August 2022

ಜೈಪುರ: ಕ್ಯಾಸಿನೋ ಎಣ್ಣೆಪಾರ್ಟಿಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಪ್ರಮುಖ ಕುಳಗಳು| ಅಧಿಕಾರಿಗಳ ಮೋಜುಮಸ್ತಿಗೆ ಪೊಲೀಸರೇ ದಂಗು!

ಸಮಗ್ರ ನ್ಯೂಸ್: ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿಯಲ್ಲಿ ಕರ್ನಾಟಕದ ಕೆಲ ದೊಡ್ಡ ದೊಡ್ಡ ಹುದ್ದೆಯಲ್ಲಿನ ಅಧಿಕಾರಿಗಳು ಸೇರಿದಂತೆ 84 ಮಂದಿ ಸಿಕ್ಕಿಬಿದ್ದಿರುವ ಘಟನೆ ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್ ಹೌಸ್‌ನಲ್ಲಿ ನಡೆದಿದೆ. ಜೈಪುರ ಪೊಲೀಸ್ ಕಮಿಷನರೇಟ್ ವಿಶೇಷ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಸ್ಥಳದಲ್ಲಿದ್ದ 13 ಮಂದಿ ಹುಡುಗಿಯರನ್ನೂ ಬಂಧಿಸಲಾಗಿದೆ. ಕರ್ನಾಟಕದ ಪೊಲೀಸ್ ಇನ್​​ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಸೇರಿದಂತೆ ಕೆಲವರು ಈ […]

ಜೈಪುರ: ಕ್ಯಾಸಿನೋ ಎಣ್ಣೆಪಾರ್ಟಿಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಪ್ರಮುಖ ಕುಳಗಳು| ಅಧಿಕಾರಿಗಳ ಮೋಜುಮಸ್ತಿಗೆ ಪೊಲೀಸರೇ ದಂಗು! Read More »

ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ವಿಧಿವಶ

ಸಮಗ್ರ ನ್ಯೂಸ್: ಮುಖ್ಯ ಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ(45) ವಿಧಿವಶರಾಗಿದ್ದಾರೆ. ಗುರುಲಿಂಗ ಸ್ವಾಮಿ ಹೋಳಿಮಠ ಅವರು ಮುಖ್ಯಮಂತ್ರಿ ಮಾಧ್ಯಮ ಸಂಯೋಜಕಯಾಗಿ ಕೆಲಸ ಮಾಡುತ್ತಿದ್ದರು, ಇದಲ್ಲದೇ ಇವರು ಕನ್ನಡದ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದರು. ಇಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಇದೇ ವೇಳೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೊಳಿಮಠ ವಿಧಿವಶ Read More »

ಅಕ್ರಮ ಮರಳು ಸಾಗಾಣಿಕೆಗೆ ಪೊಲೀಸರು ಮತ್ತು ಅಧಿಕಾರಿಗಳು ಕ್ರಮ ವಹಿಸಿ – ದ.ಕ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಅಕ್ರಮ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪೊಲೀಸರೊಂದಿಗೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿ ಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು ಉಳ್ಳಾಲ, ಕೋಟೆ ಪುರ, ಸೋಮೇಶ್ವರ, ಉಚ್ಚಿಲ, ಪೇರಿಬೈಲು,ತಲಪಾಡಿ ಸೇರಿದಂತೆ ವಿವಿಧೆಡೆ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ವರದಿಯಾಗುತ್ತಿದೆ, ಅದನ್ನು ತಡೆಗಟ್ಟಲು ಜಿಲ್ಲಾಡಳಿತ ಅತಿ ಕಠಿನ ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳ ನಿಯೋಜನೆ ಹಾಗೂ ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಈ ಸ್ಥಳಗಳಲ್ಲಿ ಅಳವಡಿಸ ಲಾಗಿರುವ ಸಿಸಿಟಿವಿಗಳನ್ನು ಪರಿಶೀಲಿಸಬೇಕು, ತಡರಾತ್ರಿ ಸಂಚರಿಸುವ

ಅಕ್ರಮ ಮರಳು ಸಾಗಾಣಿಕೆಗೆ ಪೊಲೀಸರು ಮತ್ತು ಅಧಿಕಾರಿಗಳು ಕ್ರಮ ವಹಿಸಿ – ದ.ಕ ಜಿಲ್ಲಾಧಿಕಾರಿ ಸೂಚನೆ Read More »

11ರ ಬಾಲಕಿಯ ಚೂರಿ ಇರಿದು ಕೊಂದ ಪಾತಕಿ ತಾನೂ ನೇಣಿಗೆ ಶರಣು

ಸಮಗ್ರ ನ್ಯೂಸ್: ಉಕ್ಕು ತಯಾರಿಕಾ ಕಾರ್ಖಾನೆಯ ಉದ್ಯೋಗಿಯೊಬ್ಬ 11 ವರ್ಷದ ಬಾಲಕಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯ ಕ್ವಾರ್ಟರ್ಸ್ ಆವರಣದಲ್ಲಿ ಇಂದು ನಡೆದಿದೆ. ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದು, ಇದರಿಂದ ಕೋಪಗೊಂಡ ನಂದ ಕಿಶೋರ್ ಎಂಬಾತ ತನ್ನ ಸಹೋದ್ಯೋಗಿ ಲಕ್ಷ್ಮಣ್ ಸಿಂಗ್ ಎಂಬುವರ ಪುತ್ರಿ ಖುಷಿಯನ್ನು ಚೂಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇಬ್ಬರೂ ಉತ್ತರಾಖಂಡ್ ಮೂಲದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಒಂದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಖುಷಿ ತನ್ನ

11ರ ಬಾಲಕಿಯ ಚೂರಿ ಇರಿದು ಕೊಂದ ಪಾತಕಿ ತಾನೂ ನೇಣಿಗೆ ಶರಣು Read More »

ಕುಕ್ಕೆ: ಸ್ನಾನಕ್ಕೆಂದು ಇಳಿದ ಯುವಕ ನದಿನೀರಲ್ಲಿ ಕಣ್ಮರೆ; ಕುಮಾರಧಾರೆಯಲ್ಲಿ ಶೋಧಕಾರ್ಯ ಸ್ಥಗಿತ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಸ್ನಾನಕ್ಕಿಳಿದ ಬೆಂಗಳೂರಿನ ಯುವಕನೋರ್ವ ಕಣ್ಮರೆಯಾಗಿರುವ ಘಟನೆ ಇಂದು (ಆ.21) ಸಂಭವಿಸಿದೆ. ಮಂಡ್ಯ ಮೂಲದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿವು (25) ನೀರಲ್ಲಿ ಕಣ್ಮರೆಯಾಗಿರುವ ಯುವಕ ಎಂದು ಆತನ ಜೊತೆಗಾರರು ತಿಳಿಸಿದ್ದಾರೆ. ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಶಿವು ಬೆಂಗಳೂರಿನ ಸ್ನೇಹಿತರೊಂದಿಗೆ ಕುಕ್ಕೆಗೆ ಆಗಮಿಸಿದ್ದು ಈ ವೇಳೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ನೀರಿಗೆ ಹಾರಿದ್ದು ಕೆಲ ಹೊತ್ತಿನಲ್ಲಿ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಯುವಕನಿಗೆ ಈಜು ಬರುತ್ತದೆ ಎಂದು ಜೊತೆಗಾರರು ತಿಳಿಸಿದ್ದಾರೆ.

ಕುಕ್ಕೆ: ಸ್ನಾನಕ್ಕೆಂದು ಇಳಿದ ಯುವಕ ನದಿನೀರಲ್ಲಿ ಕಣ್ಮರೆ; ಕುಮಾರಧಾರೆಯಲ್ಲಿ ಶೋಧಕಾರ್ಯ ಸ್ಥಗಿತ Read More »

ಫಸಲ್ ಬೀಮಾ ಯೋಜನೆಯಲ್ಲಿ ಅರ್ಜಿ‌ ಸಲ್ಲಿಸಿದ್ದೀರಾ? ಹಾಗಿದ್ದಲ್ಲಿ ಈ ಮಾಹಿತಿ ತಿಳಿದುಕೊಳ್ಳಿ

ಸಮಗ್ರ ನ್ಯೂಸ್: ರೈತರು ತಮ್ಮ ಕೃಷಿ ಹಾಗೂ ಕೃಷಿ ವಲಯಕ್ಕೆ ಒಳ್ಳೆಯ ಬೆಲೆ ಸಿಗಬೇಕು ಹಾಗೂ ರೈತರು ತಮ್ಮ ಚಟುವಟಿಕೆಗಳಲ್ಲಿ ಬೆಲೆ‌ಸಿಗದೆ ಇದ್ದಾಗ ನಿರಾಸೆಯಾಗದಂತೆ ತಡೆಯಲು ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ರೂಪಿಸಲಾಗಿದೆ. ಇದರಲ್ಲಿ ರೈತರು ತಾವು ಬೆಳೆದ ಬೆಳೆಗೆ ಎಷ್ಟು ಹಣ ವಿಮೆ ಕಟ್ಟಬೇಕು, ಹಾಗೂ ರೈತರ ಬೆಳೆದ ಬೆಳೆಯು ಆಕಸ್ಮಿಕವಾಗಿ ನಾಶ ಹೊಂದಿದರೆ ಅದಕ್ಕೆ ಎಷ್ಟು ಪರಿಹಾರ ಬರುತ್ತದೆ. 2022-23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದರದಲ್ಲಿ

ಫಸಲ್ ಬೀಮಾ ಯೋಜನೆಯಲ್ಲಿ ಅರ್ಜಿ‌ ಸಲ್ಲಿಸಿದ್ದೀರಾ? ಹಾಗಿದ್ದಲ್ಲಿ ಈ ಮಾಹಿತಿ ತಿಳಿದುಕೊಳ್ಳಿ Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಾಯದಿಂದ ಪಾರು

ಉಪ್ಪುಂದ:‌ ಚಾಲಕನ ನಿಯಂತ್ರಣ ತಪ್ಪಿ ರಾ.ಹೆದ್ದಾರಿ 66 ಬಿಜೂರುನಲ್ಲಿ ಪಲ್ಟಿ ಹೊಡೆದು ಸವಾರ ಅಪಾಯದಿಂದ ಪಾರಾದ ಘಟನೆಯೊಂದು ಶನಿವಾರ ಸಂಜೆ ಸಂಭವಿಸಿದೆ. ಬಿಜೂರು ಸುಮಾನವತಿ ನದಿಯ ಸೇತುವೆ ಸಮೀಪ ರಾ.ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಉಪ್ಪುಂದ ಕಡೆಗೆ ಹೋಗುತ್ತಿದ್ದ ಫಾರ್ಚೂನರ್ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯೊಡೆದು ಪಕ್ಕದ ಹೊಂಡಕ್ಕೆ ಬಿದ್ದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.

ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಾಯದಿಂದ ಪಾರು Read More »

ರಸ್ತೆ ಅಪಘಾತದಲ್ಲಿ ಕಾಲೇಜಿನ ಪ್ರಾಂಶುಪಾಲ ಸಾವು

ಚಿಂತಾಮಣಿ: ನಗರದ ಚೇಳೂರು ವೃತ್ತದ ಬಳಿ ಶನಿವಾರ ಬೆಳಿಗ್ಗೆ ಕ್ಯಾಂಟರ್ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು, ದ್ವಿಚಕ್ರವಾಹನ ಸವಾರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇಲ್ಲಿನ ಚೇಳೂರು ರಸ್ತೆಯಲ್ಲಿರುವ ಲಕ್ಷ್ಮೀ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕರೆಡ್ಡಿ(40) ಮೃತರು. ಚೇಳೂರು ವೃತ್ತದ ಸಮೀಪದಲ್ಲಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅಶೋಕರೆಡ್ಡಿ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಸ್ತೆ ಅಪಘಾತದಲ್ಲಿ ಕಾಲೇಜಿನ ಪ್ರಾಂಶುಪಾಲ ಸಾವು Read More »

ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದರಾ ಸಿದ್ದರಾಮಯ್ಯ| ಮತ್ತೊಂದು ವಿವಾದ ಶುರು

ಸಮಗ್ರ ನ್ಯೂಸ್: ಮಾಂಸಹಾರ ಸೇವಿಸಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಮತ್ತೊಂದು ವಿವಾದ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮಡಿಕೇರಿಗೆ ನೆರೆ ಸಂಕಷ್ಟಗಳನ್ನು ವೀಕ್ಷಿಸಲು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಆ ವೇಳೆ ವಿಧಾನಪರಿಷತ್‍ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಊಟ ಮಾಡಿದ್ದರು. ಸಂಜೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಮಾಂಸಾಹಾರ ಊಟ ಮಾಡಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ತೀವ್ರ ಚರ್ಚೆಗೂ

ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದರಾ ಸಿದ್ದರಾಮಯ್ಯ| ಮತ್ತೊಂದು ವಿವಾದ ಶುರು Read More »

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಮೂವರು ಸಾವು

ತುಮಕೂರು: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತರೂರು ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. 28 ವರ್ಷದ ಅವಿನಾಶ್, 5 ವರ್ಷದ ಪ್ರಣಂತಿ, 3 ವರ್ಷದ ಸೌಖ್ಯಾ ಮೃತ ದುರ್ದೈವಿಗಳಾಗಿದ್ದಾರೆ. ಮುಂದೆ ಚಲಿಸುತ್ತಿದ್ದ ಲಾರಿಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಲಾರಿಗೆ ಸ್ವಿಫ್ಟ್ ಕಾರು ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ; ಮೂವರು ಸಾವು Read More »