August 2022

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ; 9 ಮಂದಿಯ ಬಂಧನ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದ ಪ್ರಕರಣ ಸಂಬಂಧ ಕುಶಾಲನಗರ ಪೊಲೀಸರು ಇದೀಗ 9 ಮಂದಿಯನ್ನು ಬಂಧಿಸಿದ್ದಾರೆ. ಗುರುವಾರದಂದು ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಕಾರಿಗೆ ಕೆಲವರು ಮೊಟ್ಟೆ ಎಸೆದಿದ್ದರು. ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಪೊಲೀಸರು ಇದೀಗ 9 ಮಂದಿಯನ್ನು ಬಂಧಿಸಿದ್ದಾರೆ.

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ; 9 ಮಂದಿಯ ಬಂಧನ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಐವರು ಆರೋಪಿಗಳ ವಶಕ್ಕೆ ಪಡೆದ‌‌ ಎನ್ಐಎ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದ.ಕ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ಐವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಗಾಗಿ 6 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಆರೋಪಿಗಳಾದ ನೌಫಾಲ್‌, ಝೈನುಲ್‌ ಅಬಿದ್, ಮೊಹಮ್ಮದ್‌ ಸೈಯದ್‌, ಅಬ್ದುಲ್‌ ಬಶೀರ್‌ ಮತ್ತು ರಿಯಾಜ್‌ ಅವರನ್ನು ಆಗಸ್ಟ್ 23 ರ ವರೆಗೆ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಪ್ರವೀಣ್‌ ನೆಟ್ಟಾರು ಅವರನ್ನು ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಭೀಕರವಾಗಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಐವರು ಆರೋಪಿಗಳ ವಶಕ್ಕೆ ಪಡೆದ‌‌ ಎನ್ಐಎ Read More »

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಇದೆಯೇ ಸ್ಥಾನಮಾನ ?

ಸಮಗ್ರ ನ್ಯೂಸ್: ಮೀಡಿಯಾ ಕಂಪನಿ ಬ್ಲೂಮ್‌ಬರ್ಗ್‌ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಆರು ಅತ್ಯುತ್ತಮ ನಗರಗಳಲ್ಲಿ ರಾಜಧಾನಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿಗೆ ಭಾರತದ ನವೋದ್ಯಮಗಳ ರಾಜಧಾನಿ ಎಂಬ ಹಿರಿಮೆ ಇದೆ. ಒಂದು ಅಂದಾಜಿನ ಪ್ರಕಾರ ಲಂಡನ್‌ ಅಥವಾ ಸ್ಯಾನ್‌ ಫ್ರಾನ್ಸಿಸ್ಕೊಗೆ ಹೋಲಿಸಿದರೆ ಬಂಡವಾಳವು ಬೆಂಗಳೂರಿನತ್ತ ವೇಗವಾಗಿ ಹರಿದುಬರುತ್ತಿದೆ. ಹೆಚ್ಚಿನ ಸಂಬಳದ ಉದ್ಯೋಗಗಳು ಮತ್ತು ಕೈಗೆಟುಕುವ ಐಷಾರಾಮಿ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ಬೆಂಗಳೂರು ನೆಚ್ಚಿನ ನಗರಿಯಾಗಿದೆ. ಭದ್ರತೆಯ ಕಾರಣದಿಂದ ಬೆಂಗಳೂರು ಇಷ್ಟ ಎನ್ನುವ ಅಭಿಪ್ರಾಯವನ್ನು ಬಹುತೇಕ ಜನರು

ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಇದೆಯೇ ಸ್ಥಾನಮಾನ ? Read More »

ಕಾರಾಗೃಹ ಇಲಾಖೆಯಿಂದ ಖೈದಿಗಳಿಗೆ ಈ ಉದ್ಯೋಗಗಳ ಅವಕಾಶ

ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆಯು ಖೈದಿಗಳಿಂದ ಇಂಧನ ಕೇಂದ್ರಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಈ ಕೇಂದ್ರಗಳನ್ನು ಕಾರಾಗೃಹಗಳಿಗೆ ಸಮೀಪವಿರುವ ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು. ನಾವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಭಾರತ್ ಪೆಟ್ರೋಲಿಯಂ (ಬಿಪಿ) ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಕೈದಿಗಳು ತಮ್ಮ ಅವಧಿಯನ್ನು ಪೂರೈಸಿ ಜೈಲಿನಿಂದ ಹೊರಬಂದಾಗ ಅವರು ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗವನ್ನು ಕಂಡುಕೊಳ್ಳಬಹುದು ಅಥವಾ ಸ್ವಂತವಾಗಿ ಬಂಕ್‌ಗಳನ್ನು ಪ್ರಾರಂಭಿಸಬಹುದು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಂತಹ ಕೆಲವು ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ನಾವು ಈ ಬಗ್ಗೆ

ಕಾರಾಗೃಹ ಇಲಾಖೆಯಿಂದ ಖೈದಿಗಳಿಗೆ ಈ ಉದ್ಯೋಗಗಳ ಅವಕಾಶ Read More »

ಟ್ರಕ್ ಮತ್ತು ಕಾರು ನಡುವೆ ಅಪಘಾತ| ಒಂದೇ ಕುಟುಂಬದ ನಾಲ್ವರು ದುರ್ಮರಣ

ಸಮಗ್ರ ನ್ಯೂಸ್: ನಿಂತಿದ್ದ ಟ್ರಕ್‌ಗೆ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗುರುವಾರ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ (ಡಿಎಂಇ) ನಲ್ಲಿ ಈ ಭೀಕರ ಅಪಘಾತ ನಡೆದಿದೆ. ಇಲ್ಲಿನ ಕುಶಾಲಿಯಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಕಾರು ಟ್ರಕ್‌ಗೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ವೇಳೆ 10 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು

ಟ್ರಕ್ ಮತ್ತು ಕಾರು ನಡುವೆ ಅಪಘಾತ| ಒಂದೇ ಕುಟುಂಬದ ನಾಲ್ವರು ದುರ್ಮರಣ Read More »

ತಬ್ಬಿಕೊಳ್ಳುವಾಗ ಎಚ್ಚರ; ಹೀಗೂ ಆದೀತು!!

ಸಮಗ್ರ ನ್ಯೂಸ್: ಸಹೋದ್ಯೋಗಿಯೊಬ್ಬ ಬಿಗಿಯಾಗಿ ತಬ್ಬಿಕೊಂಡ ಕಾರಣದಿಂದಾಗಿ ತನ್ನ ಪಕ್ಕೆಲುಬು ಮುರಿದಿದೆ ಎಂದು ಮಹಿಳೆಯೊಬ್ಬಳು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ತಬ್ಬಿಕೊಂಡ ಸಹೋದ್ಯೋಗಿ ಯುವಕನೊಂದಿಗೆ ಯುವತಿಗೆ ಬರೋಬ್ಬರಿ 10,000 ಯುವಾನ್ (₹ 1.16 ಲಕ್ಷ) ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಇಂತಹ ವಿಲಕ್ಷಣ ಘಟನೆಯೊಂದು ಚೀನಾದ ಯುಯಾಂಗ್ ನಗರದ ಹುನಾನ್ ಪ್ರಾಂತ್ಯದಲ್ಲಿ ನಡೆದಿದೆ. ಮಹಿಳಾ ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿದ್ದಾಗ ಪುರುಷ ಸಹೋದ್ಯೋಗಿಯೊಬ್ಬರು ಅವಳನ್ನು ತುಂಬಾ ಬಿಗಿಯಾಗಿ ಅಪ್ಪಿಕೊಂಡು ಆ ಕಾರಣದಿಂಡಾಗಿ ಅವಳ ಎದೆಯ ಭಾಗದ ಮೂರು ಪಕ್ಕೆಲುಬು

ತಬ್ಬಿಕೊಳ್ಳುವಾಗ ಎಚ್ಚರ; ಹೀಗೂ ಆದೀತು!! Read More »

ಮಂಗಳೂರು: ಸಾವರ್ಕರ್ ವಿವಾದದ ಬೆನ್ನಲ್ಲೇ ಬ್ಯಾನರ್ ನಲ್ಲಿ ಗೋಡ್ಸೆ ಪ್ರತ್ಯಕ್ಷ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಾವರ್ಕರ್ ಬ್ಯಾನರ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್ ವಿವಾದ ಪ್ರತಿಧ್ವನಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಕೃಷ್ಣ ಜನ್ಮಾಷ್ಟಮಿಗೆ ನಾಡಿನ ಜನತೆಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ಹಾಕಿದ ಬ್ಯಾನರ್ ಈಗ ವಿವಾದಕ್ಕೆ ಕಾರಣವಾಗಿದೆ. ಬ್ಯಾನರ್‌ನಲ್ಲಿ ಸಾವರ್ಕರ್ ಫೋಟೋ ಜೊತೆಗೆ ನಾಥುರಾಮ್ ಗೋಡ್ಸೆಯ ಫೋಟೋ ಹಾಕಿರುವುದು ತೀವ್ರ ವಿವಾದವನ್ನು ಸೃಷ್ಟಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ

ಮಂಗಳೂರು: ಸಾವರ್ಕರ್ ವಿವಾದದ ಬೆನ್ನಲ್ಲೇ ಬ್ಯಾನರ್ ನಲ್ಲಿ ಗೋಡ್ಸೆ ಪ್ರತ್ಯಕ್ಷ Read More »

ಮಗಳ‌ ಮೇಲೆ ಕಣ್ಣು ಹಾಕಿದವನ ಮರ್ಮಾಂಗ ಕತ್ತರಿಸಿದ ತಾಯಿ!

ಸಮಗ್ರ ನ್ಯೂಸ್: ತನ್ನ 14 ವರ್ಷದ ಮಗಳ ಮೇಲೆ ಕಾಮದ ಕಣ್ಣು ಬೀರಿದ್ದಲ್ಲದೆ, ಆಕೆಯನ್ನು ರೇಪ್‌ ಮಾಡಲು ಯತ್ನಿಸಿದ ಲಿವ್‌ ಇನ್‌ ಪಾರ್ಟ್ನರ್‌ನ ಮರ್ಮಾಂಗವನ್ನೇ ತಾಯಿಯೊಬ್ಬಳು ಕತ್ತರಿಸಿದ ಪ್ರಕರಣ ಉತ್ತರ ಪ್ರದೇಶದ ಲಕೀಂಪುರ ಖೇರಿ ಜಿಲ್ಲೆಯ ಮಹದೇವ್‌ಗಂಜ್‌ನಲ್ಲಿ ನಡೆದಿದೆ. ಮದ್ಯವ್ಯಸನಿಯಾಗಿದ್ದ ಗಂಡನಿಂದ ದೂರವಾದ ಬಳಿಕ, ಕಳೆದ ಎರಡು ವರ್ಷಗಳಿಂದ 36 ವರ್ಷದ ಮಹಿಳೆ, 32 ವರ್ಷದ ಪುರುಷನೊಂದಿಗೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು. “ಘಟನೆಯ ಸಮಯದಲ್ಲಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ. ಅದೃಷ್ಟವಶಾತ್ ಸಕಾಲದಲ್ಲಿ ಮನೆಗೆ ಹಿಂತಿರುಗಿ ರೆಡ್

ಮಗಳ‌ ಮೇಲೆ ಕಣ್ಣು ಹಾಕಿದವನ ಮರ್ಮಾಂಗ ಕತ್ತರಿಸಿದ ತಾಯಿ! Read More »

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…!

ಸಮಗ್ರ ನ್ಯೂಸ್: ಆನ್ ಲೈನ್ ಆ್ಯಪ್ ಗಳ ಮೂಲಕ ತುಂಬಾ ಜನ ಬಹಳಷ್ಟು ಜನ ವಿವಿಧ ಉಡುಪು, ಗ್ರಹೋಪಯೋಗಿ ವಸ್ತುಗಳನ್ನು , ಸೌಂದರ್ಯ ವರ್ಧಕ, ಪಾದರಕ್ಷೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಖರೀದಿಸುವವರು ಸಂತುಷ್ಟ ಗ್ರಾಹಕರೋ ಇಲ್ಲವೋ ಅದು ಅವರವರ ಭಾವಕ್ಕೆ. ಆದರೆ ಇಲ್ಲಿ ಇದನ್ನೆ ಬಂಡವಾಳವಾಗಿಸಿ ಖದೀಮರ ತಂಡವೊಂದು ಸದ್ದಿಲ್ಲದೆ ವಂಚನಾ ಜಾಲ ವ್ಯಾಪಿಸಿದೆ. ಹೌದು, ಒಂದು ಜಿ.ಕೆ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಆನ್ ಲೈನ್ ಗ್ರಾಹಕರಿಗೆ ಸ್ಪೀಡ್ ಪೋಸ್ಟ್ ಮೂಲಕ ಕೂಪನ್

ನೀವು ಆನ್ ಲೈನ್ ಆ್ಯಪ್ ಗಳಲ್ಲಿ ಖರೀದಿದಾರರೆ? ವಂಚನೆಗೆ ಒಳಗಾಗುತ್ತೀರಿ ಎಚ್ಚರ…! Read More »

ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿಕೊಂಡ ಮಲೆಯಾಳಂ ನಟಿ| ವಿವಾದಕ್ಕೆ ಕಾರಣವಾಯ್ತು ಆಕೆಯ ಹಸಿಬಿಸಿ ದೇಹಸೌಂದರ್ಯ

ಸಮಗ್ರ ನ್ಯೂಸ್: ಮಲೆಯಾಳಂ‌ ಚಿತ್ರರಂಗ ಕೊಂಚ ಮಟ್ಟಿಗೆ ಸಭ್ಯತೆಯನ್ನು ಕಾಯ್ದುಕೊಂಡಿದೆ. ಆದರೆ ಇತ್ತೀಚೆಗೆ ಕೆಲವೊಂದು ಜನರು ಪ್ರಚಾರಕ್ಕಾಗಿ ಆ ಸಭ್ಯತೆಗೆ ಎಳ್ಳು ನೀರು ಬಿಡಲು ಕಾರಣರಾಗಿದ್ದಾರೆ. ಇದೀಗ ಇಂತಹದ್ದೊಂದು ವಿವಾದಾತ್ಮಕ ವಿಚಾರಕ್ಕೆ ನಟಿಯೊಬ್ಬರ ಫೋಟೋ ಶೂಟ್ ಆಹಾರವಾಗಿದೆ. ಜಾನಕಿ ಸುಧೀರ್ ಮಲಯಾಳಂ ಬಿಗ್ ಬಾಸ್ ನಾಲ್ಕನೇ ಸೀಸನ್‌ನಲ್ಲಿ ಸ್ಪರ್ಧಿಯಾದಾಗಿನಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಒಂದು ವಾರ ಮಾತ್ರ ಕಳೆಯಲು ಸಾಧ್ಯವಾಗಿದ್ದರೂ, ಜಾನಕಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಜಾನಕಿ ಅವರು ಬ್ಲೌಸ್

ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿಕೊಂಡ ಮಲೆಯಾಳಂ ನಟಿ| ವಿವಾದಕ್ಕೆ ಕಾರಣವಾಯ್ತು ಆಕೆಯ ಹಸಿಬಿಸಿ ದೇಹಸೌಂದರ್ಯ Read More »