Ad Widget .

ಮಳೆಯಿಂದ ಸೇತುವೆ ಕುಸಿದು, ಸ್ವಲ್ಪದರಲ್ಲೇ ಪಾರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

ಸಮಗ್ರ ನ್ಯೂಸ್: ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದ ಕುಸಿದು ಬಿದ್ದಿದ್ದು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೇವಲ 5 ನಿಮಿಷಕ್ಕೆ ತೀತಾ ಸೇತುವೆ ಕುಸಿತವಾಗಿದೆ.

Ad Widget . Ad Widget .

ಕೊರಟಗೆರೆ ತಾಲೂಕಿನ ತೀತಾ ಸೇತುವೆ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದ್ದರು.

Ad Widget . Ad Widget .

ಸ್ಥಳ ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು. ಅವರು ತೆರಳಿದ ಕೇವಲ 5 ನಿಮಿಷಗಳ ಬಳಿಕ ಸೇತುವೆಯ ಇನ್ನೊಂ ದು ಭಾಗವೂ ಕುಸಿತವಾಗಿದೆ. ಪರಮೇಶ್ವರ್ ನಿಂತಿದ್ದ ಜಾಗವೂ ಕುಸಿತವಾಗಿದ್ದು, ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಸೇತುವೆ ಕುಸಿತದ ಹಿನ್ನೆಲೆ ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಸದ್ಯ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸುತ್ತಿವೆ.

Leave a Comment

Your email address will not be published. Required fields are marked *