Ad Widget .

ವಾರದ ಹಿಂದೆ ರಸ್ತೆ ಇಲ್ಲವೆಂದು ರೋಗಿಯನ್ನು ಹೊತ್ತೊಯ್ದರು| ಈಗ ಜೀಪ್ ನಲ್ಲಿ ತೆಂಗಿನಕಾಯಿ ಕೊಂಡೊಯ್ದರು|

ಸಮಗ್ರ ನ್ಯೂಸ್: ರಸ್ತೆ ಸಂಪರ್ಕವಿಲ್ಲದ ಕಾರಣ ಮರದ ಬಡಿಗೆಗೆ ಬಟ್ಟೆ ಕಟ್ಟಿ, ಅದರಲ್ಲಿ ಅನಾರೋಗ್ಯ ಪೀಡಿತ ವೃದ್ದೆಯನ್ನು ಹೊತ್ತೊಯ್ದ ಘಟನೆಯು ಇದೀಗ ತಿರುವು ಪಡೆದುಕೊಂಡಿದ್ದು, ಅದೇ ವೃದ್ದೆಯ ಮನೆಯಿಂದ ಜೀಪು ಮೂಲಕ ತೆಂಗಿನಕಾಯಿ ಕೊಂಡೊಯ್ಯುವ ವೀಡಿಯೋ ವೈರಲ್ ಆಗಿದೆ.

Ad Widget . Ad Widget .

ಕಡಬ ತಾಲೂಕಿನ ನೂಜಿಬಾಳ್ತಿಲದ ಕಮಲಾ (70) ಎಂಬ ವೃದ್ದೆಯನ್ನು ಮರದ ಕಂಬಕ್ಕೆ ಸೀರೆ ಕಟ್ಟಿ ಅದರಲ್ಲಿ ಮಲಗಿಸಿ ಚಿಕಿತ್ಸೆಗಾಗಿ ಕರೆದೊಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ರಸ್ತೆ ಸಂಚಾರ ವ್ಯವಸ್ಥೆಯಿಲ್ಲದ ಕಾರಣ ಆಂಬುಲೆನ್ಸ್‌ ಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಆಡಳಿತ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಈ ವೀಡಿಯೋ ಮಾಡಲಾಗಿತ್ತು.

Ad Widget . Ad Widget .

ಆದರೆ ಗುರುವಾರದಂದು ಅದೇ ಮನೆಗೆ ಜೀಪು ಹೋಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಜೀಪು ಮನೆಗೆ ತೆರಳಿದ ಮತ್ತು ಹಿಂತಿರುಗಿದ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಪರೀತ ಮಳೆ ಬಂದು ರಸ್ತೆ ಹದಗೆಟ್ಟಿದ್ದರೂ, ಜೀಪು ಮನೆಯವರೆಗೆ ಬಂದು ಹೋಗಿದೆ. ಆದರೆ ವೃದ್ದೆಯನ್ನು ಮರದ ಕೊಂಬೆಯಲ್ಲಿ ಸಾಗಿಸಲಾಗಿದೆ. ಇದು ಸರಿಯಲ್ಲ ಎಂದು ಸ್ಥಳೀಯರು ಮನೆಯವರನ್ನು ಪ್ರಶ್ನಿಸುತ್ತಿರುವುದು ಕೂಡಾ ವೀಡಿಯೋದಲ್ಲಿ ದಾಖಲಾಗಿದೆ

Leave a Comment

Your email address will not be published. Required fields are marked *