Ad Widget .

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎ ಜೊತೆ ಸಹಕರಿಸಲು ದ.ಕ ಜಿಲ್ಲೆಯ 9 ಮಂದಿ ಪೊಲೀಸರು ನೇಮಕ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬೆಳ್ಳಾರೆಯ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಏನ್ಐಎ ಜೊತೆಗೆ ತನಿಖೆಗೆ ಸಹಕರಿಸಲು ಜಿಲ್ಲೆಯ 9 ಮಂದಿ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Ad Widget . Ad Widget .

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ.
ಎನ್ಐಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಒಒಡಿ ಮೂಲಕ ಬೆಂಗಳೂರು ಎನ್ಐಎ ವಿಭಾಗದ ಅಧಿಕಾರಿಗಳ‌ ಜೊತೆ ಪ್ರಕರಣದ ತನಿಖೆಗಾಗಿ ಜಿಲ್ಲೆಯ 9 ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ಡಾ.ಎಮ್.ಎ.ಸಲೀಂ ಐಪಿಸ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದು ತಕ್ಷಣದಿಂದಲೇ ಬೆಂಗಳೂರಿನ ಎನ್ಐಎ ಕಛೇರಿಗೆ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ.

Ad Widget . Ad Widget .

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಪ್ರಸನ್ನ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಉದಯ ರವಿ, ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ಉದಯ ರೈ , ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಅನಿಲ್ ಇವರನ್ನು ಒಳಗೊಂಡ ಪೋಲಿಸರ ತಂಡವನ್ನು ಒಂದು ತಿಂಗಳವರೆಗೆ ಎನ್ಐಎ ಗೆ ಒಒಡಿ ಮೂಲಕ ನೇಮಕ ಮಾಡಲಾಗಿದೆ.

Leave a Comment

Your email address will not be published. Required fields are marked *