August 2022

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್

ಸಮಗ್ರ ನ್ಯೂಸ್: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 515 ಅಂಶ ಏರಿಕೆ ಕಂಡು ಮತ್ತೆ 59 ಸಾವಿರದ ಮಟ್ಟವನ್ನು ದಾಟಿತು. ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರ ಜೊತೆಗೆ ಹೂಡಿಕೆದಾರರು ಐ.ಟಿ, ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಸೂಚ್ಯಂಕದ ಏರಿಕೆಗೆ ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124 ಅಂಶ ಹೆಚ್ಚಾಗಿ 17,659 ಅಂಶಗಳಿಗೆ ತಲುಪಿತು. ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್‌ ಬ್ಯಾಂಕ್‌ ಷೇರು ಶೇ 2.75ರಷ್ಟು ಗರಿಷ್ಠ ಏರಿಕೆ ಕಂಡಿತು. […]

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್ Read More »

ಬಿಗ್ ಭಾಸ್ ಒಟಿಟಿ| ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ಪುಟ್ಟಗೌರಿ ಸಾನ್ಯಾ

ಸಮಗ್ರ ನ್ಯೂಸ್: ತಮ್ಮ ಹೊಟ್ಟೆ ವಿಚಾರವಾಗಿ ಟೀಕೆಗೆ ಒಳಗಾದ ಆರ್ಯವರ್ಧನ್ ಗುರೂಜಿಗೆ ಬಿಗ್​ಬಾಸ್ ಮನೆಯಲ್ಲಿ ಲವ್ ಪ್ರಪೋಸಲ್ ಬಂದಿದೆ. ಯಾರಿಂದ ಗೊತ್ತಾ? 22 ವರ್ಷದ ಸಾನ್ಯಾ ಅಯ್ಯರ್​ನಿಂದ. ಹೌದು. ಕಿರುತೆರೆ ನಟಿ ಚೆಲುವೆ ಸಾನ್ಯಾ ಗುರೂಜಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಆರ್ಯವರ್ಧನ್ ಗುರೂಜಿ ಈ ಬಾರಿ ಓಟಿಟಿ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಿದ್ದು, ಇಲ್ಲಿ ಇವರ ನಂಬರ್ ಗೇಮ್​ ವರ್ಕ್ ಆಗುತ್ತಾ ನೋಡಬೇಕಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್​ ಸಹ

ಬಿಗ್ ಭಾಸ್ ಒಟಿಟಿ| ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ಪುಟ್ಟಗೌರಿ ಸಾನ್ಯಾ Read More »

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಎಸಿಬಿ ರಚನೆ ಸರ್ಕಾರದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಎಸಿಬಿ ರಚನೆ ಆದೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಅಗತ್ಯವಿದೆ. ಮೂರು ವರ್ಷಗಳ ಅವಧಿಗೆ ಅಧಿಕಾರಿಗಳ ನೇಮಕ ಮಾಡಬೇಕು. ಲೋಕಾಯುಕ್ತರ ನೇಮಕದ

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ Read More »

ಪ್ರವೀಣ್ ಮರ್ಡರ್ ಮಿಸ್ಟ್ರಿ| ಕೊಲೆಯಿಂದ ಬಂಧನದವರೆಗಿನ ಸಂಪೂರ್ಣ ಸ್ಟೋರಿ

ಸಮಗ್ರ ನ್ಯೂಸ್: ಹಿಂದೂ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿದೆ. ಇನ್ನು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶಫೀಕ್, ರಿಯಾಜ್, ಸದ್ದಾಂ, ಬಶೀರ್, ಸೇರಿ 10 ಮಂದಿ ಅರೆಸ್ಟ್ ಆಗಿದ್ದು ಆರೋಪಿಗಳಿಗೆ ಸಹಾಯ ನೀಡಿದ್ದ ಒಟ್ಟು 9 ಮಂದಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಮೂವರು ಮಹಿಳೆಯರೂ ಇದ್ದು, ಹಂತಕರೆಂದು

ಪ್ರವೀಣ್ ಮರ್ಡರ್ ಮಿಸ್ಟ್ರಿ| ಕೊಲೆಯಿಂದ ಬಂಧನದವರೆಗಿನ ಸಂಪೂರ್ಣ ಸ್ಟೋರಿ Read More »

ಇದು ಭಾರತದ ಅತ್ಯಂತ ದುಬಾರಿ ರಾಖಿ! ಇಲ್ಲಿದೆ ಇದರ ವಿಶೇಷತೆ

ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಬಂದೇ ಬಿಟ್ಟಿದೆ. ಹಬ್ಬ ಹತ್ತಿರ ಬರ್ತಿದ್ದಂತೆ ಅಂಗಡಿಗಳಲ್ಲೆಲ್ಲ ಗ್ರಾಹಕರನ್ನು ಸೆಳೆಯುವ ಕಸರತ್ತು ಜೋರಾಗಿದೆ. ಸಹೋದರಿಯರು ವಿಶಿಷ್ಟ ರಾಖಿಯನ್ನು ಹುಡುಗಿ ಸಹೋದರರಿಗೆ ಕಟ್ಟುತ್ತಿದ್ದಾರೆ. ಆದರೆ ಇಲ್ಲೊಂದು ವಿಶಿಚ್ಟ ಹಾಗು ಭಾರತದ ಅತ್ಯಂತ ದುಬಾರಿ ರಾಖಿಯೊಂದು ಇಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಗುಜರಾತ್‌ನ ಸೂರತ್‌ನಲ್ಲಿ ವಿಶಿಷ್ಟ ರಾಖಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ದೀಪಕ್‌ ಭಾಯಿ ಚೋಕ್ಸಿ ಎಂಬುವವರು ಈ ವಿಶಿಷ್ಟ ರಾಖಿಯನ್ನು ತಯಾರಿಸಿದ್ದಾರೆ. ರಕ್ಷಾಬಂಧನದ ದಿನ ಆಭರಣದಂತೆಯೂ ಇದನ್ನು ಧರಿಸಬಹುದು ಎನ್ನುತ್ತಾರೆ. ಇದರಲ್ಲಿ ಚಿನ್ನ,

ಇದು ಭಾರತದ ಅತ್ಯಂತ ದುಬಾರಿ ರಾಖಿ! ಇಲ್ಲಿದೆ ಇದರ ವಿಶೇಷತೆ Read More »

ದೋಣಿಗಲ್ ನಲ್ಲಿ ಮತ್ತೆ ಭೂಕುಸಿತ| ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರಿಂದ ರಾ.ಹೆದ್ದಾರಿ ತಡೆದು ಪ್ರತಿಭಟನೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷ್ಯದ ಪರಿಣಾಮ ಭೂಕುಸಿತ ಉಂಟಾಗಿ 50ಕ್ಕೂ ಹೆಚ್ಚು ಎಕರೆ ಕಾಫಿ ತೋಟ ಹಾಗೂ ಗದ್ದೆಗೆ ಹಾನಿಯಾಗಿದ್ದು ಕೂಡಲೆ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂತ್ರಸ್ತರು ಕೆಲಕಾಲ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 75 ದೋಣಿಗಲ್ ಸಮೀಪ ಭೂಕುಸಿತ ಉಂಟಾಗಿ ಸುಮಾರು 15 ಮಂದಿಯ ಕಾಫಿ ತೋಟ ಹಾಗೂ ಗದ್ದೆಗಳಿಗೆ ತೀವ್ರ ಹಾನಿಯಾಗಿದೆ. ಆದರೆ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ

ದೋಣಿಗಲ್ ನಲ್ಲಿ ಮತ್ತೆ ಭೂಕುಸಿತ| ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರಿಂದ ರಾ.ಹೆದ್ದಾರಿ ತಡೆದು ಪ್ರತಿಭಟನೆ Read More »

ಮುನಿಸಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದ ಪ್ರಿಯಕರ

ಸಮಗ್ರ ನ್ಯೂಸ್: ಪ್ರೀತಿ ನಿರಾಕರಿಸಿದ ಪ್ರೇಯಸಿಯನ್ನು ಮಾಜಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಸೂರ್ಯಪ್ರಿಯಾ (24) ಕೊಲೆಯಾದ ದುರ್ದೈವಿ. ಈಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ ದಂಪತಿಯ ಪುತ್ರಿ. ತನ್ನ ನಿವಾಸದಲ್ಲಿ ಯಾರು ಇಲ್ಲದಿದ್ದಾಗ ಸೂರ್ಯಪ್ರಿಯಾ ಹತ್ಯೆಯಾಗಿದ್ದಾರೆ. ಅಂಜುಮೂರ್ತಿಮಂಗಲದ ಅನಕಪ್ಪರ ನಿವಾಸಿ ಸುಜೀಶ್​ (27) ಕೊಲೆ ಮಾಡಿದ ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸೂರ್ಯಪ್ರಿಯಾ, ಡೆಮೋಕ್ರೆಟಿಕ್​ ಯೂತ್​ ಫೆಡರೇಶನ್​ ಆಫ್​ ಇಂಡಿಯಾದ ಬ್ಲಾಕ್​

ಮುನಿಸಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದ ಪ್ರಿಯಕರ Read More »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ(DA)

ಸಮಗ್ರ ನ್ಯೂಸ್: ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿರುವ ಮುಂದಿನ ಸುತ್ತಿನ ತುಟ್ಟಿ ಭತ್ಯೆ ಹೆಚ್ಚಳದ ಕುರಿತಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಕೊಡುವ ಸಾಧ್ಯತೆ ಇದೆ. ಇತ್ತೀಚಿನ ಹಣದುಬ್ಬರದ ಅಂಕಿಅಂಶಗಳನ್ನು ಆಧರಿಸಿ ಶೇಕಡಾ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗಲಿದ್ದು, 38 ಪ್ರತಿಶತದವರೆಗೆ ತುಟ್ಟಿಭತ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಜನವರಿಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3 ರಷ್ಟು ಡಿಎ ಹೆಚ್ಚಳ ಮಾಡಿತ್ತು. ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಆಧರಿಸಿ

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್| ಶೀಘ್ರದಲ್ಲೇ ಹೆಚ್ಚಳವಾಗಲಿದೆ ತುಟ್ಟಿಭತ್ಯೆ(DA) Read More »

“ಪೋಲೀಸ್ ಇಲಾಖೆಗೆ ಧನ್ಯವಾದ,ಆರೋಪಿಗಳ ಪರವಾಗಿ ಯಾವ ವಕೀಲನೂ ವಕಾಲತು ನಡೆಸಬಾರದು”- ಪ್ರವೀಣ್ ತಾಯಿ ಮನವಿ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಪ್ರಮುಖ ಆರೋಪಿಗಳ ಬಂಧನವಾಗಿದೆ. ಈ ಬಗ್ಗೆ ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಪೋಲೀಸ್ ಇಲಾಖೆಗೆ ಧನ್ಯವಾದ ಹೇಳಿದ್ದಾರೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಮತ್ತು ಯಾವ ವಕೀಲನೂ ಆರೋಪಿಗಳಿಗೆ ವಕಾಲತು ನಡೆಸಬಾರದು ಎಂದು ಪ್ರವೀಣ್ ತಾಯಿ ರತ್ನಾವತಿ ವಕೀಲರಿಗೆ ಮನವಿ ಮಾಡಿದ್ದಾರೆ.

“ಪೋಲೀಸ್ ಇಲಾಖೆಗೆ ಧನ್ಯವಾದ,ಆರೋಪಿಗಳ ಪರವಾಗಿ ಯಾವ ವಕೀಲನೂ ವಕಾಲತು ನಡೆಸಬಾರದು”- ಪ್ರವೀಣ್ ತಾಯಿ ಮನವಿ Read More »

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಮಾಸ್ಕ್ ಧಾರಣೆ ಕಡ್ಡಾಯ – ಸಚಿವ ಡಾ. ಸುಧಾಕರ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಈ ಹಿನ್ನಲೆಯಲ್ಲಿಯೇ ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಿದೆ. ಇಂದು ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ರಾಜ್ಯದಲ್ಲಿ ಮಾಸ್ಕ್ ಎಲ್ಲರೂ ಧರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. ಕೊರೋನಾ ಹೆಚ್ಚಳ ಕಾರಣದಿಂದಾಗಿ 60 ವರ್ಷ ಮೇಲ್ಪಟ್ಟವರು ತಪ್ಪದೇ ಶೀಘ್ರವೇ 3ನೇ ಬೂಸ್ಟರ್ ಡೋಸ್ ಲಸಿಕೆಯನ್ನು ಪಡೆಯಬೇಕು. ಇಂದಿನ ಸಭೆಯಲ್ಲಿ

ಕೊರೊನಾ ಹೆಚ್ಚಳ ಹಿನ್ನಲೆ| ರಾಜ್ಯದಲ್ಲಿ ಮಾಸ್ಕ್ ಧಾರಣೆ ಕಡ್ಡಾಯ – ಸಚಿವ ಡಾ. ಸುಧಾಕರ್ Read More »