August 2022

ಚಿಕ್ಕಮಗಳೂರು: ನಾಳೆಯಿಂದ 3 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ; ಜಿಲ್ಲಾಡಳಿತದಿಂದ ಕಟ್ಟೆಚ್ಚರ

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಾಳೆಯಿಂದ 3 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ಹಾಗಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್ 5 ಮತ್ತು 7 ರಂದು ಆರೆಂಜ್ ಅಲರ್ಟ್ ಘೋಷಣೆ ಮತ್ತು ಆಗಸ್ಟ್ 6ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದೇ ರೀತಿ ನದಿ ಮತ್ತು ತಗ್ಗು ಪ್ರದೇಶದ ಜನ ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಅಪರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು: ನಾಳೆಯಿಂದ 3 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ; ಜಿಲ್ಲಾಡಳಿತದಿಂದ ಕಟ್ಟೆಚ್ಚರ Read More »

ಪ್ರವೀಣ್ ಹಂತಕರನ್ನು ಟ್ರೇಸ್ ಮಾಡ್ತಿದ್ದೇವೆ, ಅಮಾಯಕರನ್ನು ಬಂಧಿಸಲ್ಲ – ಎಡಿಜಿಪಿ ಅಲೋಕ್ ಕುಮಾರ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಹತ್ಯೆ ನಡೆಸಿದವರು ಯಾರೆಂದು ಗೊತ್ತಾಗಿದೆ. ಅವರನ್ನು ಹಿಡಿದೇ ಹಿಡಿಯುತ್ತೇವೆ. ಜೊತೆಗೆ ಅದರ ಹಿಂದಿರುವ ತಂಡದ ಬಗ್ಗೆಯೂ ಮಾಹಿತಿ ಇದೆ, ನಾವು ಟ್ರೇಸ್ ಮಾಡ್ತೀವಿ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾವು ಮೂವರನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರಮುಖ ಮಾಹಿತಿಗಳು ಸಿಕ್ಕಿವೆ. ಅಮಾಯಕರನ್ನು ನಾವು ಬಂಧನ ಮಾಡಲ್ಲ. ಯಾರು ಶಾಮೀಲಾತಿ ಹೊಂದಿದ್ದಾರೋ ಅವರನ್ನು ಬಂಧಿಸುತ್ತೇವೆ. ಸಂಚುಕೋರರು ಯಾರು ಅನ್ನೋದು ಗೊತ್ತಾಗಿದೆ. ಯಾರು

ಪ್ರವೀಣ್ ಹಂತಕರನ್ನು ಟ್ರೇಸ್ ಮಾಡ್ತಿದ್ದೇವೆ, ಅಮಾಯಕರನ್ನು ಬಂಧಿಸಲ್ಲ – ಎಡಿಜಿಪಿ ಅಲೋಕ್ ಕುಮಾರ್ Read More »

ಮಂಗಳೂರು: ದ.ಕ ಜಿಲ್ಲೆಯಲ್ಲಿ ವ್ಯಾಪಾರ ‌ನಿರ್ಬಂಧ‌ಕೊಂಚ ಸಡಿಲಿಕೆ| ಆ.5ರಿಂದ ರಾತ್ರಿ 9 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹೇರಲಾಗಿದ್ದ ನಿರ್ಬಂಧ ಕ್ರಮಗಳನ್ನು ಆ. 5 ರಿಂದ ಮುಂದಿನ ಮೂರು ದಿನಗಳ ಕಾಲ ಕೊಂಚ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ. ನಾಳೆಯಿಂದ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9 ರವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು, ಮದ್ಯದಂಗಡಿಗಳನ್ನು ನಾಳೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ. 144 ಸೆಕ್ಷನ್ ಅಡಿಯಲ್ಲಿ ವಿಧಿಸಲಾದ ನಿಷೇಧಾಜ್ಞೆ ಹಾಗೂ ಇತರ ನಿರ್ಬಂಧಗಳು ಮೊದಲಿನಂತೆಯೇ ಮುಂದುವರಿಯಲಿದೆ.

ಮಂಗಳೂರು: ದ.ಕ ಜಿಲ್ಲೆಯಲ್ಲಿ ವ್ಯಾಪಾರ ‌ನಿರ್ಬಂಧ‌ಕೊಂಚ ಸಡಿಲಿಕೆ| ಆ.5ರಿಂದ ರಾತ್ರಿ 9 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ Read More »

ಮಂಗಳೂರು: ನಾಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ- ಎಡಿಜಿಪಿ

ಸಮಗ್ರ ನ್ಯೂಸ್: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನಲ್ಲಿ ತಿಳಿಸಿದ್ದಾರೆ. ಹದಿನೆಂಟು ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಈ ನಿಯಮದಿಂದ ರಿಯಾಯಿತಿ ನೀಡಲಾಗಿದೆ. ಕೇವಲ ಪುರುಷ ಹಿಂಬದಿ ಸವಾರರಿಗೆ ಮಾತ್ರ ಈ ನಿಯಮ ಅನ್ವಯಿಸಲಿದೆ. ಮುಂದಿನ ಒಂದು ವಾರದ ಮಟ್ಟಿಗೆ ಜಿಲ್ಲೆಯಲ್ಲಿ ಈ ನಿಯಮವನ್ನು ಪಾಲನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಕೆಲವು ಬಾರಿ ಹಿಂಬದಿ

ಮಂಗಳೂರು: ನಾಳೆಯಿಂದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ- ಎಡಿಜಿಪಿ Read More »

ಸುಳ್ಯ: ಭಾರೀ ಮಳೆಗೆ ಕೊಚ್ಚಿ ಹೋದ ಬೆದ್ರು ಪಣೆಯ ಸೇತುವೆ

ಸುಳ್ಯ : ಆ.3ರ ಸಂಜೆ ಸುರಿದ ಬಾರೀ ಮಳೆಗೆ ಅರಂತೋಡು ಗ್ರಾಮದ ಬೆದ್ರು ಪಣೆಯಲ್ಲಿನ ಸೇತುವೆಯ ಒಂದು ಬದಿಯ ತಡೆಗೋಡೆ ಮತ್ತು ಮಣ್ಣು ನೀರಿನಲ್ಲಿ ಕೊಚ್ಚಿ ಹೋಗಿ ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ. ಇದರಿಂದಾಗಿ ಹೊಳೆಯ ಇನ್ನೊಂದು ಬದಿಯ ಹಲವಾರು ಮನೆಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೊಳೆ ದಾಟಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆ ಬೆಳಕಿಗೆ ಬಂದ ಕೂಡಲೇ ಅಡ್ತಲೆಯ ನಾಗರಿಕ ಹಿತರಕ್ಷಣಾ ವೇದಿಕೆಯ ಸದಸ್ಯರು ಕೂಡಲೇ ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಅಡಿಕೆ ಮರದ ಪಾಲ

ಸುಳ್ಯ: ಭಾರೀ ಮಳೆಗೆ ಕೊಚ್ಚಿ ಹೋದ ಬೆದ್ರು ಪಣೆಯ ಸೇತುವೆ Read More »

ಬೈಕ್ ಮತ್ತು ಲಾರಿ ನಡುವೆ ಅಪಘಾತ; ಮೂವರು ಸಾವು

ಮೈಸೂರು:  ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟ ಘಟನೆಯೊಂದು ಎಚ್.ಡಿ.ಕೋಟೆ ತಾಲೂಕಿನ ಭೀಮನಹಳ್ಳಿ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಚಿಕ್ಕಲೇಗೋವಡಪುರ ನಿವಾಸಿಗಳಾದ ಸಣ್ಣಸ್ವಾಮಿ, ಪ್ರಭು, ಮಹೇಶ ಎಂದು ಗುರುತಿಸಲಾಗಿದೆ. ಹುಣಸೂರಿನಿಂದ ಎಚ್.ಡಿ.ಕೋಟೆ ಕಡೆಗೆ ಬೈಕಿನಲ್ಲಿ ಮೂವರು ಬರುತ್ತಿದ್ದರು ಎಂದು ಹೇಳಲಾಗುತ್ತಿದೆ. ಬೈಕ್ ನಲ್ಲಿದ್ದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹಗಳನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಬೈಕ್ ಮತ್ತು ಲಾರಿ ನಡುವೆ ಅಪಘಾತ; ಮೂವರು ಸಾವು Read More »

ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ 2022-23ನೇ ಸಾಲಿನಲ್ಲಿ ಹೊಸದಾಗಿ 6,601 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಅನುಮತಿ ನೀಡಿ ಆದೇಶಿಸಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೂಚಿಸಿರುವಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 6601 ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲು ಆದೇಶಿಸಲಾಗಿರುತ್ತದೆ ಎಂದಿದ್ದಾರೆ. ಈ ಆದೇಶದ ಅನ್ವಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ 20 ಕೊಠಡಿಗಳಂತೆ

ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ Read More »

ಕೇರಳದ ಪಾಲಕ್ಕಾಡ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಾಗ್ರಿ ಪತ್ತೆ

ಕೇರಳ: ಇಲ್ಲಿನ ಪಾಲಕ್ಕಾಡ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದೆ. ಪಾಲಕ್ಕಾಡ್‌ ಜಿಲ್ಲೆಯ ಒಂಗಲ್ಲೂರ್ ಪಟ್ಟಣದ ನಿವಾಸಿಗಳು ಈ ಪ್ರದೇಶದಲ್ಲಿ ಕ್ವಾರಿಯೊಂದರ ಬಳಿ ಸ್ಫೋಟಕಗಳ ದೊಡ್ಡ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಬುಧವಾರದಂದು ಘಟನೆ ಬೆಳಕಿಗೆ ಬಂದಿದೆ.ಪ್ರತಿ ಬಾಕ್ಸ್‌ನಲ್ಲಿ 200 ಸ್ಟಿಕ್‌ಗಳಂತೆ 40 ಬಾಕ್ಸ್‌ಗಳಲ್ಲಿ ಸುಮಾರು 8,000 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಅಕ್ಕಪಕ್ಕದ ನಿವಾಸಿಗಳು ಇದನ್ನು ಗಮನಿಸಿ ಶೋರನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಫೋಟಕಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ

ಕೇರಳದ ಪಾಲಕ್ಕಾಡ್ ನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಸಾಮಾಗ್ರಿ ಪತ್ತೆ Read More »

ಜಾರಿ ಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತ

ಹುಬ್ಬಳ್ಳಿ: ಬೆಳಗ್ಗೆ ಸ್ನಾನ ಮಾಡಲು ಹೋದಾಗ ಸಂಧರ್ಭದಲ್ಲಿ ಜಾರಿಬಿದ್ದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ. ಹುಬ್ಬಳ್ಳಿಯ ಸರ್ಕಿಟ್ ಹೌಸ್​ನಲ್ಲಿ ಬೆಳ್ಳಂಬೆಳಗ್ಗೆ ಘಟನೆ ನಡೆದಿದೆ. ಸ್ನಾನ ಮಾಡಲು ಹೋದಾಗ ಜಾರಿಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತಗೊಂಡಿದೆ. ಶಾಸಕರು ಬೆಂಬಲಿಗರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಾಸಕ ಎಂ.ವೈ.ಪಾಟೀಲ್ ನಿನ್ನೆಯಷ್ಟೇ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ತೆರಳಿದ್ದರು. ವಾಪಸ್​ ಊರಿಗೆ ತೆರಳುವ ಸಲುವಾಗಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ

ಜಾರಿ ಬಿದ್ದು ಶಾಸಕ ಎಂ.ವೈ.ಪಾಟೀಲ್ ಕಾಲು ಮುರಿತ Read More »

ಸ್ಕೇಟಿಂಗ್ ಮೂಲಕ ಕಾಶ್ಮೀರ ಕ್ಕೆ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತ ದಲ್ಲಿ ಬಲಿ

ಬೆಂಗಳೂರು: ಸ್ಕೇಟಿಂಗ್ ಬಗ್ಗೆ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಕೇರಳದ ಅನಾಸ್ ಹಜಾಸ್(31) ಮೇ 29ರಂದು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಸ್ಕೇಟಿಂಗ್ ಮೂಲಕವೇ 3,700 ಕಿ.ಮೀ. ದೂರ ಕ್ರಮಿಸುವುದು ಅವರ ಗುರಿಯಾಗಿತ್ತು. ಹರಿಯಾಣ ತಲುಪಿದ್ದ ಅನಾಸ್, ಅಲ್ಲಿನ ಕಾಲ್ಕಾದಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಅವರಿಗೆ ಟ್ರಕ್ ಬಡಿದಿತ್ತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಕೇಟಿಂಗ್ ಮೂಲಕ ಕಾಶ್ಮೀರ ಕ್ಕೆ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತ ದಲ್ಲಿ ಬಲಿ Read More »