August 2022

ಅಧಿಕಾರಿಗಳ ಕಿರುಕುಳಕ್ಕೆ ಬಿಎಂಟಿಸಿ ಚಾಲಕ ನೇಣಿಗೆ ಶರಣು

ಬೆಂಗಳೂರು: ಬಿಎಂಟಿಸಿ ಚಾಲಕ ನೇಣಿಗೆ ಶರಣಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ರಾಜರಾಜೇಶ್ವರಿ ನಗರ ಬಸ್ ಡಿಪೋ 21 ರ ಬಿಎಂಟಿಸಿ ಬಸ್​ ಚಾಲಕ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಅನೇಕ ಬಿಎಂಟಿಸಿ ನೌಕರರು ಸಾವಿಗೆ ಶರಣಾಗಿದ್ದರು. ಅದರಂತೆ ಹೊಳೆಬಸಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ತಿಂಗಳ ಕಳೆದ 21 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. […]

ಅಧಿಕಾರಿಗಳ ಕಿರುಕುಳಕ್ಕೆ ಬಿಎಂಟಿಸಿ ಚಾಲಕ ನೇಣಿಗೆ ಶರಣು Read More »

ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ

ದೆಹಲಿ: ಯೋಜನಾ ಆಯೋಗದ ಮಾಜಿ ಸದಸ್ಯ ಹಾಗೂ ಗ್ರಾಮೀಣ ಆರ್ಥಿಕತೆಯ ಬಗ್ಗೆ ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾಗಿದ್ದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಭಿಜಿತ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ʻನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತವಾಗಿದೆ. ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರುʼ ಎಂದು ಅವರ ಸಹೋದರ ಡಾ. ಪ್ರಣಬ್ ಸೇನ್ ಹೇಳಿದ್ದಾರೆ.

ದೇಶದ ಅಗ್ರಗಣ್ಯ ತಜ್ಞರಲ್ಲಿ ಒಬ್ಬರಾದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ Read More »

ಸಾರ್ವಜನಿಕ ಸ್ಥಳ ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ; ಆರೋಗ್ಯ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಸೋಮವಾರ ಸುತ್ತೋಲೆ ಹೊರಡಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ವಸತಿ ಸಮುಚ್ಚಯಗಳ ಸಾಮಾನ್ಯ ಪ್ರದೇಶಗಳು, ಛತ್ರಗಳು, ಚಿತ್ರಮಂದಿರಗಳು, ಶಾಪಿಂಗ್‌ ಮಾಲ್‌ಗಳು, ಬಸ್‌, ಮೆಟ್ರೊ ರೈಲು, ರೈಲುಗಳು ಮತ್ತು ಇತರ ಸಾಮಾನ್ಯ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೋಟೆಲ್‌, ಕ್ಲಬ್‌, ರೆಸ್ಟೋರೆಂಟ್‌, ಪಬ್‌, ಬಾರ್‌ಗಳಲ್ಲಿ ಆಹಾರ ಸೇವನೆಯ ಸಮಯವನ್ನು ಹೊರತುಪಡಿಸಿದ ಅವಧಿಯಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ. ಶಿಕ್ಷಣ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲಿನ

ಸಾರ್ವಜನಿಕ ಸ್ಥಳ ಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ; ಆರೋಗ್ಯ ಇಲಾಖೆ Read More »

ರಾಜ್ಯದಲ್ಲಿ ಮೂರು ದಿನ ಮಹಾಮಳೆ ಮುನ್ಸೂಚನೆ| ಎಲ್ಲೋ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಗೌರಿ ಗಣೇಶದ ಹಬ್ಬದ ಹೊತ್ತಲ್ಲೇ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ರಾಜ್ಯದ ಬಹುತೇಕ ಭಾಗದಲ್ಲಿ ಭಾರಿ ಮಳೆಯ ಕಾರಣ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರದಿಂದ ಮೂರು ದಿನಗಳ ಕಾಲ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.ಆಗಸ್ಟ್ 30 ರಿಂದ ಸೆಪ್ಟೆಂಬರ್ 1 ರವರೆಗೆ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ರಾಮನಗರ, ತುಮಕೂರು, ದಾವಣಗೆರೆ,

ರಾಜ್ಯದಲ್ಲಿ ಮೂರು ದಿನ ಮಹಾಮಳೆ ಮುನ್ಸೂಚನೆ| ಎಲ್ಲೋ ಅಲರ್ಟ್ ಘೋಷಣೆ Read More »

ಭಾರೀ ಮಳೆಗೆ ಮುಳುಗಿದ ರಾಮನಗರ| ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಸುರಿದ ಕುಂಭದ್ರೋಣ ಮಳೆಗೆ ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಜನರು ತತ್ತರಿಸುವಂತಾಗಿದೆ. ಭಾರೀ ಮಳೆಯಿಂದಾಗಿ ಬೆಂಗಳೂರು, ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಬಸ್ಸು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಿ ತೇಲುತ್ತಿದ್ದವು. ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿ, ಬಸವನಪುರ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂಡರ್‍ಪಾಸ್‍ನಲ್ಲಿ ನೀರು ತುಂಬಿದ್ದು, ವಾಹನಗಳು ಮುಳುಗಡೆಯಾಗಿವೆ. ಎರಡೂ ಕಡೆಯೂ ಟ್ರಾಫಿಕ್‍ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಇಂದರಿಂದ

ಭಾರೀ ಮಳೆಗೆ ಮುಳುಗಿದ ರಾಮನಗರ| ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಹಿಜಾಬ್ ವಿವಾದ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಿ ಹೈಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ ಶಾಲಾ-ಕಾಲೇಜುಗಳಲ್ಲಿ ಯಾವುದೇ ಧರ್ಮದ ಪ್ರತಿನಿಧಿಸುವಂತಿಲ್ಲ. ಸಮವಸ್ತ್ರ ಧರಿಸಬೇಕು ಎಂದು ಆದೇಶಿಸಿತ್ತು. ಹಿಜಾಬ್‌ ವಿವಾದ ಕುರಿತು ಸುಪ್ರೀಂಕೋರ್ಟ್‌ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು,

ಸುಪ್ರೀಂನಲ್ಲಿ ಹಿಜಾಬ್ ಮೇಲ್ಮನವಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ Read More »

ಬೆಳ್ತಂಗಡಿ: ಬೈಕ್- ಟಿಪ್ಪರ್ ನಡುವೆ ಡಿಕ್ಕಿ; ವಿದ್ಯಾರ್ಥಿ ದುರ್ಮರಣ

ಸಮಗ್ರ ನ್ಯೂಸ್: ಬೈಕಿಗೆ ಟಿಪ್ಪರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಐಟಿಐ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಆ.29ರ ಬೆಳಗ್ಗೆ ಸಂಭವಿಸಿದೆ. ಕಕ್ಕೆಪದವು ನಿವಾಸಿ ಮುಹಮ್ಮದ್ ಸಫ್ವಾನ್(20) ಮೃತಪಟ್ಟ ದುರ್ದೈವಿ. ಈತ ತುಂಬೆ ಐಟಿಐ ಸಂಸ್ಥೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದಾ ಮಂಟಪದ ಬಳಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ, ಕಾಲೇಜು ವಿದ್ಯಾರ್ಥಿ

ಬೆಳ್ತಂಗಡಿ: ಬೈಕ್- ಟಿಪ್ಪರ್ ನಡುವೆ ಡಿಕ್ಕಿ; ವಿದ್ಯಾರ್ಥಿ ದುರ್ಮರಣ Read More »

ಆತಂಕಪಡಬೇಡಿ,ಧೈರ್ಯವಾಗಿರಿ| ಆರೋಪಗಳಿಂದ ಮುಕ್ತನಾಗಿ ಬರುತ್ತೇನೆ – ಮುರುಘಾ ಶ್ರೀ ಹೇಳಿಕೆ

ಸಮಗ್ರ ನ್ಯೂಸ್: ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿ ಇರುತ್ತೇವೆ. ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ನಾವುಗಳು ಈ ನೆಲದ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕಾನೂನಿಗೆ ನಾವು ಯಾವತ್ತೂ ಗೌರವ ಕೊಡುತ್ತೇವೆ. ಇದರಲ್ಲಿ ಯಾವುದೇ ಪಲಾಯನ ವಾದ ಇಲ್ಲ ಎಂದು ಚಿತ್ರದುರ್ಗದ ಮುರುಘಾಮಠದಲ್ಲಿ ಡಾ.ಶಿವಮೂರ್ತಿ ಸ್ವಾಮೀಜಿಗಳು ಹೇಳಿದ್ದಾರೆ. ಯಾವುದೇ ಊಹಾಪೋಹಗಳಿಗೆ ಅವಕಾಶ ಇಲ್ಲ. ಈ ಮುಖಾಂತರ ಶ್ರೀ ಮಠದ ಭಕ್ತರು ಗಾಳಿ ಸುದ್ದಿಗಳಿಗೆ ಕಿವಿ ಕೊಡಬಾರದು ಎಂದು ಮುರುಘಾ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ. ಎಲ್ಲ ರೀತಿಯ

ಆತಂಕಪಡಬೇಡಿ,ಧೈರ್ಯವಾಗಿರಿ| ಆರೋಪಗಳಿಂದ ಮುಕ್ತನಾಗಿ ಬರುತ್ತೇನೆ – ಮುರುಘಾ ಶ್ರೀ ಹೇಳಿಕೆ Read More »

ಬಾಲಕಿಯರ ‌ಮೇಲೆ ಲೈಂಗಿಕ ದೌರ್ಜನ್ಯ| ಪೋಕ್ಸೋ ಕಾಯ್ದೆಯಡಿ ಮುರುಘಾ ಮಠ‌ ಶಿವಮೂರ್ತಿ ಶರಣರು ಅರೆಸ್ಟ್

ಸಮಗ್ರ ನ್ಯೂಸ್: ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದು, ಪೋಕ್ಸೋ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಶ್ರೀಮಠದ ಪೀಠಾಧ್ಯಕ್ಷರದ ಶ್ರೀ ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಶನಿವಾರ ಮೈಸೂರಿನಲ್ಲಿ ಒಡನಾಡಿ ಸಂಸ್ಥೆ ಮೂಲಕ ದಾಖಲಾದ ಲೈಂಗಿಕ ಕಿರುಕುಳ ದೂರಿನ ಹಿನ್ನೆಲೆ ಪೋಕ್ಸೋ ಪ್ರಕರಣ‌ ದಾಖಲಾಗಿದೆ. ಶ್ರೀಗಳ ಬಂಧನದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿರುವ ಮುರುಘಾ ಮಠದ ಮುಂಬಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ರೀಗಳನ್ನು ಪೊಲೀಸ್ ಬಿಗಿ

ಬಾಲಕಿಯರ ‌ಮೇಲೆ ಲೈಂಗಿಕ ದೌರ್ಜನ್ಯ| ಪೋಕ್ಸೋ ಕಾಯ್ದೆಯಡಿ ಮುರುಘಾ ಮಠ‌ ಶಿವಮೂರ್ತಿ ಶರಣರು ಅರೆಸ್ಟ್ Read More »

ಕಾಫಿನಾಡು ಚಂದುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಅನುಶ್ರೀ

ಬೆಂಗಳೂರು: ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಅಪಾರ ಅಭಿಮಾನಿಗಳ ಮನಗೆದ್ದಿರುವ ಕಾಫಿನಾಡು ಚಂದುಗೆ ಇದೀಗ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಕಾಫಿನಾಡು ಚಂದುಗೆ ನಿರೂಪಕಿ ಅನುಶ್ರೀ ಟೈಟಾನ್ ವಾಚ್ ಗಿಫ್ಟ್‌ ನೀಡಿ ಅವರೇ ಚಂದು ಕೈಗೆ ವಾಚ್‌ ಕಟ್ಟಿದ್ದಾರೆ. ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಾಫಿನಾಡು ಚಂದು ಗುರುತಿಸಿಕೊಂಡಿದ್ದಾರೆ. ತಮ್ಮ ಪ್ರತಿ ವೀಡಿಯೋದಲ್ಲಿಯೂ ನಾನು ಶಿವಣ್ಣ ಮತ್ತು ಪುನೀತ್ ಅಣ್ಣ ಅವರ ಅಭಿಮಾನಿ ಎಂದು ತಮ್ಮ ಅಭಿಮಾನವನ್ನ ತಿಳಿಸುತ್ತಿದ್ದರು. ಡಿಕೆಡಿ ವೇದಿಕೆಯಲ್ಲಿ ಶಿವಣ್ಣ

ಕಾಫಿನಾಡು ಚಂದುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಅನುಶ್ರೀ Read More »