Ad Widget .

ಮದುವೆ ಸಮಾರಂಭದಲ್ಲಿ ಹಪ್ಪಳ ವಿಚಾರವಾಗಿ ನಡೆಯಿತು ಭಾರೀ ಗಲಾಟೆ

ಸಮಗ್ರ ನ್ಯೂಸ್ : ಮದುವೆ ಸಮಾರಂಭದ ವೇಳೆ ಹೆಚ್ಚುವರಿ ಹಪ್ಪಳಕ್ಕಾಗಿ ನಡೆದ ಗಲಾಟೆಯಲ್ಲಿ ಟೇಬಲ್ಸ್​ ಮತ್ತು 25 ಕುರ್ಚಿಗಳಿಗೆ ಹಾನಿಯಾಗಿದ್ದು ಸೇರಿದಂತೆ ಕಲ್ಯಾಣ ಮಂಟಪಕ್ಕೆ ಸುಮಾರು 1.5 ಲಕ್ಷ ರೂಪಾಯಿ ನಷ್ಟವಾದ ಘಟನೆಯೊಂದು ಕೇರಳದ ಹರಿಪಾದದಲ್ಲಿ ನಡೆದಿದೆ

Ad Widget . Ad Widget .

ಈ ಘಟನೆ ಭಾನುವಾರ (ಆ.28) ಮುತ್ತೊಮ್​ನಲ್ಲಿ ನಡೆದಿದ್ದು, ಮದುವೆ ವೇಳೆ ವರನ ಕಡೆಯವರು ಎರಡನೇ ಬಾರಿಗೆ ಹಪ್ಪಳವನ್ನು ಕೇಳಿದ್ದಾರೆ. ಇದು ಎರಡು ಗುಂಪಿನ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ವಾಗ್ವಾದ ಹೊಡೆದಾಟಕ್ಕೂ ತಿರುಗಿ, ಕಲ್ಯಾಣ ಮಂಟಪದಲ್ಲೇ ಎರಡು ಗುಂಪಿನವರು ಗಲಾಟೆ ಮಾಡಿಕೊಂಡಿದ್ದಾರೆ.

Ad Widget . Ad Widget .

ಇದೇ ವೇಳೆ ಕಲ್ಯಾಣ ಮಂಟಪದ ಮಾಲೀಕರು ಎರಡು ಗುಂಪಿನ ನಡುವೆ ಮಾತನಾಡಿದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಲಾಟೆಯಲ್ಲಿ ಮಾಲೀಕರು ಸೇರಿದಂತೆ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *