August 2022

ಮಡಿಕೇರಿ- ಮಂಗಳೂರು ರಾತ್ರಿ ವೇಳೆ ವಾಹನ ಸಂಚಾರ ನಿಷೇಧ

ಮಡಿಕೇರಿ: ಮಡಿಕೇರಿ- ಮಂಗಳೂರು ರಸ್ತೆಯ ಮದೆನಾಡು ಸಮೀಪ ಗುಡ್ಡದಲ್ಲಿ ದೊಡ್ಡಗಾತ್ರದ ಬಿರುಕು ಮೂಡಿರುವುದರಿಂದ ಮಂಗಳವಾರ ಸಂಜೆ 9 ಗಂಟೆಯಿಂದ ಬುಧವಾರ ಬೆಳಿಗ್ಗೆ 6.30ರವರೆಗೂ ಎಲ್ಲ ಬಗೆಯ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.  ಸ್ಥಳದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ಗುಡ್ಡದ ಒಂದು ಭಾಗದಿಂದ ಮಣ್ಣು ಕುಸಿಯುವ ಸಾಧ್ಯತೆ ಇದೆ. ರಾತ್ರಿ ವೇಳೆ ವಿಪರೀತ ಮಂಜು ಆವರಿಸುವುದರಿಂದ ಅಪಾಯ ಹೆಚ್ಚು. ಹೀಗಾಗಿ, ತಾತ್ಕಾಲಿಕವಾಗಿ ಒಂದು ರಾತ್ರಿ ಮಾತ್ರ ಸಂಚಾರ ನಿಷೇಧಿಸಲಾಗಿದೆ. ಬುಧವಾರ ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ […]

ಮಡಿಕೇರಿ- ಮಂಗಳೂರು ರಾತ್ರಿ ವೇಳೆ ವಾಹನ ಸಂಚಾರ ನಿಷೇಧ Read More »

ನಗರಗಳಲ್ಲಿ ಚಿನ್ನದ ಬೆಲೆ ಚೆನ್ನಾಗಿದೆಯೇ ? ಇಲ್ಲಿದೆ ನೋಡಿ ಇಂದಿನ ಬೆಳ್ಳಿ ಬಂಗಾರದ ಬೆಲೆ

ಭಾರತದಲ್ಲಿ ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ.ಬೆಳ್ಳಿ ಬೆಲೆ ಕೂಡ ಇಂದು ಭಾರೀ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 59,000 ರೂ. ಆಗಿದೆ. ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಹೆಚ್ಚಳವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ

ನಗರಗಳಲ್ಲಿ ಚಿನ್ನದ ಬೆಲೆ ಚೆನ್ನಾಗಿದೆಯೇ ? ಇಲ್ಲಿದೆ ನೋಡಿ ಇಂದಿನ ಬೆಳ್ಳಿ ಬಂಗಾರದ ಬೆಲೆ Read More »

ಮೊಹರಂ ಮೆರವಣಿಗೆ ವೇಳೆ ಚೂರಿ ಇರಿತ; ಉದ್ವಿಗ್ನಗೊಂಡ ಗದಗ

ಸಮಗ್ರ ನ್ಯೂಸ್: ಮೊಹರಂ ಮೆರವಣಿಗೆ ವೇಳೆ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದ ಒಂದು ದಿನದ ನಂತರ ಗದಗ ಜಿಲ್ಲೆಯಲ್ಲಿ ಉದ್ವಿಗ್ನತೆ ಆವರಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗದಗ ಸಮೀಪದ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಮೆರವಣಿಗೆ ವೇಳೆ ತೌಫೀಕ್ ಹೊಸಮನಿ (23) ಮತ್ತು ಮುಸ್ತಾಕ್ ಹೊಸಮನಿ (24) ಚಾಕುವಿನಿಂದ ಇರಿದಿದ್ದರು. ಯುವಕನ ಹೊಟ್ಟೆ, ಎದೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ತೌಫೀಕ್ ಹೊಸಮನಿ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಗದಗನ ಜಿಮ್ಸ್ ಆಸ್ಪತ್ರೆಗೆ

ಮೊಹರಂ ಮೆರವಣಿಗೆ ವೇಳೆ ಚೂರಿ ಇರಿತ; ಉದ್ವಿಗ್ನಗೊಂಡ ಗದಗ Read More »

ಖಾಸಗಿ ಬಸ್ ಪಲ್ಟಿ; 9ಕ್ಕೂ ಹೆಚ್ಚು ಮಂದಿಗೆ ಗಾಯ

ದಾವಣಗೆರೆ: ಬೆಂಗಳೂರು ಕಡೆಯಿಂದ ವಿಜಯಪುರ ಜಿಲ್ಲೆಯ ಸಿಂದಗಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದ್ದು, ಒಂಭತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ತಡರಾತ್ರಿ 1:30ಕ್ಕೆ ಈ ಭೀಕರ ಅಪಘಾತ‌ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ಖಾಸಗಿ ಬಸ್ ನಲ್ಲಿ ಸುಮಾರು ‌30 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಪ್ರಯಾಣಿಕರ ಜೊತೆಗೆ 9 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಖಾಸಗಿ ಬಸ್ ಪಲ್ಟಿ; 9ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಎರಡು ವ್ಯಕ್ತಿಗಳು ಮೃತ್ಯು

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಿಲಬನೂರು ಗ್ರಾಮದ ದಂಡ್ಯೆಪ್ಪ ಅವರ ಪುತ್ರ ಬಸಪ್ಪ ದುಂಡಪ್ಪ ಸುನ್ನಾಳ್ (38), ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ವೃದ್ಧ ಸ್ವಾಮಿಗೌಡ (73) ಮೃತರು. ಆಗಸ್ಟ್ 4ರ ಮುಂಜಾನೆ 2.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾಗಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಸಿ.ಜಿ. ಆಸ್ಪತ್ರೆಯಲ್ಲಿ ಇರಿಸಿದ್ದ ಮೃತದೇಹವನ್ನು ಸಂಬಂಧಿಗಳು ಗುರುತಿಸಿದ್ದಾರೆ. ‘ಸಿದ್ದರಾಮಯ್ಯ ಅವರ ಜನ್ಮದಿನಕ್ಕಾಗಿ ಬಸ್‌ನಲ್ಲಿ ಕರೆತಂದಿದ್ದವರು ಬಸ‍ಪ್ಪ ಅವರಿಗಾಗಿ ಕೆಲ

ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಎರಡು ವ್ಯಕ್ತಿಗಳು ಮೃತ್ಯು Read More »

ಬೆಳ್ತಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿಯ ನಿವಾಸಿ ಸಚಿನ್ (17) ಮಂಗಳವಾರ ಹೃದಯಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದಾನೆ. ಮುಂಡಾಜೆ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಮಂಗಳವಾರ ಕಾಲೇಜಿಗೆ ರಜೆ ಇದ್ದು, ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಅವಳಿ ಮಕ್ಕಳ ಪೈಕಿ ಒಬ್ಬನಾಗಿದ್ದ ಈತನಿಗೆ ತಂದೆ, ತಾಯಿ, ಹಾಗೂ ಇಬ್ಬರು ಸಹೋದರರು ಇದ್ದಾರೆ.

ಬೆಳ್ತಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿ ಸಾವು Read More »

ಮಲೆನಾಡಲ್ಲಿ ಮುಂದುವರಿದ ಮಳೆಯಬ್ಬರ| ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವು

ಸಮಗ್ರ ನ್ಯೂಸ್: ಮಲೆನಾಡಿನಲ್ಲಿ ಮುಂದುವರೆದ ಮಳೆಯ ಅಬ್ಬರ ಜನಜೀವನ ಅಸ್ತವ್ಯಸ್ತ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯ ಕೆ ತಲಗೂರು ಎಂಬಲ್ಲಿ ಮನೆ ಮೇಲೆ ಬೃಹತಾಕಾರದ ಮರ ಒಂದು ಬಿದ್ದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾತ್ರಿ ಸುಮಾರು 10.00 ಗಂಟೆಯ ಸಮಯದಲ್ಲಿ ಕೆ. ತಲಗೂರು ಗ್ರಾಮದ ಚಂದ್ರಮ್ಮ ರವರ ಮನೆಯಲ್ಲಿ ಚಂದ್ರಮ್ಮ ಮತ್ತು ಸರಿತಾ ಹಾಗೂ ಸರಿತಾ ರವರ ಮಕ್ಕಳಾದ ಸುನಿಲ್ ಹಾಗೂ ದೀಕ್ಷಿತ್ ರವರು ಮಲಗಿದ್ದಾಗ

ಮಲೆನಾಡಲ್ಲಿ ಮುಂದುವರಿದ ಮಳೆಯಬ್ಬರ| ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಸಾವು Read More »

ಬೆಳ್ತಂಗಡಿ: ಮಗುವಿಗೆ ಜನ್ಮವಿತ್ತು ತಾಯಿ ಸಾವು

ಸಮಗ್ರ ನ್ಯೂಸ್: ಹೆಣ್ಣು ಮಗುವಿಗೆ ಜನ್ಮ ನೀಡಿ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿ ಬಾಣಂತಿ ಸಾವನ್ನಪ್ಪಿದ್ದ ಘಟನೆ ಮಂಗಳವಾರ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಗೆ ದಾಖಲಾಗಿದ್ದ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ ಉದಯ ನಾಯ್ಕ್ ರ ಪತ್ನಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ನಿವಾಸಿ ಸುಜತಾ(32) ಅವರಿಗೆ ವೈದ್ಯರು ಆಪರೇಷನ್ ಮಾಡಿದ್ದು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಸುಜತಾರಿಗೆ ವಿಪರೀತ ರಕ್ತಸ್ರಾವ ಉಂಟಾಗಿದ್ದು ತಕ್ಷಣ ವೈದ್ಯರು ಮಂಗಳೂರು

ಬೆಳ್ತಂಗಡಿ: ಮಗುವಿಗೆ ಜನ್ಮವಿತ್ತು ತಾಯಿ ಸಾವು Read More »

ಸುಳ್ಯ: ಸೆಕ್ಷನ್ ನಡುವೆಯೂ ಕನಕಮಜಲಿನಲ್ಲಿ ಯುವಕನಿಂದ ತಲ್ವಾರ್ ಪ್ರದರ್ಶನ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಯುವಕನೋರ್ವ ತಲ್ವಾರ್ ಹಿಡಿದು ಊರಿಡೀ ಸುತ್ತಾಡಿದ ಘಟನೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ನಡೆದಿದೆ. ಇಲ್ಲಿನ ಸಂದೀಪ್ ಎಂಬಾತ ಘಟನೆಗೆ ಕಾರಣಕರ್ತ ವ್ಯಕ್ತಿ ಎಂದು ತಿಳಿಸಿದು ಬಂದಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ದಾಂಜಲಿ ಕುರಿತ ಬ್ಯಾನರ್ ವಿಚಾರದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಕನಕಮಜಲು ಪೇಟೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಹಾಕಲು ಅನುಮತಿ ಇಲ್ಲದೇ ಇದ್ದು, ಪ್ರವೀಣ್ ರ ಶ್ರದ್ದಾಂಜಲಿ ಬ್ಯಾನರ್ ಅನ್ನು ಬಟ್ಟೆಯಲ್ಲಿ ಹಾಕಲು ತಿಳಿಸಲಾಗಿತ್ತಾದರೂ ಕನಕಮಜಲಿನ

ಸುಳ್ಯ: ಸೆಕ್ಷನ್ ನಡುವೆಯೂ ಕನಕಮಜಲಿನಲ್ಲಿ ಯುವಕನಿಂದ ತಲ್ವಾರ್ ಪ್ರದರ್ಶನ Read More »

ಸುಳ್ಯ: ಅಪಘಾತ ಪ್ರಕರಣ ಆರೋಪಿ ದೋಷಮುಕ್ತ

ಸುಳ್ಯ: ತಾಲೂಕಿನ ಮಿತ್ತಮಜಲು ಎಂಬಲ್ಲಿ ನಡೆದ ಅಪಘಾತಕ್ಕೆ ಸಂಬಂಧಿಸಿದಂತೆ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತ ಗೊಳಿಸಿದೆ. ದಿನಾಂಕ 13/05/2020 ರಂದು ನೆಲ್ಲೂರು ಕೆಮ್ರಾಜೆ ಗ್ರಾಮದ ಚೇತನ್ ಕುಮಾರ್ ಎಂಬುವವರು ತನ್ನ ವಾಹನದಲ್ಲಿ ಸುಳ್ಯ ಕಡೆಯಿಂದ ಶಶಿಕಾಂತ್ ಎಂಬುವವನನ್ನು ಕೂರಿಸಿಕೊಂಡು ಬರುತ್ತಿದ್ದರು. ಈ ಸಂದರ್ಭ ಮಿತ್ತಮಜಲ್ ನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನದ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಚೇತನ್ ಕುಮಾರ್ ಎಂಬುವವರ ಬೈಕ್ ಡಿಕ್ಕಿ ಹೊಡೆದಿದೆ.ಈ ಪರಿಣಾಮ

ಸುಳ್ಯ: ಅಪಘಾತ ಪ್ರಕರಣ ಆರೋಪಿ ದೋಷಮುಕ್ತ Read More »