದ್ದು ಯಾಕೆ ? ಯಾರೋ ಮಾಡಿದ ಕರ್ಮಕ್ಕೆ ಇನ್ಯಾರೋ ಬಲಿಪಶು !! ಪಶ್ಚಿಮ ಘಟ್ಟಗಳಲ್ಲಿ ಬಿರುಕು, ಗೀರು ಗಾಯಕ್ಕೆ ಹೊಣೆ ಯಾರು ? ರಾಜಕಾರಣಿಗಳ ತೀಟೆಗೆ ಜನಸಾಮಾನ್ಯರ ಬಲಿಯೇ? Read More »

ಭಾರಿ ಮಳೆ ಹಿನ್ನೆಲೆ; ಸಂಪಾಜೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಭಾರೀ ಮಳೆ ಮತ್ತು ಭೂಕುಸಿತ ಹಿನ್ನೆಲೆಯಲ್ಲಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಘನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಂಪಾಜೆ ಘಾಟ್ ನ ಕೊಯನಾಡು, ದೇವರಕೊಲ್ಲಿ, ಮದೆನಾಡು ಭಾಗಗಳಲ್ಲಿ ರಸ್ತೆ ಮಧ್ಯೆ ಬಿರುಕು ಕಂಡುಬಂದಿದ್ದು, ಇದರಿಂದಾಗಿ ಘನ ವಾಹನ ಸಂಚಾರ ನಿರ್ಭಂಧಿಸಲಾಗಿದೆ. ಬಸ್, ಹಾಗೂ ಲಘುವಾಹನಗಳಿಗಷ್ಟೇ ಸಂಚಾರ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.

ಭಾರಿ ಮಳೆ ಹಿನ್ನೆಲೆ; ಸಂಪಾಜೆ ಘಾಟ್ ನಲ್ಲಿ ಘನ ವಾಹನ ಸಂಚಾರಕ್ಕೆ ನಿರ್ಬಂಧ Read More »

ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಯಾಗಲಿ : ಪಿಎಫ್ಐ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ನಡೆದ ಯುವಕರ ಸರಣಿ ಕೊಲೆಗಳ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಪಿಎಫ್ಐ ರಾಜ್ಯ ಕಾರ್ಯಕಾರಿಣಿ ಆಗ್ರಹಿಸಿದೆ. ಕರಾವಳಿ ಕರ್ನಾಟಕದಲ್ಲಿ ಕೆಲ ದಿನಗಳ ಹಿಂದೆ 10 ದಿನಗಳ ಅಂತರದಲ್ಲಿ ಮೂವರು ಯುವಕರ ಹತ್ಯೆ ನಡೆದಿದೆ. ಈ ಎಲ್ಲಾ ಕೊಲೆ ಪ್ರಕರಣಗಳನ್ನು ಸಮಾನವಾಗಿ ಹಾಗೂ ಗಂಭೀರವಾಗಿ ಪರಿಗಣಿಸಬೇಕಾಗಿದ್ದ ಬಿಜೆಪಿ ಸರಕಾರ ತನ್ನ ಪಕ್ಷದ ಕಾರ್ಯಕರ್ತನ ಕೊಲೆಗೆ ಮಾತ್ರ ಅತಿಯಾದ ಪ್ರಾಮುಖ್ಯತೆ ನೀಡುತ್ತಿದೆ ಮತ್ತು ಸಂಘ ಪರಿವಾರ ನಡೆಸಿದ ಅಮಾಯಕ ಮುಸ್ಲಿಮ್ ಯುವಕರ ಹತ್ಯೆ ಘಟನೆಗಳನ್ನು ಕ್ಷುಲ್ಲಕವಾಗಿ

ಕರಾವಳಿಯಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ನಿಷ್ಪಕ್ಷಪಾತ ತನಿಖೆಯಾಗಲಿ : ಪಿಎಫ್ಐ Read More »

ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್| ಆ.4 ಮತ್ತು 5ಕ್ಕೆ ಭಾರೀ ಮಳೆ ಸಂಭವ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮಳೆ ಬಿರುಸು ಪಡೆದಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಇಂದು ಮತ್ತು ನಾಳೆ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಶಿವಮೊಗ್ಗ, ಹಾಸನ, ತುಮಕೂರು, ಹಾವೇರಿ, ಬೆಳಗಾವಿ,

ಕರಾವಳಿ, ಮಲೆನಾಡಿಗೆ ರೆಡ್ ಅಲರ್ಟ್| ಆ.4 ಮತ್ತು 5ಕ್ಕೆ ಭಾರೀ ಮಳೆ ಸಂಭವ Read More »

ಭಾರೀ ಮಳೆ ಹಿನ್ನಲೆ; ಸುಳ್ಯ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಆ.4 ರಂದು ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ‌ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಆ.4ರಂದು ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ‌ ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನಲೆ; ಸುಳ್ಯ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಆ.4 ರಂದು ರಜೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಮತ್ತಿಬ್ಬರು ಆರೋಪಿಗಳಿಗೆ ಎಸ್ಡಿಪಿಐ ಲಿಂಕ್

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿಸಿರುವ ಝಾಕೀರ್ ಹಾಗೂ ಶಫೀಕ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಆ.3ರಂದು ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಅಬ್ದುಲ್ ಹ್ಯಾರಿಸ್, ಶೇಕ್ ಸದ್ದಾಂ ಹುಸೇನ್ ಜೊತಗೆ ಝಾಕೀರ್ ಗೆ ಆ.12ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಪೊಲೀಸರ ಕೋರಿಕೆಯ ಮೇರೆಗೆ ಶಫೀಕ್ ನನ್ನು ಆ. 06ರ ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆರೋಪಿಗಳಾದ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಮತ್ತಿಬ್ಬರು ಆರೋಪಿಗಳಿಗೆ ಎಸ್ಡಿಪಿಐ ಲಿಂಕ್ Read More »

ಕುಕ್ಕೆ ಸುಬ್ರಹ್ಮಣ್ಯ: ಮಳೆಹಾನಿ ಪ್ರದೇಶಕ್ಕೆ ಉಸ್ತುವಾರಿ ಸಚಿವ ಸುನಿಲ್‌ಕುಮಾರ್ ಭೇಟಿ| ಪರಿಹಾರದ ಭರವಸೆ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಮೃತಪಟ್ಟ ಮಕ್ಕಳ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ರವರು ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು ಮನೆಗಾಗಿ ಈಗಾಗಲೇ 95 ಸಾವಿರ ನೀಡಿದ್ದೇವೆ. ಇನ್ನು ಮನೆ ಕಟ್ಟುವುದಿದ್ದಲ್ಲಿ ಮತ್ತೆ 4 ಲಕ್ಷ ಕೊಡಲಾಗುವುದು, ಅಂಗಡಿಗಳಿಗೆ ನೀರು ನುಗ್ಗಿ ಹಾನಿ ಯಾಗಿದ್ದರೆ ಹಣ ಕೊಡುವ ಪ್ರಾವಿಶನ್ ಇಲ್ಲ, ಆದರೂ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಣೆ ನೀಡಿ ಅಂಗಡಿಗಳಿಗೂ ಪರಿಹಾರ

ಕುಕ್ಕೆ ಸುಬ್ರಹ್ಮಣ್ಯ: ಮಳೆಹಾನಿ ಪ್ರದೇಶಕ್ಕೆ ಉಸ್ತುವಾರಿ ಸಚಿವ ಸುನಿಲ್‌ಕುಮಾರ್ ಭೇಟಿ| ಪರಿಹಾರದ ಭರವಸೆ Read More »

ರಾತ್ರಿ ಮಲಗಿದ್ದ ವೇಳೆ ಎಸಿ ಸ್ಫೋಟ; ನವ ವಿವಾಹಿತ ಸಾವು

ಚೆನ್ನೈ (ತಮಿಳುನಾಡು): ಮನೆಯಲ್ಲಿ ರಾತ್ರಿ ಮಲಗಿದ್ದಾಗ ಎಸಿ ಸ್ಫೋಟಗೊಂಡು ನವ ವಿವಾಹಿತ ಸಾವನ್ನಪ್ಪಿದ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 28 ವರ್ಷದ ಶ್ಯಾಮ್​ ಎಂಬಾತ ಮೃತ ದುರ್ದೈವಿ. ಇಲ್ಲಿನ ಪೆರಂಬೂರ್​ನ ಮನವಲನ್​ ಬಡಾವಣೆಯ ನಿವಾಸಿಯಾದ ಶ್ಯಾಮ್​ ತಮ್ಮ ಮನೆಯ ಕೆಳ ಮಹಡಿಯಲ್ಲಿ ರವಿವಾರ ಮಲಗಿದ್ದರು. ತಂದೆ ಪ್ರಭಾಕರನ್​ ಮೇಲ್ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಆದರೆ, ರಾತ್ರಿ ಕೆಳ ಮಹಡಿಯಿಂದ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ತಂದೆ ಕೆಳಗಡೆ ಓಡಿ ಬಂದಿದ್ದಾರೆ. ಆಗ ದಟ್ಟ ಹೊಗೆ ಆವರಿಸಿದ್ದನ್ನು ಕಂಡ ಪ್ರಭಾಕರನ್​ ಬಾಗಿಲು

ರಾತ್ರಿ ಮಲಗಿದ್ದ ವೇಳೆ ಎಸಿ ಸ್ಫೋಟ; ನವ ವಿವಾಹಿತ ಸಾವು Read More »

ಸಿದ್ದರಾಮಯ್ಯ ಅವರ ಕಾರ್ಯಕ್ರಮ ಕ್ಕೆ ಬರುತ್ತಿದ್ದ ಕಾರ್ಯಕರ್ತನ ವಾಹನ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಾಯ

ಬಾಗಲಕೋಟೆ : ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದ ನಿಮಿತ್ತ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜಿಲ್ಲೆಯ ಕಾರ್ಯಕರ್ತರ ವಾಹನ ಅಪಘಾತಕ್ಕೆ ಈಡಾಗಿದ್ದು, ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು ನಾಲ್ವರು ಗಾಯಗೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಮುಧೋಳ ತಾಲೂಕಿನ ಆಲಗುಂಡಿ ಗ್ರಾಮದ, ಕ್ರೂಸರ್ ವಾಹನ ಚಾಲಕ ಪ್ರಕಾಶ ಬಡಿಗೇರ ಎಂದು ಗುರುತಿಸಲಾಗಿದ್ದು, ಗಾಯಗೊಂಡ ವ್ಯಕ್ತಿಗಳನ್ನು ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲಗುಂಡಿ ಗ್ರಾಮದ ಸುಮಾರು 15ಕ್ಕೂ ಹೆಚ್ಚು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕ್ರೂಸರ್ ವಾಹನದ ಮೂಲಕ

ಸಿದ್ದರಾಮಯ್ಯ ಅವರ ಕಾರ್ಯಕ್ರಮ ಕ್ಕೆ ಬರುತ್ತಿದ್ದ ಕಾರ್ಯಕರ್ತನ ವಾಹನ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಾಯ Read More »