August 2022

ಗಣೇಶ ಹಬ್ಬದ ಆಚರಣೆ; ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಮುಗಿಬಿದ್ದ ಯುವಕರು

ಸಮಗ್ರ ನ್ಯೂಸ್: ನಾಡಿನಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಆಚರಣೆ ಆಗಿದೆ. ಎಲ್ಲೆಡೆ ಗಣೇಶ ಮೂರ್ತಿಗಳನ್ನು ಮನೆಯಲ್ಲಿ , ಏರಿಯಾಗಳಲ್ಲಿ ಕೂರಿಸಲಾಗುತ್ತದೆ. ಜಿಲ್ಲೆಯ ಪಾಂಡವಪುರದಲ್ಲಿ ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿ ಡಾ. ಇಂದ್ರೇಶ್‌ ಅವರು ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು. ಗಣೇಶೋತ್ಸವ ನೆಪದಲ್ಲಿ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದಾರಾ ಎಂಬ ಮಾತುಗಳು ಕೇಳಿ ಬಂದಿದೆ. ಉಚಿತ ಗಣೇಶ ಮೂರ್ತಿ ವಿತರಿಸುವುದಾಗಿ ಹತ್ತು ದಿನಗಳ ಮುಂಚೆಯೇ ಘೋಷಣೆ ಮಾಡಿದ್ದರು. ನೋಂದಣಿ ಮಾಡಿಕೊಳ್ಳುವಂತೆ ಮೇಲುಕೋಟೆ […]

ಗಣೇಶ ಹಬ್ಬದ ಆಚರಣೆ; ಉಚಿತ ಗಣೇಶ ಮೂರ್ತಿ ಪಡೆದುಕೊಳ್ಳಲು ಮುಗಿಬಿದ್ದ ಯುವಕರು Read More »

ಮದ್ಯಸೇವನೆ ಮಾಡಿ ತಾಯಿಗೆ ಹಲ್ಲೆ ನಡೆಸಿದ ತಂದೆಯ ವಿರುದ್ಧ ಕೇಸ್ ಕೊಟ್ಟ ಏಳು ವರ್ಷದ ಮಗ

ಸಮಗ್ರ ನ್ಯೂಸ್: ದಿನ ನಿತ್ಯ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ ಪಟ್ಟಣದಲ್ಲಿ ತಂದೆ ಬಾಲಕಿಶನ್ ವಿರುದ್ಧ ಭರತ್ ಎಂಬಾತ ದೂರು ನೀಡಿದ್ದಾನೆ. ಮುಸ್ತಾಬಾದ್ ಮೂಲದ ಬಾಲಕಿಶನ್‍ಗೆ ಭರತ್ ಹಾಗೂ ಶಿವಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಲ್ಲಿ ಭರತ್ ಮುಸ್ತಾಬಾದ್‍ನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ. ಮದ್ಯವ್ಯಸನಿಯಾಗಿದ್ದ ಬಾಲಕಿಶನ್ ಪ್ರತಿನಿತ್ಯ ತನ್ನ

ಮದ್ಯಸೇವನೆ ಮಾಡಿ ತಾಯಿಗೆ ಹಲ್ಲೆ ನಡೆಸಿದ ತಂದೆಯ ವಿರುದ್ಧ ಕೇಸ್ ಕೊಟ್ಟ ಏಳು ವರ್ಷದ ಮಗ Read More »

ರಾಜ್ಯದಲ್ಲಿ 800 ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆ, 5 ಮಂದಿ ಬಲಿ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 845 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ 589, ಮೈಸೂರು 44, ಶಿವಮೊಗ್ಗ 34, ಕೊಡಗು 19, ಚಾಮರಾಜನಗರ 17, ಬಳ್ಳಾರಿ, ಹಾಸನ 14,ದಕ್ಷಿಣ ಕನ್ನಡ 13, ಧಾರವಾಡ 12, ಉತ್ತರ ಕನ್ನಡ,ಬೆಂಗಳೂರು ಗ್ರಾಮಾಂತರ 10, ರಾಮನಗರ 9, ಬೆಳಗಾವಿ 8, ತುಮಕೂರು 7, ಕೋಲಾರ, ದಾವಣಗೆರೆ, ಉಡುಪಿ 6, ಮಂಡ್ಯ, ರಾಯಚೂರು 5, ಚಿಕ್ಕಮಗಳೂರು, ಬಾಗಲಕೋಟೆ , 4,ಹಾವೇರಿ, ಕಲಬುರಗಿ, ವಿಜಯಪುರ 2,

ರಾಜ್ಯದಲ್ಲಿ 800 ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆ, 5 ಮಂದಿ ಬಲಿ Read More »

ಸುಳ್ಯ: ಭಿನ್ನಕೋಮಿನ ಜೋಡಿಗಳು ಪತ್ತೆ; ಬಾಸುಂಡೆ ಬರುವಂತೆ ಥಳಿಸಿದ ಸ್ಥಳೀಯರು

ಸಮಗ್ರ ನ್ಯೂಸ್: ಕಾಲೇಜು ಬಳಿಯಲ್ಲಿ ಏಕಾಂತದಲ್ಲಿದ್ದ ಅನ್ಯಕೋಮಿನ ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಕಿಡಿಗೇಡಿಗಳು ಥಳಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಇಬ್ಬರೇ ಇದ್ದ ಸಂದರ್ಭದಲ್ಲಿ ಸ್ಥಳೀಯರಿಂದ ದಾಳಿ ನಡೆಸಿ ವಿದ್ಯಾರ್ಥಿಯನ್ನು ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಇವರಿಬ್ಬರು ಬೇರೆ ಬೇರೆ ಕೋಮಿನ ವಿದ್ಯಾರ್ಥಿ ‌ಮತ್ತು ವಿದ್ಯಾರ್ಥಿನಿಯರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ: ಭಿನ್ನಕೋಮಿನ ಜೋಡಿಗಳು ಪತ್ತೆ; ಬಾಸುಂಡೆ ಬರುವಂತೆ ಥಳಿಸಿದ ಸ್ಥಳೀಯರು Read More »

ಪ.ಪೂ ಕಾಲೇಜುಗಳ‌ ಮಧ್ಯಂತರ ರಜೆ ಒಂದು ದಿನ ವಿಸ್ತರಿಸಿ ಸರ್ಕಾರ ಆದೇಶ

ಸಮಗ್ರ‌ ನ್ಯೂಸ್: ರಾಜ್ಯ ಸರ್ಕಾರದಿಂದ 2022-23ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ಮಧ್ಯಂತರ ರಜೆಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ. ಈ ಮೂಲಕ ಪದವಿ ಪೂರ್ವ ಕಾಲೇಜು ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಿದೆ. ಅಲ್ಲದೇ ಅಕ್ಟೋಬರ್ 14ರಿಂದ ಕಾಲೇಜುಗಳನ್ನು ಪುನರಾರಂಭಿಸಲು ಸೂಚಿಸಲಾಗಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮಾರ್ಗಸೂಚಿಯಲ್ಲಿ ಮಧ್ಯಂತರ ರಜೆಯನ್ನು ದಿನಾಂಕ 01-10-2022 ರಿಂದ 12-10-2022ರವರೆಗೆ ನಿಗದಿ ಪಡಿಸಲಾಗಿತ್ತು ಎಂದು

ಪ.ಪೂ ಕಾಲೇಜುಗಳ‌ ಮಧ್ಯಂತರ ರಜೆ ಒಂದು ದಿನ ವಿಸ್ತರಿಸಿ ಸರ್ಕಾರ ಆದೇಶ Read More »

‘ಸಿಹಿಸುದ್ದಿ’ ನೀಡ್ತಾರಂತೆ ಮೋಹಕತಾರೆ ರಮ್ಯಾ! ಅದೇನದು ಅಂಥಾ ಸುದ್ದಿ?

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ ಚಿತ್ರರಂಗ ತೊರೆದು ಹಲವು ವರ್ಷಗಳೇ ಕಳೆದಿವೆ. ಇನ್ನು ಮಂಡ್ಯ ಸಂಸದೆಯಾಗಿದ್ದ ನಟಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಕ್ರಿಯವಾಗಿಲ್ಲ. ಕಳೆದ ವರ್ಷ ಪುನೀತ್ ರಾಜ್ ಕುಮಾರ್ ನಿಧನರಾದ ನಂತರ ಬೆಂಗಳೂರಿಗೆ ಆಗಮಿಸಿದ ರಮ್ಯ ನಂತರ ಸ್ಯಾಂಡಲ್ ವುಡ್ ಮಂದಿಯ ಜೊತೆ ಆಪ್ತವಾಗತೊಡಗಿದರು. ಸಿನಿಮಾಗಳ ಪ್ರೀಮಿಯರ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕೊಂಚ ಆಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರದಲ್ಲಿ ಮತ್ತೆ ನಟಿಸುತ್ತಾರೆ,

‘ಸಿಹಿಸುದ್ದಿ’ ನೀಡ್ತಾರಂತೆ ಮೋಹಕತಾರೆ ರಮ್ಯಾ! ಅದೇನದು ಅಂಥಾ ಸುದ್ದಿ? Read More »

ಸೆ‌. 02: ಮಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 2 ರಂದು ‌ಮಂಗಳೂರಿನ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 2ರಂದು ಮಂಗಳೂರಿನಲ್ಲಿ ‌ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮ ಹಾಗೂ ನಗರದ ಹಲವೆಡೆ ಗಣೇಶೋತ್ಸವದ ವಿಸರ್ಜನಾ‌ ಮೆರವಣಿಗೆಗಳು ಇರುವ ಕಾರಣದಿಂದಜನ ಸಂಚಾರ ಮತ್ತು‌ ವಾಹನ ದಟ್ಟಣೆಯಾಗುವ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ನಗರದ ಅಂಗನವಾಡಿ, ಪ್ರಾಥಮಿಕ, ಪ್ರೌಢ

ಸೆ‌. 02: ಮಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ Read More »

ರಾಷ್ಟ್ರಗೀತೆಗೆ ಅಪಮಾನ; ಬರಗೂರು ರಾಮಚಂದ್ರಪ್ಪ ವಿರುದ್ದ ದೂರು

ಸಮಗ್ರ ನ್ಯೂಸ್: ರಾಷ್ಟ್ರಗೀತೆಗೆ ಅಪಮಾನ ಆರೋಪದ ಮೇಲೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ಧ ದೂರು ಬಿಜೆಪಿ ಈ ದೂರು ನೀಡಿದ್ದು, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿಗೆ ದೂರು ಸಲ್ಲಿಸಲಾಗಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಎಂಎಲ್‌ಸಿಗಳಾದ ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ಇಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಅವ್ರಿಗೆ ದೂರು ಸಲ್ಲಿಸಿದ್ದಾರೆ.

ರಾಷ್ಟ್ರಗೀತೆಗೆ ಅಪಮಾನ; ಬರಗೂರು ರಾಮಚಂದ್ರಪ್ಪ ವಿರುದ್ದ ದೂರು Read More »

ಕೇರಳ; ಭಾರಿ ಮಳೆಗೆ ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವು

ಕೇರಳ: ಒಂದೇ ಕುಟುಂಬದ ಐವರು ಭೂಕುಸಿತದಿಂದ ಸಾವಿಗೀಡಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಥೋಡುಪೊಜಾ ಬಳಿ ನಡೆದಿದೆ. ಕಂಜಾರ್‌ ನಿವಾಸಿಗಳಾದ ಥಂಕಮ್ಮ(80),ಪುತ್ರ ಸೋಮನ್‌ (52)ಪತ್ನಿ ಶಾಜಿ(50),ಪುತ್ರಿ ಶಿಮಾ(30) ಮತ್ತು ದೇವಾನಂದ್‌(5)ಮೃತಪಟ್ಟ ದುರ್ದೈವಿಗಳು. ಮುಂಜಾನೆ ಮೂರರ ಸುಮಾರಿಗೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ತೆಗೆಯಲಾಗಿದೆ. ಪರ್ವತ ಪ್ರದೇಶವಾದ ಇಡುಕ್ಕಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಕಾಸರಗೋಡು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಕೊಟ್ಟಾಯಂ,ನೆಡುಕುನ್ನಮನ್‌,ಕರುಕಾಚಲ್‌ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿ

ಕೇರಳ; ಭಾರಿ ಮಳೆಗೆ ಭೂಕುಸಿತದಿಂದ ಒಂದೇ ಕುಟುಂಬದ ಐವರು ಸಾವು Read More »

ಚೀನಾ ಕಂಪನಿ ಸ್ಮಾರ್ಟ್ ಫೋನ್ ಗಳನ್ನು ದೇಶದಲ್ಲಿ ನಿಷೇಧ ಇಲ್ಲ- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ನವದೆಹಲಿ: ‘ಚೀನಾ ಕಂಪನಿಗಳ ₹ 12 ಸಾವಿರಕ್ಕಿಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ನಿಷೇಧಿಸುವ ಯಾವುದೇ ಆಲೋಚನೆಯೂ ಇಲ್ಲ’ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಭಾರತದಿಂದ ರಫ್ತು ಹೆಚ್ಚಿಸುವಂತೆ ಸರ್ಕಾರವು ಚೀನಾದ ಮೊಬೈಲ್‌ ತಯಾರಕ ಕಂಪನಿಗಳನ್ನು ಕೇಳಿದೆ ಎಂದು ಅವರು ಹೇಳಿದ್ದಾರೆ. ದೇಶದ ಎಲೆಕ್ಟ್ರಾನಿಕ್‌ ವ್ಯವಸ್ಥೆಯಲ್ಲಿ ದೇಶಿ ಕಂಪನಿಗಳ ಪಾತ್ರವೂ ಇದೆ. ಆದರೆ, ವಿದೇಶಿ ಬ್ರ್ಯಾಂಡ್‌ಗಳನ್ನು ಹೊರಗಿಡುವುದು ಎನ್ನುವುದು ಅದರ ಅರ್ಥ ಅಲ್ಲ ಎಂದು ತಿಳಿಸಿದ್ದಾರೆ.

ಚೀನಾ ಕಂಪನಿ ಸ್ಮಾರ್ಟ್ ಫೋನ್ ಗಳನ್ನು ದೇಶದಲ್ಲಿ ನಿಷೇಧ ಇಲ್ಲ- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ Read More »