Ad Widget .

ಮದ್ಯಸೇವನೆ ಮಾಡಿ ತಾಯಿಗೆ ಹಲ್ಲೆ ನಡೆಸಿದ ತಂದೆಯ ವಿರುದ್ಧ ಕೇಸ್ ಕೊಟ್ಟ ಏಳು ವರ್ಷದ ಮಗ

ಸಮಗ್ರ ನ್ಯೂಸ್: ದಿನ ನಿತ್ಯ ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದ ತಂದೆಯ ವಿರುದ್ಧ ಏಳು ವರ್ಷದ ಬಾಲಕ ಪೊಲೀಸರಿಗೆ ದೂರು ನೀಡಿದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

Ad Widget . Ad Widget .

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ ಪಟ್ಟಣದಲ್ಲಿ ತಂದೆ ಬಾಲಕಿಶನ್ ವಿರುದ್ಧ ಭರತ್ ಎಂಬಾತ ದೂರು ನೀಡಿದ್ದಾನೆ.

Ad Widget . Ad Widget .

ಮುಸ್ತಾಬಾದ್ ಮೂಲದ ಬಾಲಕಿಶನ್‍ಗೆ ಭರತ್ ಹಾಗೂ ಶಿವಾನಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಲ್ಲಿ ಭರತ್ ಮುಸ್ತಾಬಾದ್‍ನ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ.

ಮದ್ಯವ್ಯಸನಿಯಾಗಿದ್ದ ಬಾಲಕಿಶನ್ ಪ್ರತಿನಿತ್ಯ ತನ್ನ ಪತ್ನಿಗೆ ಮಕ್ಕಳೆದುರೇ ಹೊಡೆಯುತ್ತಿದ್ದ. ಇದನ್ನು ನೋಡಿದ ಭರತ್ ದಿನನಿತ್ಯ ಕಿರುಕುಳ ಅನುಭವಿಸುತ್ತಿದ್ದ ತನ್ನ ತಾಯಿಯನ್ನು ಇದರಿಂದ ತಪ್ಪಿಸಲು ಏನಾದರೂ ಮಾಡಬೇಕು ಎಂದು ಯೋಚಿಸಿದ್ದಾನೆ. ಅದರಂತೆ ಕುಟುಂಬದವರಿಗೆ ತಿಳಿಸದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ವೆಂಕಟೇಶ್ವರಲು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭರತ್, ಕಳೆದ ದಿನಗಳಿಂದ ತನ್ನ ತಂದೆ ಮದ್ಯ ಸೇವಿಸಿ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ತನಗೆ ಪೊಲೀಸರು ನ್ಯಾಯ ಒದಗಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆಯಿದೆ ಎಂದು ತಿಳಿಸಿದ್ದಾನೆ. ಭರತ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಆತನ ತಾಯಿ ದೀಪಿಕಾಳನ್ನು ವಿಚಾರಿಸಿದ್ದಾರೆ. ನಂತರ ಬಾಲಕಿಶನ್ ಹಾಗೂ ದೀಪಿಕಾಳಿಗೆ ಈ ರೀತಿ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *