ದೇಶದ ಎರಡು ಅವಳಿ‌ ಕಟ್ಟಡಗಳು ಕೇವಲ 9 ಸೆಕೆಂಡ್ ನಲ್ಲಿ ನೆಲಸಮ| ಇಲ್ಲಿನ ಆ ದೃಶ್ಯಾವಳಿ!

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ನೋಯ್ಡಾದಲ್ಲಿ ದೇಶದ ಅತಿ ಎತ್ತರದ ಅವಳಿ ಕಟ್ಟಡಗಳನ್ನು ನೆಲೆಸಮಗೊಳಿಸಲಾಗಿದೆ. ಅಪೇಕ್ಸ್, ಸಿಯಾನಿ ಹೆಸರಿನ ದೇಶದ ಅತಿ ದೊಡ್ಡ ಅವಳಿ ಕಟ್ಟಡ ನೆಲಸಮಗೊಳಿಸಲಾಗಿದೆ. ನೋಯ್ಡಾ ಪ್ರಾಧಿಕಾರ ಕಟ್ಟಡವನ್ನು ನೆಲಸಮ ಮಾಡಿದೆ.

Ad Widget ... ..

ಕಟ್ಟಡ ನೆಲಸಮಕ್ಕಾಗಿ 3700 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ. ಅಕ್ಕಪಕ್ಕದ ನಿವಾಸಗಳು, ಕಟ್ಟಡಗಳಲ್ಲಿದ್ದ 5000ಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಕಟ್ಟಡದಲ್ಲಿ 930 ಫ್ಲಾಟ್ ಗಳನ್ನು ನಿರ್ಮಿಸಲಾಗಿತ್ತು. ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮಗೊಳಿಸಲಾಗಿದೆ. ಕೇವಲ 9 ಸೆಕೆಂಡ್ ಅವಧಿಯಲ್ಲಿ ಕಟ್ಟಡ ನೆಲಸಮವಾಗಿದೆ.

Ad Widget

ಕಟ್ಟಡ ಧ್ವಂಸ ಹಿನ್ನಲೆಯಲ್ಲಿ ಸುತ್ತಮುತ್ತಲಿನ ರಸ್ತೆ, ಹೆದ್ದಾರಿಗಳಲ್ಲಿ ಜನ, ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮೆಟ್ರೋ ರೈಲು ಸಂಚಾರ ನಿಲ್ಲಿಸಲಾಗಿತ್ತು. ಪೊಲೀಸರು, ಎನ್.ಡಿ.ಆರ್.ಎಫ್. ಸಿಬ್ಬಂದಿ, ಅಗ್ನಿಶಾಮಕದಳದ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿವೆ.

Leave a Comment

Your email address will not be published. Required fields are marked *