August 2022

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಸಾವು

ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ಸಾವನ್ನಪ್ಪಿದ ಘಟನೆಯೊಂದು ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ತಡರಾತ್ರಿ ನಡೆದಿದೆ. ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ಪುತ್ರ ತಿಲಕ ಕಲಬುರ್ಗಿ (22) ಮೃತ ದುರ್ದೈವಿ. ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವ ವೇಳೆ ಈ ಅವಘಡ ಸಂಭವಿಸಿದೆ. ತಿಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹುಬ್ಬಳ್ಳಿ […]

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಸಾವು Read More »

ಕೊಟ್ಟಿಗೆಹಾರ: ಆನೆ ದಾಳಿಗೆ ರೈತ ಬಲಿ; ಮೃತದೇಹವನ್ನು ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ

ಸಮಗ್ರ ನ್ಯೂಸ್: ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾರ್ಗೋಡು ಗ್ರಾಮದಲ್ಲಿ ನಡೆದಿದೆ. ಮೃತರನ್ನ 52 ವರ್ಷದ ಆನಂದ್ ದೇವಾಡಿಗ ಎಂದು ಗುರುತಿಸಲಾಗಿದೆ. ಮೃತ ಆನಂದ್ ದೇವಾಡಿಗ ಮನೆಯ ಹಿಂಭಾಗದಲ್ಲಿ ಹಸುವನ್ನು ಹುಡುಕಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ದಾಳಿ ಮಾಡಿದ ಕಾಡಾನೆ ಸುಮಾರು ಅರ್ಧ ಕಿ.ಮೀ ಗಿಂತಲೂ ಹೆಚ್ಚು ದೂರ ಮೃತ ದೇಹವನ್ನು ಎಳೆದೊಯ್ದಿದೆ. ಕಾಡಿನ ಒಳಗೆ ಮೃತ ಆನಂದ್ ಅವರ ದೇಹದ ಅಂಗಾಗಗಳು ಕಾಡಿನ ಸುಮಾರು ಅರ್ಧ ಕಿ.ಮೀ.

ಕೊಟ್ಟಿಗೆಹಾರ: ಆನೆ ದಾಳಿಗೆ ರೈತ ಬಲಿ; ಮೃತದೇಹವನ್ನು ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ Read More »

ಗುಡ್ ನ್ಯೂಸ್; ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ

ಸಮಗ್ರ ನ್ಯೂಸ್: ಉದ್ಯೋಗಾಕಾಂಕ್ಷಿಗಳಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮಕ್ಕಾಗಿ ಸಮಾಲೋಚಕರ ಹುದ್ದೆ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ಸಮಾಲೋಚಕರು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು. ಸಂಸ್ಥೆಯ ಹೆಸರು: ಸಾರ್ವಜನಿಕ ಶಿಕ್ಷಣ ಇಲಾಖೆಹುದ್ದೆಯ ಹೆಸರು: ಸಮಾಲೋಚಕರುಹುದ್ದೆಗಳ ಸಂಖ್ಯೆ: ನಿಗದಿಪಡಿಸಿಲ್ಲಉದ್ಯೋಗ ಸ್ಥಳ: ಕರ್ನಾಟಕದಾದ್ಯಂತವೇತನ: ಮಾಸಿಕ ರೂ.60,000

ಗುಡ್ ನ್ಯೂಸ್; ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ Read More »

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು

ಸಮಗ್ರ ನ್ಯೂಸ್: ವಾಸಿಸುತ್ತಿದ್ದ ಕಟ್ಟಡದ ಎರಡನೇ ಮಹಡಿಯ ಟೆರೇಸ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ನಗರದ ಹೆಣ್ಣೂರಿನಲ್ಲಿ ರವಿವಾರ ನಡೆದಿದೆ. ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತಪಟ್ಟ ಟೆಕ್ಕಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ತಮ್ಮ ಕಟ್ಟಡದ ಟೆರೇಸ್‍ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು. ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಇವರು ವಾಸವಿದ್ದರು.

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು Read More »

ಕುಟುಂಬಸ್ಥರ ಒತ್ತಡಕ್ಕೆ ಗೆಲುವು| ಪ್ರವೀಣ್ ಕುಮಾರ್ ಬಿಡುಗಡೆ ಸಾಧ್ಯತೆ ಕಡಿಮೆ

ಸಮಗ್ರ ನ್ಯೂಸ್: ಚಿನ್ನಕ್ಕಾಗಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಜೈಲಿನಲ್ಲಿರುವ ಪ್ರವೀಣ್‌ ಕುಮಾರ್‌ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ಬಿಡುಗಡೆಯಾಗುವ ಕೈದಿಗಳಲ್ಲಿ ಪ್ರವೀಣ್‌ ಕುಮಾರ್‌ ಕೂಡ ಇದ್ದು ಬಿಡುಗಡೆಗೆ ಮುನ್ನ ಆತನ ಬಗ್ಗೆ ವರದಿ ನೀಡುವಂತೆ ಕಾರಾಗೃಹ ಇಲಾಖೆ ದ.ಕ.ಜಿಲ್ಲಾ ಪೊಲೀಸರಿಂದ ವರದಿ ಕೇಳಿತ್ತು. ಅದರಂತೆ ಕುಟುಂಬಸ್ಥರ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಪ್ರವೀಣ್‌ನನ್ನು ಬಿಡುಗಡೆ ಮಾಡಬಾರದು, ಬಿಡುಗಡೆ ಮಾಡಿದರೆ ಕುಟುಂಬಕ್ಕೆ ಜೀವ ಭಯವಿದೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ

ಕುಟುಂಬಸ್ಥರ ಒತ್ತಡಕ್ಕೆ ಗೆಲುವು| ಪ್ರವೀಣ್ ಕುಮಾರ್ ಬಿಡುಗಡೆ ಸಾಧ್ಯತೆ ಕಡಿಮೆ Read More »

75 ವರ್ಷಗಳಲ್ಲಿ ದೇಶ ಹಲವು ಸವಾಲುಗಳನ್ನು ಮೆಟ್ಟಿನಿಂತಿದೆ – ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತ ತನ್ನ 75 ವರ್ಷಗಳ ಪ್ರಯಾಣದಲ್ಲಿ ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದ್ದು, ಅನೇಕ ಸವಾಲುಗಳನ್ನು ಎದುರಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ ಎಂದು ಕೆಂಪುಕೋಟೆ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಸತತ 9ನೇ ಬಾರಿಗೆ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಈ ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ, ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನವಿದು.

75 ವರ್ಷಗಳಲ್ಲಿ ದೇಶ ಹಲವು ಸವಾಲುಗಳನ್ನು ಮೆಟ್ಟಿನಿಂತಿದೆ – ಪ್ರಧಾನಿ ಮೋದಿ Read More »

ಅಮೃತ ಸ್ವಾತಂತ್ರ್ಯೋತ್ಸವ ಸಂಭ್ರಮ; ಕೆಂಪುಕೋಟೆಯಿಂದ ನೇರಪ್ರಸಾರ

ಸಮಗ್ರ ನ್ಯೂಸ್: ದೇಶದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7.15 ಕ್ಕೆ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ 2 ವರ್ಷದ ಸ್ವಾತಂತ್ರ್ಯ ದಿನಾಚರಣೆಗಳು ಕೋವಿಡ್ 19 ಸೋಂಕಿನ ಹಾವಳಿಯಿಂದ ಮಂಕಾಗಿದ್ದವು. ಈ ಬಾರಿ ಕೋವಿಡ್ ಅಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಸೇರಿ ಹಲವು ಅಭಿಯಾನಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಇಂದು

ಅಮೃತ ಸ್ವಾತಂತ್ರ್ಯೋತ್ಸವ ಸಂಭ್ರಮ; ಕೆಂಪುಕೋಟೆಯಿಂದ ನೇರಪ್ರಸಾರ Read More »

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ವಾಟ್ಸ್ ಆಪ್ ಚಾಟ್ ! ವಿಮಾನ ಸ್ಥಗಿತ

ಸಮಗ್ರ ನ್ಯೂಸ್: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವಕ-ಯುವತಿಯರು ಮಾಡುತ್ತಿದ್ದ ವಾಟ್ಸಾಪ್ ಚಾಟಿಂಗ್ ಆತಂಕ ಹುಟ್ಟಿಸಿತ್ತು. ರನ್ ವೇನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ವಿಮಾನ ಸಂಚಾರ ಸ್ಥಗಿತಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ. ಇದೇ ಕಾರಣದಿಂದಾಗಿ ಇನ್ನೇನು ಮುಂಬೈಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನವನ್ನು ಸ್ಥಗಿತಗೊಳಿಸಿದ ಘಟನೆ ನಡೆದಿದೆ. ಇಂದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದಂತ ಇಬ್ಬರು ಯುವಕ-ಯುವತಿಯರು ಪರಸ್ಪರ ಚಾಟಿಂಗ್ ಮಾಡಿಕೊಂಡಿದ್ದರು. ಯುವತಿ ಬೆಂಗಳೂರಿಗೆ, ಯುವಕ ಮುಂಬೈಗೆ ತೆರಳೋದಕ್ಕೆ ಆಗಮಿಸಿದ್ದರು. ಯುವತಿ ನಿಲ್ದಾಣದಲ್ಲಿಯೇ ಯುವಕನೊಂದಿಗೆ

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಆತಂಕಕ್ಕೆ ಕಾರಣವಾದ ವಾಟ್ಸ್ ಆಪ್ ಚಾಟ್ ! ವಿಮಾನ ಸ್ಥಗಿತ Read More »

ಸುಳ್ಯದ ಆಡಳಿತಕ್ಕೆ ಭ್ರಮೆಯೋ? ಸುಳ್ಯಕ್ಕೆ ‌ಭ್ರಮೆಯೋ? ಕೀಬೋರ್ಡ್ ವಾರಿಯರ್ ಜೊತೆ ನ.ಪಂ ಅಧ್ಯಕ್ಷರ ಟಾಕ್ ವಾರ್!

ಸಮಗ್ರ ನ್ಯೂಸ್: ಜಾಲತಾಣಗಳಲ್ಲಿ ಸಮಸ್ಯೆ ಮುಂದಿಟ್ಟ ಆರ್.ಜೆ ತ್ರಿಶೂಲ್ ಗೆ ಕೀಬೋರ್ಡ್ ವಾರಿಯರ್ ಎಂದು ಕಮೆಂಟ್ ಹಾಕಿದ ಸುಳ್ಯ ನ.ಪಂ‌ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತೆ ಟ್ರೋಲಿಗೆ ಒಳಗಾಗಿದ್ದಾರೆ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮತ್ತು ತ್ರಿಶೂಲ್ ನಡುವೆ ಮತ್ತೊಂದು ಟಾಕ್ ವಾರ್ ನಡೆದಿದ್ದು ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ. ಸುಳ್ಯ ನಗರದ ಹೃದಯ ಭಾಗದಲ್ಲಿ ಇರುವಂತಹ ಗುಂಡಿ ರಸ್ತೆಗಳ ಕುರಿತಂತೆ ಈ ಫೋನ್ ಸಂಭಾಷಣೆ ನಡೆದಿದ್ದು, ಮಾತಿನ ನಡುವೆ ವಿನಯಕುಮಾರ್

ಸುಳ್ಯದ ಆಡಳಿತಕ್ಕೆ ಭ್ರಮೆಯೋ? ಸುಳ್ಯಕ್ಕೆ ‌ಭ್ರಮೆಯೋ? ಕೀಬೋರ್ಡ್ ವಾರಿಯರ್ ಜೊತೆ ನ.ಪಂ ಅಧ್ಯಕ್ಷರ ಟಾಕ್ ವಾರ್! Read More »

ಸುಳ್ಯ: ಮತ್ತೆ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಸುಳ್ಯದ ‌ಕೆಲಭಾಗಗಳಲ್ಲಿ ಇಂದು(ಆ.14) ಸಂಜೆ ಮತ್ತೆ ಭೂಮಿ ಕಂಪಿಸಿದೆ. ತಾಲೂಕಿನ ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಸಂಜೆ 6ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗುತ್ತಿಗಾರು, ದೇವಚಳ್ಳ, ಮಡಪ್ಪಾಡಿ, ಮರ್ಕಂಜ ಭಾಗಗಳಲ್ಲಿ ಗುಡುಗಿನಂತಹ ಶಬ್ದ ಕೇಳಿಬಂದಿದೆ. ಕಲ್ಮಕಾರಿನ ಗುಳಿಕ್ಕಾನ ಭಾಗದಲ್ಲಿ ಭಾರೀ ಶಬ್ಧ ಕೇಳಿಬಂದಿದ್ದು, ನೆರೆ, ಜಲಪ್ರವಾಹದಿಂದ ಕಂಗೆಟ್ಟ ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಸುಳ್ಯ: ಮತ್ತೆ ಕಂಪಿಸಿದ ಭೂಮಿ Read More »