Ad Widget .

50 ಅಡಿ ಕೆಳಗೆ ಕುಸಿದ ಮನೆ; ಮನೆ ಸದಸ್ಯರು ಪಾರು

ಸಮಗ್ರ ನ್ಯೂಸ್ : ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆಯೊಂದು ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ.

Ad Widget . Ad Widget .

ಕುಟುಂಬ ಸದಸ್ಯರು ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿತು. ಏನೋ ಅನಾಹುತ ಸಂಭವಿಸಲಿದೆ ಎಂದು ತಿಳಿದ ಮನೆಯ ಸದಸ್ಯರು ಹೊರ ಬಂದಿದ್ದು, ಕ್ಷಣಾರ್ಧದಲ್ಲಿ ಮನೆ ನೆಲಕ್ಕುರುಳಿದೆ.

Ad Widget . Ad Widget .

ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗುತ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.

ಬ್ರಿಟಿಷರ ಕಾಲದಲ್ಲಿ, ಘುಗೂಸ್​​ನಲ್ಲಿ ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ ಇತ್ತು. ತೆರೆದ ಹೊಂಡಗಳಿಂದ ಗಣಿಗಾರಿಕೆ ಮಾಡಲಾಗಿತ್ತು. ಆ ಸಮಯದಲ್ಲಿ ನಗರದ ವಿಸ್ತರಣೆ ಹೆಚ್ಚಾಗಿ ಗಣಿ ಬಳಿ ನಾಗರಿಕರು ಮನೆ ಕಟ್ಟಿಕೊಂಡಿದ್ದಾರೆ. ಸದ್ಯ ಇಡೀ ಘುಗೂಸ್ ನಗರವು ಭೂಗತ ಕಲ್ಲಿದ್ದಲು ಗಣಿ ಮೇಲೆ ನೆಲೆಗೊಂಡಿದೆ.

ಘಟನೆಯ ಬಳಿಕ ಅಮರಾಯಿ ವಾರ್ಡ್​ನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಮಾಹಿತಿ ಪಡೆದ ಶಾಸಕ ಕಿಶೋರ್ ಜಾರ್ಗೆವಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಘಟನೆಯ ಅಧ್ಯಯನಕ್ಕೆ ಭೂ ಸಮೀಕ್ಷಾ ತಂಡ ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Your email address will not be published. Required fields are marked *