ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಲ್ಲಿ ಮತ್ತೊಂದು ಜಲಸ್ಪೋಟ ಸಂಭವಿಸಿದ್ದು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಜಲಪ್ರವಾಹ ಉಂಟಾಗಿದೆ. ಇತ್ತ ಮಡಿಕೇರಿ ತಾಲೂಕಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ತಲೆದೋರಿದ್ದು, ರಾತ್ರೋರಾತ್ರಿ ಗ್ರಾಮಸ್ಥರು ಜಾಗ ತೊರೆದಿದ್ದಾರೆ.

ಮಾಹಿತಿಗಳ ಪ್ರಕಾರ ಕಲ್ಮಕಾರು ಪರಿಸರದ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಪೋಟ ಸಂಭವಿಸಿದೆ. ಇದರಿಂದಾಗಿ ಭಾರೀ ಪ್ರಮಾಣದ ಮರಗಳು ನೀರ ಅಬ್ಬರಕ್ಕೆ ಕೊಚ್ಚಿ ಬಂದಿವೆ.

ಕೊಯನಾಡು ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಕಿಂಡಿ ರಾತ್ರಿ ವೇಳೆ ಐದಾರು ಮನೆಗಳಿಗೆ ನೀರು ನುಗ್ಗಿದೆ. ಕಿಂಡಿ ಅಣೆಕಟ್ಟಿಗೆ ಮರಗಳು ಬಂದು ನಿಂತಿದ್ದು, ನೀರು ತಗ್ಗು ಪ್ರದೇಶಗಳತ್ತ ನುಗ್ಗಿದೆ.
ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲೂ ಭೂಕುಸಿತ ಹಾಗೂ ಜಲಸ್ಪೋ ಸಂಭವಿಸಿದ್ದು, ಹಲವು ಮನೆಗಳು ಸಂಪರ್ಕ ಕಳೆದುಕೊಂಡಿವೆ. ದಬ್ಬಡ್ಕದ ಹೊಳೆ ಉಕ್ಕಿ ಹರಿದಿದ್ದು, ಗುಡ್ಡದಿಂದ ನೀರು ಕೊರೆದುಕೊಂಡು ಬಂದಿರುವ ಮಾಹಿತಿ ಲಭಿಸಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳು ಅವಘಡ ಸಂಭವಿಸಿದ ಸ್ಥಳಗಳತ್ತ ತೆರಳಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…