ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಇಂದು(ಆ.27) ನ್ಯಾಯಮೂರ್ತಿ ಯು.ಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಉದಯ್ ಉಮೇಶ್ ಲಲಿತ್ ಅವರ ಇಡೀ ಕುಟುಂಬವೇ ವಕೀಲರು ಮತ್ತು ನ್ಯಾಯಮೂರ್ತಿಗಳ ಕುಟುಂಬವಾಗಿದೆ. ಮಹಾರಾಷ್ಟ್ರದ ಯುಯು ಲಲಿತ್ ಅವರ ಕುಟುಂಬಕ್ಕೆ 102 ವರ್ಷ. ಅವರ ಅಜ್ಜ ರಂಗನಾಥ್ ಲಲಿತ್ ಭಾರತಕ್ಕೆ ಸ್ವಾತಂತ್ರ್ಯ ಬರುವ ಮುಂಚೆಯೇ ಸೊಲ್ಲಾಪುರದಲ್ಲಿ ವಕೀಲರಾಗಿದ್ದರು. ಇಂದು ನ್ಯಾಯಮೂರ್ತಿ ಯುಯು ಲಲಿತ್ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರ ಕುಟುಂಬದ 3 ತಲೆಮಾರುಗಳು ಹಾಜರಿದ್ದುದು ವಿಶೇಷವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ 90 ವರ್ಷದ ತಂದೆ ಉಮೇಶ್ ರಂಗನಾಥ್ ಲಲಿತ್ ಕೂಡ ಇಂದು ಪ್ರಮಾಣವಚನ ಸ್ವೀಕಾರದ ವೇಳೆ ಉಪಸ್ಥಿತರಿದ್ದರು. ಅವರು ತಮ್ಮ ತವರು ರಾಜ್ಯದಲ್ಲಿ ವಕೀಲರಾಗಿ ಸುದೀರ್ಘ ವೃತ್ತಿಜೀವನದ ನಂತರ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.