ಸಮಗ್ರ ನ್ಯೂಸ್: ಬೈಕಿಗೆ ಟಿಪ್ಪರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಐಟಿಐ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಆ.29ರ ಬೆಳಗ್ಗೆ ಸಂಭವಿಸಿದೆ.

ಕಕ್ಕೆಪದವು ನಿವಾಸಿ ಮುಹಮ್ಮದ್ ಸಫ್ವಾನ್(20) ಮೃತಪಟ್ಟ ದುರ್ದೈವಿ. ಈತ ತುಂಬೆ ಐಟಿಐ ಸಂಸ್ಥೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಸೋಮವಾರ ಬೆಳಗ್ಗೆ ಪುಂಜಾಲಕಟ್ಟೆ ಮೇಲಿನಪೇಟೆಯ ಶಾರದಾ ಮಂಟಪದ ಬಳಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ, ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಶಫೀಕ್(20) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದ. ಈತ ಮುಹಮ್ಮದ್ ಸಫ್ವಾನ್ ಅವರ ಸಂಬಂಧಿಕರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಪಘಾತದ ವಿಷಯ ತಿಳಿದ ಮುಹಮ್ಮದ್ ಸಫ್ವಾನ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆಂದು ಬೈಕಿನಲ್ಲಿ ಬರುತ್ತಿದ್ದಾಗ ಕುಪ್ಪೆಟ್ಟಿಯ ಹುಣ್ಸೆಕಟ್ಟೆ ಪಿಲಿಗೂಡು ಎಂಬಲ್ಲಿ ಟಿಪ್ಪರ್ ವಾಹನವೊಂದು ಬೈಕಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಸಫ್ವಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಬಳಿಕ ಟಿಪ್ಪರ್ ವಾಹನ ಚಾಲಕ ಟಿಪ್ಪರ್ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ.