Ad Widget .

ಏಷ್ಯಾಕಪ್ ಕ್ರಿಕೆಟ್; ಪಾಕಿಸ್ತಾನವನ್ನು ಮಣಿಸಿದ ಭಾರತ| 147 ರನ್ ಗೆ ಪಾಕ್ ಆಲೌಟ್

ಸಮಗ್ರ ನ್ಯೂಸ್: ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯರ ಭರ್ಜರಿ ಆಟದೊಂದಿಗೆ ಭಾರತಕ್ಕೆ ಪಾಕಿಸ್ತಾನ ಎದುರು ಐದು ವಿಕೆಟ್‌ಗಳ ಜಯ ಲಭಿಸಿತು.‌ ಈ ಮೂಲಕ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ರೋಹಿತ್‌ ಶರ್ಮ ಬಳಗ ತನ್ನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು.

Ad Widget . Ad Widget .

ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಭಾರತ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 148 ರನ್‌ ಗಳಿಸಿ ಜಯ ಸಾಧಿಸಿತು.

Ad Widget . Ad Widget .

ವಿರಾಟ್‌ ಕೊಹ್ಲಿ (35), ರವೀಂದ್ರ ಜಡೇಜ (35) ಮತ್ತು ಕೊನೆಯಲ್ಲಿ ಅಬ್ಬರದ ಅಟವಾಡಿದ ಹಾರ್ದಿಕ್‌ ಪಾಂಡ್ಯ (ಔಟಾಗದೆ 33, 17 ಎ., 4X4, 6X1) ಭಾರತದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

ರೋಚಕ ಪೈಪೋಟಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಏಳು ರನ್‌ಗಳು ಬೇಕಿದ್ದವು. ಮೊಹಮ್ಮದ್‌ ನವಾಜ್‌ ಬೌಲ್‌ ಮಾಡಿದ ಓವರ್‌ನ ಮೊದಲ ಎಸೆತದಲ್ಲಿ ರವೀಂದ್ರ ಜಡೇಜ ಔಟಾದಾಗ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ಹಾರ್ದಿಕ್‌ ಅವರು ನಾಲ್ಕನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಗೆಲುವು ತಂದಿತ್ತು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಬೌಲಿಂಗ್‌ನಲ್ಲೂ ಮಿಂಚಿದ್ದ ಹಾರ್ದಿಕ್‌ ಮೂರು ವಿಕೆಟ್‌ ಪಡೆದಿದ್ದರು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಆರಂಭ ಆಘಾತಕಾರಿಯಾಗಿತ್ತು. ಕೆ.ಎಲ್‌.ರಾಹುಲ್‌ (0) ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಸೀಂ ಶಾ ಅವರಿಗೆ ವಿಕೆಟ್‌ ಒಪ್ಪಿಸಿದರು. ರೋಹಿತ್‌ ಶರ್ಮ (12, 18 ಎಸೆತ) ಮತ್ತು ಕೊಹ್ಲಿ ಎರಡನೇ ವಿಕೆಟ್‌ಗೆ 49 ರನ್‌ ಸೇರಿಸಿದರು. ಆದರೆ ತಡಕಾಡುತ್ತಲೇ ಇದ್ದ ಇವರಿಬ್ಬರು ಮೂರು ರನ್‌ಗಳ ಅಂತರದಲ್ಲಿ ನವಾಜ್‌ಗೆ (33ಕ್ಕೆ 3) ವಿಕೆಟ್‌ ಒಪ್ಪಿಸಿ ನಿರ್ಗಮಿಸಿದರು.

ಸೂರ್ಯಕುಮಾರ್‌ ಯಾದವ್‌ (18) ಔಟಾದಾಗ ಸ್ಕೋರ್‌ 89 ಆಗಿತ್ತು. ಈ ಹಂತದಲ್ಲಿ ಜತೆಯಾದ ಅನುಭವಿ ಜಡೇಜ ಮತ್ತು ಹಾರ್ದಿಕ್‌ ಐದನೇ ವಿಕೆಟ್‌ಗೆ 52 ರನ್‌ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Leave a Comment

Your email address will not be published. Required fields are marked *