August 2022

ಉಳ್ಳಾಲದಲ್ಲಿ ರಿಕ್ಷಾ ಓಡಿಸಿದ ಯು.ಟಿ ಖಾದರ್

ಸಮಗ್ರ ನ್ಯೂಸ್: ಮಂಗಳೂರು ಕ್ಷೇತ್ರದ ಶಾಸಕ, ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಸ್, ಜೆಸಿಬಿ ಚಲಾಯಿಸಿ ಒಂದೊಮ್ಮೆ ಸುದ್ದಿಯಾಗದ್ದರು, ಇದೀಗ ಮಳೆಹಾನಿಗೊಳಗಾದ ಮನೆ ವೀಕ್ಷಿಸಲು ಸ್ವತಃ ರಿಕ್ಷಾ ಚಲಾಯಿಸಿಕೊಂಡು ಹೋಗಿದ್ದಾರೆ. ಪಜೀರು ಪಾನೇಲ ಎಂಬಲ್ಲಿ ಮಿಂಗಲ್ ವೇಗಸ್ ಎಂಬವರ ಮಳೆಯಿಂದ ಹಾನಿಗೀಡಾದ ಮನೆಯ ವೀಕ್ಷಣೆಗೆ ತೆರಳಿದ್ದ ಸಂದರ್ಭ ಶಾಸಕರು, ವಾರ್ಡಿನ ಸದಸ್ಯರೊಬ್ಬರ ರಿಕ್ಷಾವನ್ನು ಚಲಾಯಿಸಿ ಮನೆಯನ್ನು ವೀಕ್ಷಿಸಿದ್ದಾರೆ. ಇವರ ಜೊತೆಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಯೂಸುಫ್ ಪಾನೇಲ, ರೊನಾಲ್ಡ್ ಇದ್ದರು.

ಉಳ್ಳಾಲದಲ್ಲಿ ರಿಕ್ಷಾ ಓಡಿಸಿದ ಯು.ಟಿ ಖಾದರ್ Read More »

ಭಾರತ ಮಾತೆ ಕೈಯಲ್ಲಿ ಭಗವಾಧ್ವಜ| ಮಂಗಳೂರು ವಿವಿ ಕಾಲೇಜಿನಲ್ಲಿ ‌ಮತ್ತೆ ವಿವಾದ!

ಸಮಗ್ರ ನ್ಯೂಸ್: ಕಾಲೇಜು ಕ್ಯಾಂಪಸ್‌ನಲ್ಲಿ ‘ಭಾರತ್ ಮಾತಾ ಪೂಜನಾ’ ಕಾರ್ಯಕ್ರಮ ನಡೆಸಲು ಮುಂದಾದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ‌ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ‌.ಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರರಿಗೆ ಮನವಿ ಮಾಡಿದೆ. ಭಾರತ ಮಾತೆ ಕೇಸರಿ ಧ್ವಜ ಹಿಡಿದ ಫೋಟೋ ಬಳಸಿದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ಕ್ಯಾಂಪಸ್ ಫ್ರಂಟ್, ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ

ಭಾರತ ಮಾತೆ ಕೈಯಲ್ಲಿ ಭಗವಾಧ್ವಜ| ಮಂಗಳೂರು ವಿವಿ ಕಾಲೇಜಿನಲ್ಲಿ ‌ಮತ್ತೆ ವಿವಾದ! Read More »

8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ‌ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆಯಾಗಿದ್ದು, ನಿತೀಶ್ ಕುಮಾರ್ ಅವರು ದಾಖಲೆಯ 8 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲ ಫಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದರು. ಇನ್ನು ಆರ್ ಜೆ ಡಿ ಯ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿರುವ ಜೆಡಿಯು ಪಕ್ಷ ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳು ಮತ್ತು

8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ‌ಅಧಿಕಾರ ಸ್ವೀಕಾರ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಹಲ್ಲೆಗೈದ ಆರೋಪಿಗಳ ಗುರುತು ಪತ್ತೆ| ಬಂಧಿಸಿ ಆಸ್ತಿಮುಟ್ಟುಗೋಲು ಹಾಕಲು ಚಿಂತನೆ

ಸಮಗ್ರ ನ್ಯೂಸ್ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಮೂವರ ಹೆಸರು, ವಿಳಾಸ, ಭಾವಚಿತ್ರ ದೊರೆತಿದೆ. ಆರೋಪಿಗಳು ಬಚ್ಚಿಟ್ಟುಕೊಂಡಿದ್ದು, ಅವರ ವಿರುದ್ದ ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ ನಡೆಯುತ್ತಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿಗಳು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಹಲ್ಲೆಗೈದ ಆರೋಪಿಗಳ ಗುರುತು ಪತ್ತೆ| ಬಂಧಿಸಿ ಆಸ್ತಿಮುಟ್ಟುಗೋಲು ಹಾಕಲು ಚಿಂತನೆ Read More »

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭೂ ಕುಸಿತ| ಆತಂಕದಲ್ಲಿ ಸ್ಥಳೀಯರು

ಸಮಗ್ರ ನ್ಯೂಸ್:‌ಕೊಡಗು ಜಿಲ್ಲೆಯಲ್ಲಿ ಭೂಕುಸಿತಗಳು ಮುಂದುವರೆದಿದ್ದು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿರುವ ಹರಪಲ್ಲಿ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಕಿ.ಮೀ ಗಟ್ಟಲೇ ಬೆಟ್ಟ ಕುಸಿದಿದ್ದು ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಹೆಚ್.ಎ.ಸೋಮಯ್ಯ ಅವರ ಮನೆ ಬಳಿ‌ ಭೂಮಿ ಕುಸಿದು ಹೋಗಿದೆ. ಮನೆಯಿಂದ 20 ಅಡಿ ದೂರದಲ್ಲಿ ಕುಸಿತ ಉಂಟಾಗಿದ್ದು, ಇದರಿಂದಾಗಿ ಸೋಮಯ್ಯ ಅವರ ಮನೆಅಪಾಯದಲ್ಲಿ ಇದೆ. ನಿನ್ನೆ ಸುರಿದ ಮಳೆಯಿಂದ ಉಂಟಾದ ಭೂಕುಸಿತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ ಮಾಡಿದ್ದಾರೆ. ಬೆಟ್ಟದ ಮೇಲ್ಭಾಗದಲ್ಲೂ

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭೂ ಕುಸಿತ| ಆತಂಕದಲ್ಲಿ ಸ್ಥಳೀಯರು Read More »

ಅಂತಿಮ ಹಂತದಲ್ಲಿ ದುಬೈನ ಹಿಂದೂ ದೇವಾಲಯ| ಏನೇನಿದೆ ಈ ದೇವಾಲಯದಲ್ಲಿ ಗೊತ್ತಾ?

ಸಮಗ್ರ‌ ನ್ಯೂಸ್: ದೇವರೊಬ್ಬರೇ ಎಂದು ನಂಬುವ ಇಸ್ಲಾಂ ದೇಶವಾಗಿದ್ದರೂ ತನ್ನ ದೇಶದಲ್ಲಿರುವ ಇತರ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಅನ್ಯೋನ್ಯತೆಗೆ ಹೆಸರಾದ ದುಬೈನಲ್ಲಿ ಹಿಂದೂ, ಕ್ರಿಶ್ಚಿಯನ್‌ ಚರ್ಚ್, ಮಂದಿರ,ಗಳಿಗೂ ಅವಕಾಶ ನೀಡಲಾಗಿದೆ. ಹೇಗೆ ಇತರ ಧರ್ಮಗಳ‌ ಜೊತೆ ಹೊಂದಾಣಿಕೆ ಇರಬೇಕೆಂಬುವುದಕ್ಕೆ ದುಬೈ ಸಾಕ್ಷಿಯಾಗಿದೆ. ದುಬೈನ ಜಬಲ್ ಅಲಿ ಎಂಬ ಪ್ರದೇಶದಲ್ಲಿ ಈ ದೇವಾಲಯ ತಲೆಯೆತ್ತಿ ನಿಂತಿದೆ. ಈ ನೂತನ ಹಿಂದೂ ದೇಗುಲದಲ್ಲಿ 16 ಹಿಂದೂ ದೇವರು-ದೇವಿಯರ ಮೂರ್ತಿಗಳಿವೆ ಎಂದು ಯುಎಇ ಮಾಧ್ಯಮಗಳು ವರದಿ ಮಾಡಿವೆ.ಈ ದೇವಾಲಯದಲ್ಲಿ

ಅಂತಿಮ ಹಂತದಲ್ಲಿ ದುಬೈನ ಹಿಂದೂ ದೇವಾಲಯ| ಏನೇನಿದೆ ಈ ದೇವಾಲಯದಲ್ಲಿ ಗೊತ್ತಾ? Read More »

ಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಪ್ರದರ್ಶಿಸಿದ ಪ್ರಕರಣ

ಯುವಕನ ವಿರುದ್ಧ ಎಫ್ ಐಆರ್ ಸಮಗ್ರ ನ್ಯೂಸ್: ಆ. 9 ರಂದು ತಲ್ವಾರ್ ಹಿಡಿದು ಊರಿಡೀ ಸುತ್ತಿ ಭಯದ ವಾತಾವರಣ ನಿರ್ಮಿಸಿದ ಯುವಕ ಇದೀಗ ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಈತ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಟ ನಡೆಸಿ ಹುಚ್ಚಾಟ ಪ್ರದರ್ಶಿಸಿದ್ದ. ಇದರಿಂದ ಸ್ಥಳೀಯರಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈತನ ಅತಿರೇಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು

ಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಪ್ರದರ್ಶಿಸಿದ ಪ್ರಕರಣ Read More »

ಇಂದಿನಿಂದ ಮಂತ್ರಾಲಯ ದಲ್ಲಿ ಶ್ರೀ ರಾಯರ 351 ನೇ ಆರಾಧನಾ ಮಹೋತ್ಸವ ಆರಂಭ

ರಾಯಚೂರು: ಇಂದಿನಿಂದ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವ, ಮಳೆಯ ಆತಂಕದ ನಡುವೆ ಆರಂಭಗೊಂಡಿದೆ. ಮಂತ್ರಾಲಯದಲ್ಲಿ ಇಂದಿನಿಂದ ಆರಂಭಗೊಳ್ಳುತ್ತಿರುವಂತ ಸಪ್ತರಾತ್ರೋತ್ಸವಕ್ಕೆ ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ, ಸಕಲ ಸೌಲಭ್ಯದ ವ್ಯವಸ್ಥೆ ಕೂಡ ಮಾಡಲಾಗಿದೆ. ಆಗಸ್ಟ್ 10ರ ಇಂದು ಸಂಜೆ 7ಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಧ್ವಜಾರೋಹಣ, ಗೋ, ಧಾನ್ಯ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿ-ವಿಧಾನದ ಮೂಲಕ ಇಂದಿನಿಂದ ಶ್ರೀರಾಯರ 351ನೇ ಆರಾಧನೆಯ ಸಪ್ತ ರಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ.

ಇಂದಿನಿಂದ ಮಂತ್ರಾಲಯ ದಲ್ಲಿ ಶ್ರೀ ರಾಯರ 351 ನೇ ಆರಾಧನಾ ಮಹೋತ್ಸವ ಆರಂಭ Read More »

ಪುತ್ತೂರು; ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಅಸ್ವಸ್ಥ, ಆಸ್ಪತ್ರೆ ದಾಖಲು

ಪುತ್ತೂರು: ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ವ್ಯಕ್ತಿಯೊಬ್ಬರು ಮೆಟ್ಟಿಲಿನಿಂದ ಇಳಿಯುತ್ತಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡ ಘಟನೆಯೊಂದು ಮಂಗಳವಾರ ರಾತ್ರಿ ನಡೆದಿದೆ. ಬಿಳಿ ಪಂಚೆ ಧರಿಸಿದ್ದ ವ್ಯಕ್ತಿ ಕೆಎಸ್ಸಾರ್ಟಿಸಿ ವಾಣಿಜ್ಯ ಸಂಕೀರ್ಣದ ಮೆಟ್ಟಿಲಿನಿಂದ ಇಳಿಯುತ್ತಿದ್ದ ವೇಳೆ ಕುಸಿದು ಬಿದ್ದು, ಅವರ ತಲೆಗೆ ಗಾಯವಾಗಿದೆ. ತಕ್ಷಣವೇ ಸ್ಥಳೀಯ ವ್ಯಾಪಾರಸ್ಥರು ಸೇರಿ 108 ಆ್ಯಂಬುಲೆನ್ಸ್ ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.

ಪುತ್ತೂರು; ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಅಸ್ವಸ್ಥ, ಆಸ್ಪತ್ರೆ ದಾಖಲು Read More »

ಅಂತರಿಕ್ಷದಿಂದ ಕೇಳಿ ಬಂದ ಮಾನವ ಹೃದಯದ ಬಡಿತ! ಏನು ಈ ಸಂದೇಶ ?

ಸಮಗ್ರ ನ್ಯೂಸ್: ಆಧುನಿಕ ಜಗತ್ತಿನಲ್ಲಿ ‘ನಾಸಾ’ ಮಾದರಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಂತರಿಕ್ಷದಲ್ಲಿ ಹೊಸ ಸಂಶೋಧನೆಗಳನ್ನು ನಡೆಸಿವೆ. ಈಗ ಹೊಸತೊಂದು ಶೋಧವಾಗಿದೆ.  ಬಲುದೂರದ ಅಂತರಿಕ್ಷದಿಂದ ಮಾನವನ ಹೃದಯದ ಬಡಿತವನ್ನು ಹೋಲುವ ರೇಡಿಯೊ ಸಂದೇಶವೊಂದು ಭೂಮಿಯನ್ನು ತಲುಪಿದೆ! ಇದುವರೆಗೂ ಇಂತಹ ಅನೇಕ ರೇಡಿಯೊ ಸಂದೇಶಗಳು ನಮಗೆ ಸಿಕ್ಕಿವೆ. ಆದರೆ, ಈಗ ಸಿಕ್ಕಿರುವುದು ಕೊಂಚ ವಿಶೇಷವಾಗಿದೆ. ಹಾಗಾಗಿಯೇ, ಇದು ಸಂಚಲನ ಮೂಡಿಸಿದೆ. ಅಮೆರಿಕದ ಮಷಾಸುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಹಾಗೂ ವಿಶ್ವದ ಹಲವು ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳ ಸೇರಿ ಈ

ಅಂತರಿಕ್ಷದಿಂದ ಕೇಳಿ ಬಂದ ಮಾನವ ಹೃದಯದ ಬಡಿತ! ಏನು ಈ ಸಂದೇಶ ? Read More »