ಕೊಟ್ಟಿಗೆಹಾರ: ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ|ಪುತ್ತೂರಿನ ಯುವಕ ಪ್ರಾಣಾಪಾಯದಿಂದ ಪಾರು
ಸಮಗ್ರ ನ್ಯೂಸ್: ಟ್ಯಾಂಕರ್ ಮತ್ತು ಬೈಕ್ ಮುಕಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ಕೊಟ್ಟಿಗೆಹಾರ ಸಮೀಪದ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕೊಟ್ಟಿಗೆಹಾರ ಪಟ್ಟಣದಲ್ಲಿ ಟ್ಯಾಂಕರ್ ಮತ್ತು ಬೈಕ್ ಪರಸ್ಪರ ಮುಕಾಮುಖಿ ಡಿಕ್ಕಿ ಯಾಗಿ ಬೈಕ್ ನಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.ಪುತ್ತೂರಿನಿಂದ ಬಣಕಲ್ ಸಂಬಂಧಿಕರ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರರು ಪುತ್ತೂರಿನವರೆಂದು ತಿಳಿದುಬಂದಿದೆ.
ಕೊಟ್ಟಿಗೆಹಾರ: ಟ್ಯಾಂಕರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ|ಪುತ್ತೂರಿನ ಯುವಕ ಪ್ರಾಣಾಪಾಯದಿಂದ ಪಾರು Read More »