August 2022

ಮೈಕ್ ನಲ್ಲಿ ಅಜಾನ್ ಕೂಗುವುದಕ್ಕೆ ನಿರ್ಬಂಧ ವಿಧಿಸಲಾಗದು| ಪಿಐಎಲ್ ಪುರಸ್ಕರಿಸಲು ಹೈಕೋರ್ಟ್ ನಕಾರ

ಸಮಗ್ರ ನ್ಯೂಸ್: ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಪಿಐಎಲ್ ಅನ್ನು ಪುರಸ್ಕರಿಸಲು ನಿರಾಕರಿಸಿರುವ ಹೈಕೋರ್ಟ್ ಅಜಾನ್ ನಿಂದ ಜನರ ಮೂಲಭೂತ ಹಕ್ಕು ಮೊಟಕುಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಬೆಂಗಳೂರಿನ ಆರ್. ಚಂದ್ರಶೇಖರ್ ಸಲ್ಲಿಸಿದ್ದ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿದಾರರ ಪರ ವಕೀಲರು ಅಜಾನ್ ನಲ್ಲಿರುವ ವಿಚಾರಗಳು ಇತರ ಧರ್ಮಗಳ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡುವುದರಿಂದ ಅದನ್ನು ಧ್ವನಿವರ್ಧಕಗಳ ಮೂಲಕ ಕೂಗುವುದನ್ನು ತಡೆಯಬೇಕು. […]

ಮೈಕ್ ನಲ್ಲಿ ಅಜಾನ್ ಕೂಗುವುದಕ್ಕೆ ನಿರ್ಬಂಧ ವಿಧಿಸಲಾಗದು| ಪಿಐಎಲ್ ಪುರಸ್ಕರಿಸಲು ಹೈಕೋರ್ಟ್ ನಕಾರ Read More »

ಹಾಳಾಗಿರುವ ಹೆದ್ದಾರಿ ಸಮಸ್ಯೆ ತಿಳಿಸಲು ಹೊಸ ಆ್ಯಪ್| ನಿಗಧಿತ ಅವಧಿಯೊಳಗೆ ರಿಪೇರಿ ಮಾಡದಿದ್ರೆ ಕ್ರಮ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಟೋಲ್ ಶುಲ್ಕ ನೀಡಿದರೂ ಸಹ ಗುಂಡಿ ಗೊಟರುಗಳಿಂದ ಕೂಡಿರುವುದು ಹಾಗೂ ರಸ್ತೆ ಹಾಳಾಗಿರುವ ಕುರಿತು ವಾಹನ ಸವಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲದೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋವನ್ನು ಹರಿಬಿಟ್ಟು ಸಂಬಂಧಪಟ್ಟವರ ಗಮನಕ್ಕೆ ತರಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಈಗ ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ರಸ್ತೆ ಗುಂಡಿಗಳಿಂದಾಗಿಯೇ ಪ್ರತಿ ವರ್ಷ 2300 ಮಂದಿ ಸಾವನ್ನಪ್ಪಿರುವ ಸಂಗತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಹಾಳಾಗಿರುವ ಹೆದ್ದಾರಿ ಸಮಸ್ಯೆ ತಿಳಿಸಲು ಹೊಸ ಆ್ಯಪ್| ನಿಗಧಿತ ಅವಧಿಯೊಳಗೆ ರಿಪೇರಿ ಮಾಡದಿದ್ರೆ ಕ್ರಮ Read More »

ಸಹಾಯ ಕೇಳಿ ಬಂದಾಕೆಯಿಂದ ವಿಡಿಯೋ ಮಾಡಿ ಹನಿಟ್ರ್ಯಾಪ್| ‘ನಿಧಿ’ ಗೆ ಖೆಡ್ಡಾ ತೋಡಿದ ಮದನಾರಿ!

ಸಮಗ್ರ ನ್ಯೂಸ್: ಕೆಲವು ಖತರ್ನಾಕ್ ಗ್ಯಾಂಗ್ ಗಳು ದುಡ್ಡು ಇರುವವರನ್ನು ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಮಾಡುವ ಪ್ರವೃತ್ತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತದ್ದೇ ಒಂದು ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಸಹಾಯ ಕೇಳಿ ಬಂದ ಮಹಿಳೆಯೊಬ್ಬಳು ಚಿನ್ನದಂಗಡಿಯ ಮಾಲೀಕನಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣ ಪೀಕಿ ಪೊಲೀಸರ ಅತಿಥಿಯಾಗಿದ್ದಾಳೆ. ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಸಲ್ಮಾಭಾನು ಎಂಬಾಕೆ, ಇದೀಗ ಮಂಡ್ಯದ ಶ್ರೀನಿಧಿ ಗೋಲ್ಡ್ ಚಿನ್ನದಂಗಡಿಯ

ಸಹಾಯ ಕೇಳಿ ಬಂದಾಕೆಯಿಂದ ವಿಡಿಯೋ ಮಾಡಿ ಹನಿಟ್ರ್ಯಾಪ್| ‘ನಿಧಿ’ ಗೆ ಖೆಡ್ಡಾ ತೋಡಿದ ಮದನಾರಿ! Read More »

ಗ್ರಾಹಕರಿಗೆ ಗುಡ್ ನ್ಯೂಸ್; ಅಡುಗೆ ಎಣ್ಣೆ, ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಬಾರೀ ಇಳಿಕೆ

ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ. ಖಾದ್ಯ ತೈಲದ ದರ ಶೇಕಡ 15 ರಿಂದ 20ರಷ್ಟು ಇಳಿಕೆಯಾಗಿದ್ದು, ಬಿಸ್ಕೆಟ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಶೇಕಡ 10 ರಿಂದ 15 ರಷ್ಟು ಇಳಿಕೆಯಾಗಿದೆ. ಉತ್ಪಾದನಾ ವೆಚ್ಚ ತಗ್ಗಿರುವುದು, ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾಗಿರುವುದರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರವೂ ಕಡಿಮೆಯಾಗಿದೆ. ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳಾದ

ಗ್ರಾಹಕರಿಗೆ ಗುಡ್ ನ್ಯೂಸ್; ಅಡುಗೆ ಎಣ್ಣೆ, ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಬಾರೀ ಇಳಿಕೆ Read More »

ಸುಳ್ಯ: ಅರಮನೆಗಯದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ಘಟಕ ಉದ್ಘಾಟನೆ| ‘ಸಮಗ್ರ ಸಮಾಚಾರ’ಕ್ಕೆ ಸನ್ಮಾನ

ಸಮಗ್ರ ನ್ಯೂಸ್: ಅಂಬೇಡ್ಕರ್ ರಕ್ಷಣಾ ವೇದಿಕೆಯ ನೂತನ ಘಟಕದ ಉದ್ಘಾಟನೆ ಕಾರ್ಯಕ್ರಮವು ಆ.22 ರಂದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾಧಿಕಾರಿ ಕಮಲಾಕ್ಷ ಪಿಂಡಿಮನೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಸೇನಾಧಿಕಾರಿ ನವೀನ್ ಪಿಂಡಿಮನೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಆಲೆಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಆನಂದ ರಂಗತ್ತಮಲೆ, ಸಮಗ್ರ ಸಮಾಚಾರ ಪ್ರಧಾನ ಸಂಪಾದಕ ಜಯದೀಪ್ ಕುದ್ಕುಳಿ ಹಾಗೂ ಸ್ಥಳೀಯ ಸಂಘಟಕರು ಉಪಸ್ಥಿತರಿದ್ದರು. ನೂತನ

ಸುಳ್ಯ: ಅರಮನೆಗಯದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ಘಟಕ ಉದ್ಘಾಟನೆ| ‘ಸಮಗ್ರ ಸಮಾಚಾರ’ಕ್ಕೆ ಸನ್ಮಾನ Read More »

ಮಂಗಳೂರು: ತಪ್ಪಿಸಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಫೈರಿಂಗ್

ಸಮಗ್ರ ನ್ಯೂಸ್: ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದೊಯ್ದ ಸಂದರ್ಭ ಆರೋಪಿ ತಪ್ಪಿಲೆತ್ನಿಸಿದ ಸಂದರ್ಭ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ ಘಟನೆ ನಡೆದಿದೆ. ಮಿಸ್ತಾ ಯಾನೆ ಮುಸ್ತಾಕ್ ಗುಂಡೇಟಿಗೊಳಗಾದ ಆರೋಪಿಯಾಗಿದ್ದಾನೆ. ಆಗಸ್ಟ್ 19ರಂದು ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ ಆರೋಪ ಈತನ ‌ಮೇಲಿತ್ತು. ಅದರಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇಂದು ಸ್ಥಳ‌ ಮಜಹರು ಮಾಡಲು ಕರೆದೊಯ್ದು ಆರೋಪಿಯು‌ ಪೊಲೀಸರ ಮೇಲೆರೆಗಿ ತಪ್ಪಿಸಲು‌ ಮುಂದಾದ ಎನ್ನಲಾಗಿದೆ. ಈ‌ ಸಂದರ್ಭ ‌ಪೊಲೀಸರು ಆರೋಪಿಗೆ ಗುಂಡೇಟು ಹಾಕಿ ಬಂಧಿಸಿದರು ‌ಎಂದು

ಮಂಗಳೂರು: ತಪ್ಪಿಸಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಫೈರಿಂಗ್ Read More »

ವಿಡಿಯೋಕಾಲ್ ನಲ್ಲಿ ಬೆತ್ತಲಾದ ಯುವತಿ| ಕಾಲ್ ರಿಸೀವ್ ಮಾಡಿದಾತ ಫುಲ್ ಶಾಕ್

ಸಮಗ್ರ ನ್ಯೂಸ್: ವಿಡಿಯೋ ಕಾಲ್ ಮಾಡಿ ಯುವಕನಿಗೆ ಯುವತಿಯಿಂದ ಬ್ಲಾಕ್ ಮೇಲ್ ಮಾಡಲಾಗಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ವಾಸುಗೆ ಹಣ ನೀಡುವಂತೆ ಯುವತಿ ಬ್ಲಾಕ್ ಮೇಲ್ ಮಾಡಿದ್ದಾಳೆ. ವಿಡಿಯೋ ಕಾಲ್ ಗೆ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಪರಿಚಯ ಮಾಡಿಕೊಂಡಿದ್ದ ಯುವತಿ ಬಳಿಕ ವಿಡಿಯೋ ಕಾಲ್ ಮಾಡಿ ನಗ್ನಳಾಗಿದ್ದಾಳೆ. ಕೂಡಲೇ ವಿಡಿಯೋ ಕಾಲ್ ಕಟ್ ಮಾಡಲಾಗಿದೆ. ವಿಡಿಯೋ ಕಾಲ್ ಕಟ್ ಮಾಡಿದ ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

ವಿಡಿಯೋಕಾಲ್ ನಲ್ಲಿ ಬೆತ್ತಲಾದ ಯುವತಿ| ಕಾಲ್ ರಿಸೀವ್ ಮಾಡಿದಾತ ಫುಲ್ ಶಾಕ್ Read More »

ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ? ‘ರಂಗಿತರಂಗ’ ನಿರ್ದೇಶಕ ‘ಜೊತೆಜೊತೆಯಲಿ’ ಧಾರಾವಾಹಿಗೆ?

ಸಮಗ್ರ ನ್ಯೂಸ್: ಜೊತೆ ಜೊತೆಯಲಿ’ ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿ, ತಂಡದಲ್ಲಿ ಆದ ಕಿರಿಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅನಿರುದ್ಧ್ ವಿರುದ್ಧ ತಂಡ ರೊಚ್ಚಿಗೆದ್ದಿದೆ. ಅನಿರುದ್ಧ್ ಮತ್ತು ಸೀರಿಯಲ್ ತಂಡ ಮಾಧ್ಯಮದ ಮುಂದೆ ತಮ್ಮದೇ ಆದ ಹೇಳಿಕೆಯನ್ನು ಕೊಟ್ಟಿವೆ. ಈ ವಿಚಾರ ಎಲ್ಲೆಡೆ ಸದ್ದು ಮಾಡುತ್ತಲೇ, ನಟ ಅನಿರುದ್ಧ್ ನಡೆದಿರುವುದರ ಬಗ್ಗೆ ಮಾಧ್ಯಗಳ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಮೇಲೆ ಸೀರಿಯಲ್ ನಿರ್ದೇಶಕ, ನಿರ್ಮಾಪಕ ಜಗದೀಶ್ ಅವರು ಮಾಡಿರುವ ಆರೋಪಗಳ ಬಗ್ಗೆ

ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ? ‘ರಂಗಿತರಂಗ’ ನಿರ್ದೇಶಕ ‘ಜೊತೆಜೊತೆಯಲಿ’ ಧಾರಾವಾಹಿಗೆ? Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯ ವತಿಯಿಂದ ಪ್ರಸಂಶನಾ ಪತ್ರ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಆರೋಪಿತರನ್ನು ಪತ್ತೆ ಹಚ್ಚಲು ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯ, ಕಡಬ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮ ವಲಯದ ಅಧಿಕಾರಿಸಿಬ್ಬಂದಿಗಳ ತನಿಖಾ ತಂಡ ರಚಿಸಿ, ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಗಳಲ್ಲಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ Read More »

ಮಡಿಕೇರಿ: ಅಕ್ರಮ ಜಿಂಕೆ ಚರ್ಮ ಮಾರಾಟ ಯತ್ನ; ಓರ್ವನ ಬಂಧನ

ಸಮಗ್ರ ನ್ಯೂಸ್: ಅಕ್ರಮವಾಗಿ ಜಿಂಕೆ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಆರೋಪಿ ಬಳಿಯಿಂದ 3 ಜಿಂಕೆ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ. ಗುಡ್ಡೆಹೊಸೂರು-ಸಿದ್ದಾಪುರ ಕಡೆಗೆ ತೆರಳುವ ಮಾರ್ಗದಲ್ಲಿ ಆ.21ರಂದು ಅಲೀಮ್ ಪಾಷಾ ಎಂಬಾತ ಸರಕಾರದ ಪರವಾನಗಿ ಪಡೆಯದೆ ಜಿಂಕೆ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ಅರಿತು ದಾಳಿ ನಡೆಸಿ ಆರೋಪಿ ಸಹಿತ ಜಿಂಕೆ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿ ವಿರುದ್ದ

ಮಡಿಕೇರಿ: ಅಕ್ರಮ ಜಿಂಕೆ ಚರ್ಮ ಮಾರಾಟ ಯತ್ನ; ಓರ್ವನ ಬಂಧನ Read More »