Ad Widget .

ಗುಜರಾತ್ ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಶವ ಕಾರಿನಲ್ಲಿ ಪತ್ತೆ

ಸಮಗ್ರ ನ್ಯೂಸ್: ಗುಜರಾತ್​ನ ಖ್ಯಾತ ಗಾಯಕಿ ವೈಶಾಲಿ ಬಲ್ಸಾರಾ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ.

Ad Widget . Ad Widget .

ವಲ್ಸಾದ್ ಜಿಲ್ಲೆಯ ಪಾರ್ ನದಿಯ ದಡದಲ್ಲಿ ಕಾರು ನಿಂತಿದ್ದು ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಯಕಿ ಶವ ಸಿಕ್ಕಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Ad Widget . Ad Widget .

ನದಿ ದಡದಲ್ಲಿ ಕಾರು ಹಲವು ಗಂಟೆಗಳಿಂದ ನಿಂತಿದ್ದನ್ನು ಕಂಡ ಸ್ಥಳೀಯರು ಅದರ ಮಾಲೀಕರನ್ನು ಹುಡುಕಾಡಿದ್ದಾರೆ. ಬಳಿಕ ಯಾರೂ ಪತ್ತೆಯಾಗದ ಕಾರಣ ಅನುಮಾನ ಬಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದು ಕಾರನ್ನು ಪರಿಶೀಲಿಸಿದಾಗ ಅದಲ್ಲಿ ಗಾಯಕಿ ವೈಶಾಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತಗಾಯಕಿ ವೈಶಾಲಿ ಬಲ್ಸಾರಾ ಗುಜರಾತನ್​ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದಾರೆ. ಇವರ ಪತಿ ಹಿತೇಶ್ ಬಲ್ಸಾರಾ ಕೂಡ ಗಾಯಕರಾಗಿದ್ದಾರೆ.

 ಇದಕ್ಕೂ ಮೊದಲು ಗಾಯಕಿ ಪತಿ ಹಿತೇಶ್​ ಹೆಂಡತಿ ನಾಪತ್ತೆಯಾದ ಬಗ್ಗೆ ಬಲ್ಸಾರಾ ಪೊಲೀಸರಿಗೆ ಶನಿವಾರ ರಾತ್ರಿ 2 ಗಂಟೆಗೆ ದೂರು ನೀಡಿದ್ದಾರೆ. ವೈಶಾಲಿ ಮನೆ ಬಿಟ್ಟು ಹೋದ ಬಗ್ಗೆ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಕಾರು ಪಾರ್​ ನದಿ ದಡದ ಬಳಿ ಪತ್ತೆಯಾಗಿರುವುದು ಅನುಮಾನ ಉಂಟು ಮಾಡಿದೆ. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *