August 2022

ಜಮ್ಮು: ನದಿಗೆ ಉರುಳಿದ ಬಸ್; 6 ಯೋಧರು ಸಾವು

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ನಲ್ಲಿ ಐಟಿಬಿಪಿ ಪ್ರಯಾಣಿಸುತ್ತಿದ್ದ ಬಸ್ ಉರುಳಿದ ಬಿದ್ದು 6 ಮಂದಿ ಯೋಧರು ಸಾವಿಗೀಡಾಗಿದ್ದು,ಮೂವರಿಗೆ ಗಾಯಗಳಾಗಿವೆ. ಈ ಯೋಧರನ್ನು ಅಮರನಾಥ ಯಾತ್ರೆಯ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ. ಯೋಧರು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು. ಹೆಚ್ಚಿನ ಯೋಧರಿಗೆ ಗಾಯಗಳಾಗಿರುವ ಸಾಧ್ಯತೆ ಇದೆ. 39 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಸಿವಿಲ್ ಬಸ್ ಬ್ರೇಕ್ ಫೇಲ್ ಆದ […]

ಜಮ್ಮು: ನದಿಗೆ ಉರುಳಿದ ಬಸ್; 6 ಯೋಧರು ಸಾವು Read More »

ಇಂದು ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ; ಗಣ್ಯರಿಂದ ನಮನ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಗಲಿ ಇಂದಿಗೆ 4 ವರ್ಷ. ಬಿಜೆಪಿಗೆ ಹೊಸ ರೂಪ ಕೊಟ್ಟ ವಾಜಪೇಯಿಗೆ ಗೌರವಾರ್ಥವಾಗಿ ಮಂಗಳವಾರ ಬಿಜೆಪಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಜಯಘಾಟ್‌ನಲ್ಲಿ ವಾಜಪೇಯಿ ಸಮಾಧಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪುಷ್ಪ ನಮನ ಸಲ್ಲಿಸಿದರು. ರಾಜಕೀಯ ಅಜಾತಶತ್ರುವಾಗಿದ್ದ ವಾಜಪೇಯಿ 2018ರ ಆಗಸ್ಟ್ 16ರಂದು ಅಸ್ತಂಗತರಾಗಿದ್ದರು.

ಇಂದು ಮಾಜಿ ಪ್ರಧಾನಿ ವಾಜಪೇಯಿ ಪುಣ್ಯತಿಥಿ; ಗಣ್ಯರಿಂದ ನಮನ Read More »

ಗುಂಡ್ಯ: ಜೈಲಿನಿಂದ ಬಿಡುಗಡೆಯಾಗುತ್ತಲೇ ಬೈಕ್ ಕದ್ದೊಯ್ದು ಜೈಲುಪಾಲಾದ ಕಳ್ಳ!!

ಸಮಗ್ರ ನ್ಯೂಸ್: ಜೈಲಿನಿಂದ ಬಿಡುಗಡೆಯಾಗುತ್ತಲ್ಲೇ ಬೈಕ್‌ ಕಳ್ಳತನ ಮಾಡಿದ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಗುಂಡ್ಯದಲ್ಲಿ ನಡೆದಿದೆ. ಕಣ್ಣೂರು ಜೈಲಿನಿಂದ ನಿನ್ನೆ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಹಾಗೇ ಬಿಡುಗಡೆಯಾದವನು ಮಂಗಳೂರಿನಿಂದ ಬೈಕೊಂದನ್ನು ಕದ್ದು ಅದರಲ್ಲೇ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ. ಹೀಗೆ ಹೋಗುತ್ತಿದ್ದಾಗ ಎಂಜಿರ ಮಲ್ನಾಡ್ ಡಾಬಾದ ಸಮೀಪ ಇರುವ ಪಿ.ಜಿ ಸ್ಟೋರ್‌ ಬಳಿ ಬೈಕ್ ನ ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್‌ ಹಾಕಿಸಿಕೊಳ್ಳಲು ದುಡ್ಡು ಇಲ್ಲದೇ ಅಲ್ಲಿಂದ ಮುಂದಕ್ಕೆ ತೆರಳಲು ಪಿ.ಸಿ ಸ್ಟೋರ್ ಬಳಿ ದಿನಸಿ ಸಾಮಾನು ಖರೀದಿಸಲು ತೆರಳಿದ

ಗುಂಡ್ಯ: ಜೈಲಿನಿಂದ ಬಿಡುಗಡೆಯಾಗುತ್ತಲೇ ಬೈಕ್ ಕದ್ದೊಯ್ದು ಜೈಲುಪಾಲಾದ ಕಳ್ಳ!! Read More »

ಚಲನಚಿತ್ರ ವಿಮರ್ಶಕ ಕೌಶಿಕ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಕಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ಟ್ರ್ಯಾಕರ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 36ವರ್ಷಕ್ಕೇ ಕೌಶಿಕ್ ಮರಣ ಕಾಲಿವುಡ್‌ನಲ್ಲಿ ತೀವ್ರ ವಿಷಾದವನ್ನುಂಟುಮಾಡಿದೆ. ಕೌಶಿಕ್ ಸಾವಿನ ಬಗ್ಗೆ ಸಹ ವಿಮರ್ಶಕರು ಮತ್ತು ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. ಕೌಶಿಕ್ ಅವರ ನಿಧನದ ಸುದ್ದಿಯು ಹೊಸ ಚಲನಚಿತ್ರಗಳ ವಿಮರ್ಶೆಗಾಗಿ ಅವರನ್ನು ಬಹಳ ಕಾಲದಿಂದ ಅನುಸರಿಸುತ್ತಿದ್ದ ಟ್ವಿಟರ್ ಬಳಕೆದಾರರಿಗೆ ಆಘಾತವಾಗಿದೆ. “ಸೀತಾರಾಮಂ” ಚಿತ್ರಕ್ಕೆ ಸಂಬಂಧಿಸಿದಂತೆ 7 ಗಂಟೆಗಳ ಹಿಂದೆ ಟ್ವೀಟ್ ಅನ್ನು ಸಹ ಅಪ್ಲೋಡ್ ಮಾಡಿದ್ದಾರೆ.

ಚಲನಚಿತ್ರ ವಿಮರ್ಶಕ ಕೌಶಿಕ್ ಹೃದಯಾಘಾತದಿಂದ ಸಾವು Read More »

ಇಂದಿನ ಚಿನ್ನ ಬೆಳ್ಳಿಯ ಬೆಲೆ ಹೀಗಿದೆ

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದ ಆರಂಭದಿಂದಲೇ ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ನೂರು ರೂ.ಗಿಂತಲೂ ಹೆಚ್ಚಾಗಿದೆ. ಇತ್ತೀಚೆಗೆ ಚಿನ್ನ, ಬೆಳ್ಳಿ ದರದಲ್ಲಿ ಭಾರಿ ವ್ಯತ್ಯಾಸವಾಗುತ್ತಿದೆ. ಶ್ರಾವಣ ಮಾಸ ಆರಂಭವಾಗಿರುವುದರಿಂದ ಸಾಲು ಸಾಲು ಹಬ್ಬಗಳು ಹಾಗೂ ಶುಭ ಸಮಾರಂಭಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಚಿನ್ನದ ಬೆಲೆಯೂ ಹೆಚ್ಚಾಗುತ್ತಿದೆ. ಶ್ರಾವಣ ಮಾಸದಲ್ಲಿ ಆಭರಣ ಖರೀದಿ, ವಹಿವಾಟು ಸಹಜವಾಗೇ ಹೆಚ್ಚಿರುತ್ತದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,200

ಇಂದಿನ ಚಿನ್ನ ಬೆಳ್ಳಿಯ ಬೆಲೆ ಹೀಗಿದೆ Read More »

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳಲ್ಲಿ ಬದಲಾವಣೆ| ಬೈಕ್ ಹಿಂಬದಿ ಸವಾರರಿಗೆ ನಿರ್ಬಂಧ

ಸಮಗ್ರ ನ್ಯೂಸ್: ವೀರ ಸಾವರ್ಕರ್‌ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಆ. 15 ರ ಮದ್ಯಾಹ್ನ 3 ಗಂಟೆಯಿಂದ ಆ. 18 ರಂದು ರಾತ್ರಿ 10 ಗಂಟೆಯವರೆಗೆ ಈ ಕೆಳಕಂಡ ನಿಭಂದನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ. 5 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಬಂಧಿಸಿದೆ. ಯಾವುದೇ ಮೆರವಣಿಗೆ, ಸಭೆ, ಸಮಾರಂಭ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ

ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳಲ್ಲಿ ಬದಲಾವಣೆ| ಬೈಕ್ ಹಿಂಬದಿ ಸವಾರರಿಗೆ ನಿರ್ಬಂಧ Read More »

ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಸಮಗ್ರ ನ್ಯೂಸ್: ವಾಲ್ಮೀಕಿ ಆಶ್ರಮ ಶಾಲೆ ಬಾಳಿಲದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯ ತಾರಾನಾಥ್, ಸುಶೀಲ ಉಪಸ್ಥಿತರಿದ್ದರು. ಶಾಲಾ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು. ಸಿಹಿತಿಂಡಿ ವಿತರಿಸುವ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಯಿತು.

ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ Read More »

ಸ್ವಾತಂತ್ರ್ಯದ ಶುಭಕೋರಿದ ಡೇವಿಡ್ ವಾರ್ನರ್| ಇವರಿಗೊಂದು ಆಧಾರ್ ಕೊಡಿ ಎಂದ ನೆಟ್ಟಿಗರು

ಸಮಗ್ರ ನ್ಯೂಸ್: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಸ್ವಾತಂತ್ರ್ಯದ ಅಮೃತೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ಕ್ರಿಕೆಟಿಗರೂ ಪಾಲ್ಗೊಂಡು ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾರೆ. ವಿಶೇಷ ಎಂದರೆ ವಿದೇಶಿ ಕ್ರಿಕೆಟಿಗರೂ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಭಾರತೀಯರಿಗೆ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಶುಭಕೋರುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ವಿಶೇಷ ಎಂದರೆ ಸದಾ ಭಾರತೀಯರಿಗೆ ಶುಭ ಹಾರೈಸುವ ಹಾಗೂ ಭಾರತೀಯ

ಸ್ವಾತಂತ್ರ್ಯದ ಶುಭಕೋರಿದ ಡೇವಿಡ್ ವಾರ್ನರ್| ಇವರಿಗೊಂದು ಆಧಾರ್ ಕೊಡಿ ಎಂದ ನೆಟ್ಟಿಗರು Read More »

ಶಿವಮೊಗ್ಗ ಚೂರಿ ಇರಿತ ಪ್ರಕರಣ| ಆರೋಪಿ ಮೇಲೆ ಪೊಲೀಸ್ ಪೈರಿಂಗ್

ಸಮಗ್ರ ನ್ಯೂಸ್: ಪ್ರೇಮ್ ಸಿಂಗ್ ಎಂಬಾತನಿಗೆ ಆತನ ಮನೆ ಮುಂದೆ ಚೂರಿ ಇರಿತವಾಗಿದ್ದು , ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉಪ್ಪಾರ ಕೇರಿಯಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪ್ರೇಮ್ ಗೆ ಚೂರಿ ಇರಿದು ಬೈಕ್ ಬಿಟ್ಟು ಪರಾರಿಯಾಗಿದ್ದರು. ಆ ಪ್ರಕರಣದ ಆರೋಪಿ ಎನ್ನಲಾದ ಜಬೀಉಲ್ಲಾ ಎಂಬಾತನ ಕಾಲಿಗೆ ಪೊಲೀಸರು ತಡರಾತ್ರಿ ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋ ಶಂಕರ ಲೇಔಟ್ ನಲ್ಲಿ ಜಬೀವುಲ್ಲಾ ಬಂಧನಕ್ಕೆ ತೆರಳಿದ್ದ ಪೊಲೀಸರು ಆತನ ಮೇಲೆ

ಶಿವಮೊಗ್ಗ ಚೂರಿ ಇರಿತ ಪ್ರಕರಣ| ಆರೋಪಿ ಮೇಲೆ ಪೊಲೀಸ್ ಪೈರಿಂಗ್ Read More »

ರಾಮ್ ಸೇನಾ ವತಿಯಿಂದ ರಕ್ಷಾಬಂಧನ

ಸಮಗ್ರ ನ್ಯೂಸ್: ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವು ಆ.15 ರಂದು ಹಿಂದೂ ಸೇವಾ ಸಮಿತಿ ಕಲ್ಪನೆ, ಕುಲಶೇಖರದಲ್ಲಿ ನಡೆಯಿತು. ಈ ಕಾರ್ಯಕ್ರಮ ರಾಮ್ ಸೇನಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಅಮೀನ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುಶೀತ್ ಸಾಲ್ಯಾನ್, ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಮ್ ಸೇನಾ ವತಿಯಿಂದ ರಕ್ಷಾಬಂಧನ Read More »