Ad Widget .

‘ಸಿಹಿಸುದ್ದಿ’ ನೀಡ್ತಾರಂತೆ ಮೋಹಕತಾರೆ ರಮ್ಯಾ! ಅದೇನದು ಅಂಥಾ ಸುದ್ದಿ?

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ ಚಿತ್ರರಂಗ ತೊರೆದು ಹಲವು ವರ್ಷಗಳೇ ಕಳೆದಿವೆ. ಇನ್ನು ಮಂಡ್ಯ ಸಂಸದೆಯಾಗಿದ್ದ ನಟಿ ಈಗ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಕ್ರಿಯವಾಗಿಲ್ಲ.

Ad Widget . Ad Widget .

ಕಳೆದ ವರ್ಷ ಪುನೀತ್ ರಾಜ್ ಕುಮಾರ್ ನಿಧನರಾದ ನಂತರ ಬೆಂಗಳೂರಿಗೆ ಆಗಮಿಸಿದ ರಮ್ಯ ನಂತರ ಸ್ಯಾಂಡಲ್ ವುಡ್ ಮಂದಿಯ ಜೊತೆ ಆಪ್ತವಾಗತೊಡಗಿದರು.

Ad Widget . Ad Widget .

ಸಿನಿಮಾಗಳ ಪ್ರೀಮಿಯರ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕೊಂಚ ಆಕ್ಟಿವ್ ಆಗಿದ್ದಾರೆ. ಕನ್ನಡ ಚಿತ್ರದಲ್ಲಿ ಮತ್ತೆ ನಟಿಸುತ್ತಾರೆ, ಬಣ್ಣ ಹಚ್ಚುತ್ತಾರೆ ಎಂಬ ವದಂತಿಗಳು ಕೇಳಿಬಂದವು. ಅದನ್ನು ಸ್ವತಃ ರಮ್ಯ ಅಲ್ಲಗಳೆಯಲೂ ಇಲ್ಲ, ಒಪ್ಪಿಕೊಳ್ಳಲೂ ಇಲ್ಲ.

ರಮ್ಯ ಮತ್ತೆ ಕನ್ನಡದಲ್ಲಿ ನಟಿಸಬೇಕು ಎಂದು ಅವರ ಅಭಿಮಾನಿಗಳು ಬೇಡಿಕೆಯಿಡುತ್ತಲೇ ಬಂದಿದ್ದಾರೆ. ಈ ನಡುವೆ ಇಂದು ಟ್ವಿಟ್ಟರ್ ನಲ್ಲಿ ಖುಷಿಯ ಸಂಗತಿಯನ್ನು ಹಂಚಿಕೊಂಡು ಅಭಿಮಾನಿಗಳಲ್ಲಿ ಕಾತರತೆ ಮೂಡಿಸಿದ್ದಾರೆ. ನಾಳೆ ಗಣೇಶ ಹಬ್ಬದ ಸುದಿನ ಬೆಳಗ್ಗೆ 11.15ಕ್ಕೆ ನಿಮ್ಮೆಲ್ಲರಿಗೂ ಖುಷಿಯ ವಿಚಾರವೊಂದನ್ನು ತಿಳಿಸುತ್ತೇನೆ, ನೋಡುತ್ತಿರಿ ಎಂದು ಹಂಚಿಕೊಂಡಿದ್ದಾರೆ.

ರಮ್ಯಾ ಈ ರೀತಿಯಾಗಿ ಹೇಳುತ್ತಿದ್ದಂತೆ ಅವರ ಅಭಿಮಾನಿಗಳು ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ನಾಳೆ ಗಣೇಶ‌ ಚತುರ್ಥಿ ದಿನ ಮೋಹಕತಾರೆ ಅದೇನು ಸಿಹಿ ಸುದ್ದಿ ಹೇಳ್ತಾರೋ ಎಂದು ಅಭಿಮಾನಿಗಳು ಕಾದುಕುಳಿತಿದ್ದಾರೆ.

Leave a Comment

Your email address will not be published. Required fields are marked *