August 2022

ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಹಾಕಿದ ಪ್ರಾಧ್ಯಾಪಕಿ| ನನ್ನ ಮಗ ಆಕೆಯನ್ನೇ ನೋಡುತ್ತಾನೆ ಎಂದು ದೂರಿತ್ತ ಪೋಷಕರು

ಸಮಗ್ರ ನ್ಯೂಸ್: ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಮಾಡಿದ್ದರಿಂದ ಪ್ರಾಧ್ಯಾಪಕಿಯು ಕೆಲಸ ಕಳೆದುಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಸೇಂಟ್‍ಕ್ಸೇವಿಯರ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಹಾಕಿದ್ದರು. ಇದನ್ನು ನೋಡುತ್ತಿದ್ದ ಆಕೆಯ ವಿದ್ಯಾರ್ಥಿಯನ್ನು ಕಂಡ ತಂದೆಗೆ ಗಾಬರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ತಂದೆ ಶಿಕ್ಷಕಿಯನ್ನು ಅಮಾನತು ಮಾಡಬೇಕೆಂದು ವಿವಿಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಆಡಳಿತ ಮಂಡಳಿಯು ಪ್ರಾಧ್ಯಾಪಕಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿ ಬಲವಂತವಾಗಿ ರಾಜೀನಾಮೆ ನೀಡಿದರು. ಅಷ್ಟೇ ಅಲ್ಲದೇ […]

ಬಿಕಿನಿ ಧರಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಪೋಸ್ಟ್ ಹಾಕಿದ ಪ್ರಾಧ್ಯಾಪಕಿ| ನನ್ನ ಮಗ ಆಕೆಯನ್ನೇ ನೋಡುತ್ತಾನೆ ಎಂದು ದೂರಿತ್ತ ಪೋಷಕರು Read More »

ಪ್ರವೀಣ್ ಹಂತಕರ ಬಂಧನ? ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಯಾಕೆ?

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಗಳನ್ನು ಪೋಲಿಸರು ಬಂಧನವಾಗಿರುವುದಾಗಿ ತಿಳಿದು ಬಂದಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ 6 ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಿನ್ನೆ ಆ.10 ರಂದು ಬೆಳ್ಳಾರೆಯಲ್ಲಿ ನಡೆದಿತ್ತು. ಇಂದು ಎಡಿಜಿಪಿ ಅಲೋಕ್ ಕುಮಾರ್ ಮಂಗಳೂರಿನ ಎಸ್.ಪಿ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಈ ವೇಳೆ ವಿಷಯ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರವೀಣ್ ಹಂತಕರ ಬಂಧನ? ತುರ್ತು ಪತ್ರಿಕಾಗೋಷ್ಠಿ ಕರೆದಿದ್ದು ಯಾಕೆ? Read More »

ಯಾರೇನೇ ಹೇಳಿದ್ರೂ ಸಿಎಂ ಬದಲಾವಣೆ ಪಕ್ಕಾ! ಯಡಿಯೂರಪ್ಪ ಕೊಟ್ಟ‌ ಸುಳಿವು ಏನದು?

ಸಮಗ್ರ ನ್ಯೂಸ್: ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಬದಲಾವಣೆಯ ಸಣ್ಣದೊಂದು ಗುಸುಗುಸು ದೊಡ್ಡ ಸುದ್ದಿಯನ್ನೇ ಮಾಡ್ತಿದೆ. ಕಾಂಗ್ರೆಸ್ ನವ್ರು ಸಿಎಂ ಬದಲಾವಣೆ ಆಗ್ತಾರೆ ಎಂಬುದನ್ನು ಡಂಗುರ ಸಾರುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ಸಿಎಂ ಬದಲಾವಣೆ ಇಲ್ಲ ಎಂದು ತೇಪೆ ಸಾರುತ್ತಿದ್ದಾರೆ. ಆದರೆ ಈ ನಡುವೆ ಮಾಜಿ‌ ಸಿಎಂ ಯಡಿಯೂರಪ್ಪ ‌ಹೇಳಿರುವ ಆ ಮಾತು ರಾಜ್ಯ ಬಿಜೆಪಿ ಮತ್ತು ಅದರ ಹೈಕಮಾಂಡ್ ನಾಯಕರಿಗೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ. ಮಂತ್ರಾಲಯದಲ್ಲಿ ಮಾತನಾಡಿದ ಯಡಿಯೂರಪ್ಪ ಚುನಾವಣೆ ಸಮಯದಲ್ಲಿ ಸಿಎಂ ಬದಲಾವಣೆ ಮಾತು ಕೇಳಿಬರ್ತಿದೆ,

ಯಾರೇನೇ ಹೇಳಿದ್ರೂ ಸಿಎಂ ಬದಲಾವಣೆ ಪಕ್ಕಾ! ಯಡಿಯೂರಪ್ಪ ಕೊಟ್ಟ‌ ಸುಳಿವು ಏನದು? Read More »

ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು? ಅದರ ಅರ್ಥವೇನು?

ಸಮಗ್ರ ನ್ಯೂಸ್: ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ರಕ್ಷಾ ಬಂಧನದ ಹಬ್ಬವು ಆಗಸ್ಟ್​ 11ರ ಸಂಜೆಯಂದು ಆರಂಭವಾಗುತ್ತದೆ. ಹಾಗೂ ಆಗಸ್ಟ್​ 12ರ ಶುಕ್ರವಾರ ಬೆಳಗ್ಗೆಯವರೆಗೆ ಮುಂದುವರಿಯುತ್ತದೆ. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಹಬ್ಬದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ ರಕ್ಷಾ ಬಂಧನದ ದಿನದಂದು ಸಹೋದರಿಯು ತನ್ನ ಸಹೋದರನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟುವಾಗ ಮೂರು ಗಂಟುಗಳನ್ನೇ ಹಾಕಬೇಕು. ಧಾರ್ಮಿಕ ನಂಬಿಕೆಯ ಪ್ರಕಾರ,ರಾಖಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಮೂರು

ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು? ಅದರ ಅರ್ಥವೇನು? Read More »

ರಾಷ್ಟ್ರಧ್ವಜಕ್ಕೆ ಅಪಮಾನ ಹಿನ್ನಲೆ| ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯಲ್ಲಿ ಚಿಕ್ಕಮಾಗರಹಳ್ಳಿಯ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೇಸರಿ, ಬಿಳಿ, ಹಸಿರು ಎನ್ನುವ ಬದಲು ಕೆಂಪು, ಬಿಳಿ ಹಸಿರು ಎಂದು ತಪ್ಪಾಗಿ ಹೇಳಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರು. ಇದೀಗ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡ ಗಿರೀಶ್, ಮನು ಹಾಗೂ ಭಜರಂಗದಳದ ಶಿವು ಎಂಬುವರು ದೂರು ನೀಡಿದ್ದಾರೆ.

ರಾಷ್ಟ್ರಧ್ವಜಕ್ಕೆ ಅಪಮಾನ ಹಿನ್ನಲೆ| ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ದೂರು Read More »

ನಾಳೆ(ಆ.12)ಯಿಂದ‌ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ| ಈ ನಿಯಮಗಳು ಕಡ್ಡಾಯ

ಸಮಗ್ರ ನ್ಯೂಸ್: 2021-21ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆ.12 ರಿಂದ 25ರವರೆಗೆ ನಡೆಯಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಕೇಂದ್ರಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳು ಕೊಂಡೊಯ್ಯಲು ಅವಕಾಶವಿಲ್ಲ. ಪರೀಕ್ಷಾ ಕೇಂದ್ರದ ಸುತ್ತಲಿನ 200ಮೀ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ವಲಯದ ಒಳಗೆ ಪರೀಕ್ಷಾರ್ಥಿಗಳು

ನಾಳೆ(ಆ.12)ಯಿಂದ‌ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ| ಈ ನಿಯಮಗಳು ಕಡ್ಡಾಯ Read More »

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿಯುವ ಸಾಧ್ಯತೆ ‌ಕಾರಣ ರಾತ್ರಿ‌ ಸಂಚಾರ‌ ನಿರ್ಬಂಧಿಸಲಾಗಿದೆ ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರ ಮಳೆ‌ ಹಾಗೂ‌ ಭಾರೀ ಗಾಳಿಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಇದೀಗ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ Read More »

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ

ಸಮಗ್ರ ನ್ಯೂಸ್: ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ. ದೇಶದ‌ 49ನೇ ಸಿಜೆಐಯಾಗಿ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಲಲಿತ್ ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಶೀಘ್ರವೇ ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ Read More »

ಸುಳ್ಯದಲ್ಲೂ ಬಲಿಗಾಗಿ ಕಾಯುತ್ತಿವೆ ಅಪಾಯಕಾರಿ ಕಾಲು ಸಂಕಗಳು!!ಶಾಸಕರೇ ಇನ್ನಾದರೂ ಗಮನಿಸಿ…

ಸಮಗ್ರ ನ್ಯೂಸ್: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ವಿದ್ಯಾರ್ಥಿನಿ ನೀರುಪಾಲಾದ ಘಟನೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ಸಂಭವಿಸಿದೆ. ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ 7ವರ್ಷ ನೀರು ಪಾಲಾಗಿರುವ ವಿದ್ಯಾರ್ಥಿ. ಸ.ಹಿ.ಪ್ರಾ ಶಾಲೆ ಚಪ್ಪರಿಕೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಸಂಜೆ ಶಾಲೆಬಿಟ್ಟು ಮನೆಗೆ ಬರುವಾಗ ಬೀಜಮಕ್ಕಿ ಎಂಬಲ್ಲಿ ಕಾಲು ಸಂಕವಿದ್ದು ಈ ಕಾಲು ಸಂಕ ದಾಟುವಾಗ ಮಗು ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾಳೆ

ಸುಳ್ಯದಲ್ಲೂ ಬಲಿಗಾಗಿ ಕಾಯುತ್ತಿವೆ ಅಪಾಯಕಾರಿ ಕಾಲು ಸಂಕಗಳು!!ಶಾಸಕರೇ ಇನ್ನಾದರೂ ಗಮನಿಸಿ… Read More »

ಮನೆಗೆ ಮರಳುತ್ತಿದ್ದ ಸನ್ನಿಧಿ ದೇವರ ಪಾದಕ್ಕೆ| ಕಾಲುಸಂಕದಿಂದ ಬಿದ್ದ ವಿದ್ಯಾರ್ಥಿನಿಯ ಶವ ಪತ್ತೆ

ಸಮಗ್ರ ನ್ಯೂಸ್: ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಕಾಲುಸಂಕದಿಂದ ಆಯತಪ್ಪಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿ 2ನೇ ತರಗತಿಯ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ ಇಂದು ಸಂಜೆ ಅಲ್ಲೇ ಸಮೀಪದಲ್ಲಿ ಪತ್ತೆಯಾಗಿದೆ. ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ ಕೂಡ ಬುಧವಾರ ಸಂಜೆವರೆಗೂ ಬಾಲಕಿಯ ಬಗ್ಗೆ ಸುಳಿವು ಇರಲಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ

ಮನೆಗೆ ಮರಳುತ್ತಿದ್ದ ಸನ್ನಿಧಿ ದೇವರ ಪಾದಕ್ಕೆ| ಕಾಲುಸಂಕದಿಂದ ಬಿದ್ದ ವಿದ್ಯಾರ್ಥಿನಿಯ ಶವ ಪತ್ತೆ Read More »