August 2022

ಪುತ್ತೂರು: ಮುಸ್ಲಿಂ ಹುಡುಗರ ಜೊತೆಗೆ ಪಿಜ್ಜಾ ಹಟ್ ಗೆ ತೆರಳಿದ ಹಿಂದೂ, ಕ್ರಿಶ್ಚಿಯನ್ ಹುಡುಗಿಯರು

ಸಮಗ್ರ ನ್ಯೂಸ್: ಹಿಂದೂ ಯುವತಿ ಮತ್ತು ಕ್ರಿಶ್ಚಿಯನ್ ಯುವತಿಯರ ಜೊತೆ ಅನ್ಯಕೋಮಿನ ಯುವಕರು ಪತ್ತೆಯಾದ ಘಟನೆ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿನ ಪಿಜ್ಜಾ ಹಟ್ ವೊಂದರಲ್ಲಿ ನಡೆದಿದೆ. ಇಬ್ಬರು ಕ್ರಿಶ್ಚಿಯನ್ ಯುವತಿಯರು ಓರ್ವ ಹಿಂದೂ ಯುವತಿ ಮತ್ತು ಇಬ್ಬರು ಮುಸ್ಲಿಂ ಯುವಕರು ಪಿಜ್ಜಾ ಹಟ್‌ವೊಂದರಲ್ಲಿ ಊಟಕ್ಕೆ ಆಗಮಿಸಿದ್ದರೆನ್ನಲಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅನ್ಯಕೋಮಿನ ಜೊತೆಗಿದ್ದವರೆಲ್ಲಾ ಸ್ಥಳೀಯರೇ ಆಗಿದ್ದು, ಮನೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳದಲ್ಲಿ […]

ಪುತ್ತೂರು: ಮುಸ್ಲಿಂ ಹುಡುಗರ ಜೊತೆಗೆ ಪಿಜ್ಜಾ ಹಟ್ ಗೆ ತೆರಳಿದ ಹಿಂದೂ, ಕ್ರಿಶ್ಚಿಯನ್ ಹುಡುಗಿಯರು Read More »

ರಾಜ್ಯ ಪ್ರಶಸ್ತಿ ನೀಡಲು ನಾಮ ನಿರ್ದೇಶನ ಸಲ್ಲಿಸಲು ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ : ಪ್ರಸಕ್ತ ಸಾಲಿಗೆ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ ನೀಡಲು ನಾಮ ನಿರ್ದೇಶನ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ತಲಾ ರೂ.25,000/-ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.1,00,000/- ನಗದು

ರಾಜ್ಯ ಪ್ರಶಸ್ತಿ ನೀಡಲು ನಾಮ ನಿರ್ದೇಶನ ಸಲ್ಲಿಸಲು ಅರ್ಜಿ ಆಹ್ವಾನ Read More »

ಇಂದು ಗಗನಕ್ಕೇರಿದ ಚಿನ್ನದ ಬೆಲೆ ! ಇಂದಿನ‌ ದರದ ವಿವರ ಹೀಗಿದೆ

ಚಿನ್ನಾಭರಣ ದರದಲ್ಲಿ ಏರಿಳಿತವಾಗುತ್ತಿದೆ. ಕಳೆದ ವಾರಗಳೆಲ್ಲ ಚಿನ್ನದ ಬೆಲೆ ಕಡಿಮೆಯಾಗಿತ್ತು. ಇದೀಗ ದಿಢೀರ್‌ ಯಿಂದ ಬೆಲೆ ಏರಿಕೆ ಕಂಡಿದೆ. ನಿನ್ನೆ ಇಳಿಕೆ ಕಾಣಲಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂಪಾಯಿ ಏರಿಕೆ ನಂತರ 51,600 ರೂಪಾಯಿ ಇದೆ. 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಹೆಚ್ಚಳವಾಗಿ 47,300 ರೂಪಾಯಿಯಲ್ಲಿ ಇದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 25ರೂ., 24K ಚಿನ್ನದ

ಇಂದು ಗಗನಕ್ಕೇರಿದ ಚಿನ್ನದ ಬೆಲೆ ! ಇಂದಿನ‌ ದರದ ವಿವರ ಹೀಗಿದೆ Read More »

ತುಮಕೂರು: ಭೀಕರ ಅಪಘಾತದಲ್ಲಿ 9 ಮಂದಿ ಸಾವು| 11 ಜನ ಗಂಭೀರ

ಸಮಗ್ರ ನ್ಯೂಸ್: ಕ್ರೂಸರ್ ಗೆ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೆದ್ದಾರಿಯಲ್ಲಿ ಕ್ರೂಸರ್ ಲಾರಿ ಡಿಕ್ಕಿಯಾಗಿ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯವರಾಗಿದ್ದು, ಕ್ರೂಸರ್ ನಲ್ಲಿ 20 ಜನರ ಪೈಕಿ 9 ಜನರು ಮೃತಪಟ್ಟಿದ್ದಾರೆ. ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 9 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು

ತುಮಕೂರು: ಭೀಕರ ಅಪಘಾತದಲ್ಲಿ 9 ಮಂದಿ ಸಾವು| 11 ಜನ ಗಂಭೀರ Read More »

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ| ಆ.30 ಕೊನೆಯ ದಿನಾಂಕ

ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಸಮೂಹ ಸಂವಹನ ವಿಷಯದ ಪಿಹೆಚ್.ಡಿ (Mangaluru University Ph.D.) ಕಾರ್ಯಕ್ರಮಕ್ಕೆ ಸಂಯೋಜನೆ ಪಡೆದಿರುವ ಕಾಲೇಜುಗಳಲ್ಲಿ ಪಿ.ಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ವಿವರವಾದ ಅರ್ಜಿಯೊಂದಿಗೆ, ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ವಿಧಾನ:ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ‘‘ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ- 574199‘‘ ಇವರಿಗೆ ನಿಗದಿತ ಮೊತ್ತವನ್ನು ಡಿ.ಡಿ. ಮುಖಾಂತರ ಪಾವತಿ ಸಲ್ಲಿಸಬಹುದಾಗಿದೆ. ಬಳಿಕ ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ| ಆ.30 ಕೊನೆಯ ದಿನಾಂಕ Read More »

ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳ ಪರಿವರ್ತನೆ ಪ್ರಕ್ರಿಯೆಗೆ ಬ್ರೇಕ್‌ ಹಾಕಿದ ಸರ್ಕಾರ

ಸಮಗ್ರ ನ್ಯೂಸ್: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ನೀಡಿದೆ. ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಆರಂಭಿಸಿತ್ತು. ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಪ್ರಕ್ರಿಯೆ ನಡೆಸಿತ್ತು. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, 1.20

ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳ ಪರಿವರ್ತನೆ ಪ್ರಕ್ರಿಯೆಗೆ ಬ್ರೇಕ್‌ ಹಾಕಿದ ಸರ್ಕಾರ Read More »

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವನಪ್ಪಿದ ಘಟನೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಜಿಂಕೆ ಕಾಡಿನಿಂದ ನಾಡಿಗೆ ಬಂದಾಗ ನಾಯಿಗಳು ಬೆದರಿಸಿದ ಹಿನ್ನೆಲೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಸ್ಥಳೀಯರಾದ ರವೀಂದ್ರ ಎಂಬವರು ನೀರು ಕುಡಿಸಿ ಜಿಂಕೆಯನ್ನು ಬದುಕಿಸಲು ಪ್ರಯತ್ನ ಪಟ್ಟಿದ್ದಾರೆ. ಅರಣ್ಯ ರಕ್ಷಕ ಅಭಿಜಿತ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದ್ದಾರೆ.

ಮೂಡಿಗೆರೆ: ಕಾಡಿನಿಂದ ನಾಡಿಗೆ ಬಂದ ಜಿಂಕೆ ಸಾವು Read More »

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ದನದ ಕಾಲುಗಳು ಪತ್ತೆ/ಎಗ್ಗಿಲ್ಲದೆ ನಡೆಯುತ್ತಿದೆ ದನಗಳ್ಳರ ದಂಧೆ

ಮೂಡಿಗೆರೆ: ದನದ ಕಾಲುಗಳು ಪತ್ತೆಯಾದ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ. ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ದನ ಕಳ್ಳತನ ಮತ್ತು ಅಕ್ರಮ ಖಸಾಯಿಖಾನೆ ಮಾಡುತ್ತಿರುವವರ ಮನೆ ಜಪ್ತಿ ಮಾಡುವಂತಹ ಕಠಿಣ ನಿಯಮವನ್ನು ಜಾರಿಗೆ ಮಾಡಲಾಗಿತ್ತು. ಆದರು ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದರಿಂದಾಗಿ ರೈತರು ದನಗಳನ್ನು ಸಾಕುವುದೇ ಕಷ್ಟವಾಗಿದೆ. ಇದೀಗ ರಸ್ತೆ ಬದಿಯಲ್ಲಿ ದನದ ಕಾಲುಗಳು ಪತ್ತೆಯಾಗಿದ್ದು ರಸ್ತೆ ಬದಿಯಲ್ಲಿದ್ದ ದನಗಳನ್ನು ರಾತ್ರಿ ವೇಳೆ ಕಡಿದು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ

ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ದನದ ಕಾಲುಗಳು ಪತ್ತೆ/ಎಗ್ಗಿಲ್ಲದೆ ನಡೆಯುತ್ತಿದೆ ದನಗಳ್ಳರ ದಂಧೆ Read More »

ವಾಟ್ಸ್‌ಆಯಪ್‌ ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ! ಚಾಟ್ ಮಾಡಲು ಈಗ ಹೊಸ ವೈಶಿಷ್ಟ್ಯ

ವಾಟ್ಸ್‌ಆಯಪ್‌ ಈಗ ಮತ್ತೊಂದು ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.ಅದೇನೆಂದರೆ, ಇನ್ನು ಮುಂದೆ ಬಳಕೆದಾರರು ತಮ್ಮ ಸ್ನೇಹಿತರು ಹಾಗೂ ಸಂಪರ್ಕಿತರ ಸ್ಟೇಟಸ್‌ಗಳನ್ನು ನೇರವಾಗಿ ಚಾಟ್‌ ಲಿಸ್ಟ್‌ನಲ್ಲೇ ನೋಡಬಹುದು! ವಾಟ್ಸ್​ಆಯಪ್​ನ ಚಾಟ್ ಲೀಸ್ಟ್​ನಲ್ಲಿರುವ ಹೊಸ ವೈಶಿಷ್ಟ್ಯವು ಇನ್​ಸ್ಟಾಗ್ರಾಂನಲ್ಲಿನ ಸ್ಟೇಟಸ್​ಗಳಿಗೆ ಹೋಲುತ್ತದೆ.ಪ್ರಸ್ತುತ ನೀವು ನಿಮ್ಮ ಸ್ನೇಹಿತರ ವಾಟ್ಸ್‌ಆಯಪ್‌ ಸ್ಟೇಟಸ್‌ ನೋಡಬೇಕೆಂದರೆ, “ಸ್ಟೇಟಸ್‌’ ಎಂಬ ಪ್ರತ್ಯೇಕ ವಿಭಾಗಕ್ಕೆ ಹೋಗಿ ವೀಕ್ಷಿಸಬೇಕಾಗುತ್ತದೆ. ಆದರೆ, ಇನ್ನು ಮುಂದೆ ಸ್ನೇಹಿತರ ಪ್ರೊಫೈಲ್‌ ಫೋಟೋವನ್ನು ಕ್ಲಿಕ್‌ ಮಾಡಿದರೆ ಸಾಕು, ಅವರ “ಸ್ಟೇಟಸ್‌’ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಆಂಡ್ರಾಯ್ಡ ಪ್ಲಾಟ್‌ಫಾರಂನಲ್ಲಿ ಈ

ವಾಟ್ಸ್‌ಆಯಪ್‌ ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ! ಚಾಟ್ ಮಾಡಲು ಈಗ ಹೊಸ ವೈಶಿಷ್ಟ್ಯ Read More »

ಮರದ ಕಾಲುಸಂಕ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ‌ ಅಭಿಯಾನ‌ – ಯುವ ತೇಜಸ್ಸು ಬಳಗದಿಂದ ನಿಸ್ವಾರ್ಥ ಪ್ರಯತ್ನ, ನಿಮ್ಮ‌ ಬೆಂಬಲವೂ ಬೇಕಿದೆ…

ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುದು ನಾಣ್ಣುಡಿ. ಸಮಾಜದಲ್ಲಿನ ಸತ್ತು‌ಹೋದ ಕೆಲ ಮನಸ್ಸುಗಳ ನಡುವೆ ಜೀವಂತ ಶವಗಳಾಗುವ ಬದಲು ನಮ್ಮಿಂದ ಸಮಾಜಕ್ಕೇನಾದರೂ ಸಹಾಯ ಮಾಡಬಹುದು ಎಂಬ ಸಮಾನ ಮನಸ್ಕರ ಗುಂಪೊಂದು ಯೋಚಿಸಿದ ಫಲವಾಗಿ ಹುಟ್ಟಿಕೊಂಡ ಸಂಸ್ಥೆಯೇ ಯುವ ತೇಜಸ್ಸು ಟ್ರಸ್ಟ್. ಸಾಮಾಜಿಕ ಜಾಲತಾಣದ‌ ಬಳಕೆಯಿಂದ ಯುವ ಸಮೂಹ ಕೆಡುಕಿನತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಸಮಾಜದಲ್ಲಿನ ಅಶಕ್ತರ ಪಾಲಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಆಶಯದೊಂದಿಗೆ ಆರಂಭವಾದ ಯುವ ತೇಜಸ್ಸು ಸಂಸ್ಥೆ ಬಳಿಕ ಹೆಮ್ಮರವಾಗಿ ಬೆಳೆದಿದ್ದು ಈಗ ಇತಿಹಾಸ. ಯುವ ಜನಾಂಗವನ್ನೇ

ಮರದ ಕಾಲುಸಂಕ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ‌ ಅಭಿಯಾನ‌ – ಯುವ ತೇಜಸ್ಸು ಬಳಗದಿಂದ ನಿಸ್ವಾರ್ಥ ಪ್ರಯತ್ನ, ನಿಮ್ಮ‌ ಬೆಂಬಲವೂ ಬೇಕಿದೆ… Read More »