Ad Widget .

ವಿಘ್ನ ನಿವಾರಕ ಹೇ ಗಣಪ

ಎಲ್ಲಾ ಕಾರ್ಯಗಳಿಗೂ ಮೊದಲು ಪೂಜೆ ಗಣಪತಿಗೆ ಸಲ್ಲುತ್ತದೆ. ಗಣೇಶನ ಪೂಜೆ ಪುರಾತನವಾದದ್ದು. ಗಣಪತಿ ಗುಡಿಯಿಲ್ಲದ ಊರಿಲ್ಲ ಎಂಬ ಕಲ್ಪನೆಗಳಿಗೂ ಸಾಧ್ಯವಿಲ್ಲ‌. ಕಾವ್ಯಗಳಲ್ಲಿ  ಸಾಹಿತ್ಯ, ಜಾನಪದ ಚಿತ್ರಕಲೆಗಳಲ್ಲಿ ಮೂಡಿದೆ. ವಿವಿಧ ದೇಶ ವಿದೇಶಗಳಲ್ಲಿ ಹಲವು ವಿನ್ಯಾಸದ ಮೂರ್ತಿಗಳನ್ನು ಕಾಣಬಹುದು. 

Ad Widget . Ad Widget .

ಗಣೇಶ ಹಬ್ಬವೆಂದರೆ ಎಲ್ಲರಿಗೂ ಎಲ್ಲಿಲ್ಲದ ಸಂತಸ. ಮನೆಗಳಲ್ಲಿ, ರಸ್ತೆಗಳಲ್ಲಿ ಗಣೇಶನ ವಿಗ್ರಹ  ಕುಳ್ಳಿರಿಸಿ ಸಂಭ್ರಮಿಸುತ್ತಾರೆ. ವಿವಿಧ ಕಾರ್ಯ ಕ್ರಮಗಳನ್ನು ಕೈಗೊಂಡು ಆನಂದಿಸುತ್ತಾರೆ.

Ad Widget . Ad Widget .

ವಿದ್ಯಾ ಗಣಪತಿ ಪೂಜೆ ಮಾಡಿದರೆ, ಓದಿನಲ್ಲಿ ಹೆಚ್ಚಿನ ಲಾಭವಾಗಲಿದೆ ಎನ್ನುವ ಮಾತಿದೆ.

 ಗಣಪತಿ ಪೂಜೆ ಗೆ ಪ್ರಿಯವಾದ ಗರಿಕೆ ಹುಲ್ಲು, ಪ್ರತಿ ವರ್ಷ ಗಣಪತಿ ಹಬ್ಬ ಬಂದಾಗಲೆಲ್ಲ ಗರಿಕೆಗೆ ಬಲು ಬೇಡಿಕೆ. ಹೋಮ ಹವನಗಳಿಗೆ ಗರಿಕೆ ಅಗತ್ಯವಾದ ವಸ್ತು. ಆನೆ ಮುಖದವನಾದುದರಿಂದ ಗರಿಕೆ ಮುಖ್ಯವಾದವು. 21 ಗರಿಕೆಗಳಿಂದ ಪೂಜಿಸಿ 21 ಮೋದಕಗಳನ್ನು ಭಕ್ತಿ ಶ್ರದ್ಧೆಗಳಿಂದ ಅರ್ಪಿಸಿ, ಹೀಗೆ ನಾನಾ ರೀತಿಯಲ್ಲಿ ಎಲ್ಲೆಡೆಯೂ ಗಣೇಶ ಹಬ್ಬ ಸಂಭ್ರಮ ಸಡಗರದಿಂದ ಆಚರಿಸುವರು.

  ✍ಹರ್ಷಿತಾ ಹರೀಶ್ ಕುಲಾಲ್

Leave a Comment

Your email address will not be published. Required fields are marked *