Ad Widget .

ಲೈಂಗಿಕ ದೌರ್ಜನ್ಯ ಆರೋಪ| ಮುರುಘಾ ಶರಣರಿಗೆ ಬಂಧನ ಭೀತಿ

ಸಮಗ್ರ ನ್ಯೂಸ್: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಶರಣ ಸ್ವಾಮೀಜಿಗಳಿಗೆ ಬಂಧನದ ಭೀತಿ ಎದುರಾಗಿದೆ. ಶ್ರೀಗಳ ವಿರುದ್ಧ ಆರೋಪ ಮಾಡಿರುವ ಇಬ್ಬರು ಬಾಲಕಿಯರನ್ನು ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.

Ad Widget . Ad Widget .

ವಿಚಾರಣೆ ಸಂದರ್ಭದಲ್ಲಿ ಬಾಲಕಿಯರು ಶ್ರೀಗಳ ವಿರುದ್ಧ ಹೇಳಿಕೆ ನೀಡಿದರೆ ಮುರುಘಾ ಶ್ರೀಗಳನ್ನು ಬಂಧಿಸಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗುವ ಸಾಧ್ಯತೆಗಳಿವೆ. ನಾಳೆ ಜಿಲ್ಲಾ ನ್ಯಾಯಾೀಧಿಶರ ಮುಂದೆ ಬಾಲಕಿಯರನ್ನು ಹಾಜರುಪಡಿಸುವ ಸಾಧ್ಯತೆಯಿದ್ದು, ನ್ಯಾಯಾೀಧಿಶರು ಅವರಿಂದ ಹೇಳಿಕೆ ಪಡೆಯಲಿದ್ದಾರೆ.

Ad Widget . Ad Widget .

ಒಂದು ವೇಳೆ ಮಠದಲ್ಲಿ ತಮಗೆ ಆರೋಪಿ ಸ್ಥಾನದಲ್ಲಿರುವ ಶ್ರೀಗಳು ಹಾಗೂ ಇತರರು ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ನ್ಯಾಯಾೀಧಿಶರ ಮುಂದೆ ಬಾಲಕಿಯರು ಹೇಳಿಕೆ ದಾಖಲಿಸಿದರೆ ಶ್ರೀಗಳ ವಿರುದ್ಧ ಐಪಿಸಿ ಸೆಕ್ಷನ್ 164ರಡಿ ದೂರು ದಾಖಲಾದರೆ ಶ್ರೀಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತದೆ.

ಇನ್ನು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಶ್ರೀಗಳು ಮಠದಲ್ಲೇ ಉಳಿದಿದ್ದಾರೆ.

Leave a Comment

Your email address will not be published. Required fields are marked *