August 2022

ರಾಜ್ಯದಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿಲ್ಲ – ಸಚಿವ ಡಾ.ಕೆ.ಸುಧಾಕರ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಆರಂಭದಿಂದಲೇ ಮಂಕಿಪಾಕ್ಸ್ ಹರಡದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕೈಗೊಳ್ಳಲಾಗಿದ್ದು ಈವರೆಗೆ ಮಂಕಿಪಾಕ್ಸ್‌ ಪ್ರಕರಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಮಂಕಿಪಾಕ್ಸ್‌ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಇದಕ್ಕಾಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು 24 ಗಂಟೆಯೂ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇಥಿಯೋಪಿಯಾದಿಂದ ಬಂದಿದ್ದ […]

ರಾಜ್ಯದಲ್ಲಿ ಮಂಕಿಪಾಕ್ಸ್‌ ಪ್ರಕರಣ ಪತ್ತೆಯಾಗಿಲ್ಲ – ಸಚಿವ ಡಾ.ಕೆ.ಸುಧಾಕರ್ Read More »

ರಾಜ್ಯದ ಕೋಮುದಳ್ಳುರಿಗೆ ಗೃಹಸಚಿವರ ತಲೆದಂಡ? ಇವರೇ ಮುಂದಿನ ಗೃಹಮಂತ್ರಿ

ಸಮಗ್ರ ನ್ಯೂಸ್: ಹಿಜಾಬ್ ವಿವಾದ, ಜಟ್ಕಾ ಹಲಾಲ್, ಮೈಕ್ ವಿವಾದ ಸೇರಿದಂತೆ ರಾಜ್ಯದಲ್ಲಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೋಮು ಸಂಬಂಧಿತ ವಿವಾದಗಳು ತೀವ್ರವಾಗಿದ್ದು, ಇದರ ಬೆನ್ನಲ್ಲೇ ಸರ್ಕಾರದ ಬಗ್ಗೆ ಸ್ವತಃ ಹಿಂದೂ ಕಾರ್ಯಕರ್ತರಿಗೆ ಅಸಮಾಧಾನ ಭುಗಿಲೆದ್ದಿದೆ. ಇನ್ನಷ್ಟು ತೀವ್ರವಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿರುವ ಹಿಂದೂ ಸಂಘಟನೆಯ ಕೆಲವು ಕಾರ್ಯಕರ್ತರು ಉತ್ತರ ಪ್ರದೇಶ ಮಾದರಿಯ ಕಠಿಣ ಕ್ರಮಗಳಿಗೆ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ತಲೆದಂಡವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ

ರಾಜ್ಯದ ಕೋಮುದಳ್ಳುರಿಗೆ ಗೃಹಸಚಿವರ ತಲೆದಂಡ? ಇವರೇ ಮುಂದಿನ ಗೃಹಮಂತ್ರಿ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ವಿಶೇಷ: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ: ಕುಟುಂಬದಲ್ಲಿ ಹೊಸ ಆರಂಭದಿಂದ ಮನಸ್ಸು ಸಂತೋಷವಾಗುತ್ತದೆ. ಕುಟುಂಬದ ಉಪಸ್ಥಿತಿಯಲ್ಲಿ ನೀವು ಬಹಳಷ್ಟು ಸಂತೋಷವನ್ನು ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಹೂಡಿಕೆಯತ್ತ ಗಮನ ಹರಿಸಬೇಕು. ಸದ್ಯಕ್ಕೆ ವ್ಯಾಪಾರ ಪ್ರಯಾಣ ತಪ್ಪಿಸಿ. ಪ್ರೇಮ ಸಂಬಂಧದಲ್ಲಿ ಇತರರ ಮಾತನ್ನು

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇತಿಹಾಸ ನಿರ್ಮಿಸಿದ ವಿನೇಶ್ ಪೋಗಟ್| ಸತತ ಮೂರು ಚಿನ್ನ ಗೆದ್ದ ಭಾರತೀಯ ನಾರಿ

ಸಮಗ್ರ ನ್ಯೂಸ್: ಕುಸ್ತಿಪಟು ವಿನೇಶ್ ಫೋಗಟ್ ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲೂ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆಯಿಂದ ಹಿಡಿದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸತತ 3 ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಕುಸ್ತಿ 53 ಕೆಜಿ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು, ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ

ಇತಿಹಾಸ ನಿರ್ಮಿಸಿದ ವಿನೇಶ್ ಪೋಗಟ್| ಸತತ ಮೂರು ಚಿನ್ನ ಗೆದ್ದ ಭಾರತೀಯ ನಾರಿ Read More »

ವಿಫಲವಾಗಿದ್ಯಾಕೆ ಇಲಾಖೆ ಮುನಿಸಿಕೊಳ್ಳುವನೇ ಕಾರ್ಯಕರ್ತ..!

ಅದೊಂದು ಘಟನೆ ಹಿಂದೂ ಕಾರ್ಯಕರ್ತರೆಲ್ಲ ತಡ ರಾತ್ರಿ ರಸ್ತೆಯಲ್ಲಿ ಧರಣಿ ಕೂರುವಂತೆ ಮಾಡಿತ್ತು. ಬಿಜೆಪಿ ರಾಜ್ಯಧ್ಯಕ್ಷರ ಕಾರನ್ನು ಮಾತ್ರವಲ್ಲ ಇಡೀ ರಾಜ್ಯವನ್ನೆ ಅಲುಗಾಡಿಸಿತು. ರಣ ಭೀಕರತೆಯ ವಿಷಯ ತಿಳಿಯುತ್ತಿದ್ದಂತೆ ಸಿಎಂ ಟ್ವೀಟ್ ಮಾಡಿ ಅಗಲಿದ ಕಾರ್ಯಕರ್ತನಿಗೆ ಸಂತಾಪ ಸೂಚಿಸುವಷ್ಟರ ಮಟ್ಟಕ್ಕೆ ಪ್ರಚಾರ ಪಡೆದಿತ್ತು. ದೆಹಲಿಯಲ್ಲಿದ್ದ ಶಾಸಕರು ರಾತೋ ರಾತ್ರಿ ಸ್ವ ಕ್ಷೇತ್ರದತ್ತ ಹೊರಟ ಬರುವಂತೆ ಮಾಡಿದ್ದಲ್ಲದೆ. ಘಟನೆ ನಡೆದು ಕೆಲವೆ ಗಂಟೆಗಳಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿದ ಕಾರಣ ಗಲ್ಲಿ ಗಲ್ಲಿಗಳಲ್ಲಿ ಪೋಲಿಸರು ಜಮಾಯಿಸಿದರೂ. ರಾತ್ರಿ ಕಳೆದು

ವಿಫಲವಾಗಿದ್ಯಾಕೆ ಇಲಾಖೆ ಮುನಿಸಿಕೊಳ್ಳುವನೇ ಕಾರ್ಯಕರ್ತ..! Read More »

ಮಂಗಳೂರು: ಖಾಸಗಿ ಬಸ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿನಿಯರು| ‘ಹಿಡಿತ ತಪ್ಪಿದರೆ ಜೀವಕ್ಕೆ ಕಂಟಕ’ – ಅಪಾಯಕಾರಿ ಪ್ರಯಾಣದ ವಿಡಿಯೋ ವೈರಲ್

ಸಮಗ್ರ ನ್ಯೂಸ್: ತುಂಬಿ ತುಳುಕುವ ಖಾಸಗಿ ಬಸ್ ನ ಪುಟ್ ಬೋರ್ಡಿನಲ್ಲಿ ವಿದ್ಯಾರ್ಥಿನಿಯರು ನೇತಾಡಿಕೊಂಡು ಅಪಾಯಕಾರಿ ಪ್ರಯಾಣಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಎಲ್ಲರಿಗೂ ಉದ್ಯೋಗ, ಶಾಲಾ ಕಾಲೇಜಿಗೆ ಹೋಗುವ ಧಾವಂತ, ಆದರೆ ಇರೋ ಬೆರಳೆಣಿಕೆ ಬಸ್ಸಿನಲ್ಲಿ ಜೀವ ಪಣಕ್ಕಿಟ್ಟು ಪ್ರಯಾಣಿಸುವ ಅನಿವಾರ್ಯತೆ. ಪ್ರಯಾಣಿಕರು ತುಂಬಿ ತುಳುಕುತ್ತಿದ್ದರೂ, ಎಚ್ಚರಿಕೆ ವಹಿಸಬೇಕಾಗಿದ್ದ ಬಸ್ ನಿರ್ವಾಹಕನೇ ವಿದ್ಯಾರ್ಥಿನಿಯರನ್ನು ತುಂಬಿ ಪುಟ್ ಬೋರ್ಡಿನಲ್ಲಿ ನೇತಾಡಿಸಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋ ತುಣುಕಿನಲ್ಲಿದೆ. ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ಒಂದೆಡೆಯಾದರೆ , ಜೀವದ ಜೊತೆ

ಮಂಗಳೂರು: ಖಾಸಗಿ ಬಸ್ ನಲ್ಲಿ ಜೀವ ಕೈಯಲ್ಲಿ ಹಿಡಿದು ಸಾಗುವ ವಿದ್ಯಾರ್ಥಿನಿಯರು| ‘ಹಿಡಿತ ತಪ್ಪಿದರೆ ಜೀವಕ್ಕೆ ಕಂಟಕ’ – ಅಪಾಯಕಾರಿ ಪ್ರಯಾಣದ ವಿಡಿಯೋ ವೈರಲ್ Read More »

ಮತ್ತೋರ್ವ ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್; ಆರ್ ಎಸ್ ಎಸ್ ಪ್ರಮುಖರೊಬ್ಬರ ಮುಖಕ್ಕೆ ಚಾಕುವಿನಿಂದ ಇರಿದ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಮಾರಿಕಾಂಬ ರಸ್ತೆಯಲ್ಲಿ ನಡೆದಿದೆ. ಆರ್ ಎಸ್ ಎಸ್ ಪ್ರಮುಖ ರವಿ ಚಾಕು ಇರಿತದಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಟಚ್ ಆಗಿದ್ದಕ್ಕೆ ಅಂಗಡಿಯ ಮುಂದೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಜಗಳ ಬಿಡಿಸಲು ಮುಂದಾದ ರವಿ ಮೇಲೆ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ರವಿ ಅವರ ಮುಖಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ

ಮತ್ತೋರ್ವ ಹಿಂದೂ ಕಾರ್ಯಕರ್ತನಿಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು Read More »

ದ.ಕ ಜಿಲ್ಲೆಯಲ್ಲಿ ಆ.8ರವರೆಗೆ ನಿರ್ಬಂಧಗಳು ಜಾರಿ

ಸಮಗ್ರ ನ್ಯೂಸ್: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಆಗಸ್ಟ್ 05 ರಿಂದ 8ರವರೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ವಿವರ ಇಂತಿದೆ:ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಇತರ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿಗಳು,

ದ.ಕ ಜಿಲ್ಲೆಯಲ್ಲಿ ಆ.8ರವರೆಗೆ ನಿರ್ಬಂಧಗಳು ಜಾರಿ Read More »

ಚಿಕ್ಕಮಗಳೂರು : ಭಾರೀ ಮಳೆಗೆ ಗದ್ದೆಯಲ್ಲಿ ಭೂಕುಸಿತ

ಸಮಗ್ರ ನ್ಯೂಸ್: ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರಿನ ಭತ್ತದ ಗದ್ದೆಯಲ್ಲಿ ಭೂ ಕುಸಿತವಾಗಿದೆ. ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದ ಭತ್ತದ ಗದ್ದೆಯಲ್ಲಿ ಈ ಘಟನೆ ನಡೆದಿದ್ದು, ನಾಟಿಗೆ ಸಜ್ಜಾಗಿದ್ದ ಭತ್ತದ ಗದ್ದೆಯಲ್ಲಿ ಭೂಕುಸಿತ ಉಂಟಾಗಿದೆ. ಭತ್ತದ ಗದ್ದೆಯಲ್ಲಿ ಭೂ ಕುಸಿತವಾದ ಹಿನ್ನೆಲೆ ಕೃಷಿಕರು ಆತಂಕಗೊಂಡಿದ್ದಾರೆ. ಕಳಸ ತಾಲೂಕಿನ‌ ನೆಲ್ಲಿಬೀಡು ಗ್ರಾಮದ ಮನೋಜ್ ಎಂಬುವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಭೂ ಕುಸಿತವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಭೂ ಕುಸಿತ‌ ಸಂಭವಿಸಿದೆ. ಭತ್ತದ ಗದ್ದೆಯ

ಚಿಕ್ಕಮಗಳೂರು : ಭಾರೀ ಮಳೆಗೆ ಗದ್ದೆಯಲ್ಲಿ ಭೂಕುಸಿತ Read More »

ಪುತ್ತೂರು; ಮಹಡಿಯಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿ ಮೃತ್ಯು

ಪುತ್ತೂರು: ನಗರದ ಬೊಳುವಾರು ವಸತಿ ಸಮುಚ್ಚಾಯವೊಂದರ ಬಿ ಬ್ಲಾಕ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ವಿದ್ಯಾರ್ಥಿ  ಮೃತಪಟ್ಟ ಘಟನೆಯೊಂದು ನಡೆದಿದೆ. ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ, ಸ್ಥಳೀಯ ನಿವಾಸಿ ಮನೋಹರ ರೈ ಅವರ ಪುತ್ರ, ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ (15) ಮೃತ ಬಾಲಕ. ಸುಶಾನ್ ರೈ ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಾಯಕ್ಕೆ ತೆರಳಿದ್ದ. ಸಮುಚ್ಚಾಯದ ಕೆಳಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆತ

ಪುತ್ತೂರು; ಮಹಡಿಯಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿ ಮೃತ್ಯು Read More »