Ad Widget .

ಪತನದ ಭೀತಿಯಲ್ಲಿ ದೆಹಲಿಯ ಆಪ್ ಸರ್ಕಾರ| ಹಲವು ಶಾಸಕರು ನಾಟ್ ರೀಚೇಬಲ್!!

ಸಮಗ್ರ ನ್ಯೂಸ್: ದೇಶವನ್ನು ಸಂಪೂರ್ಣವಾಗಿ ಕೇಸರಿಮಯ ಮಾಡಲು ಬಿಜೆಪಿಯು ಇನ್ನಿಲ್ಲದ ರಣತಂತ್ರವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬಳಕೆ ಮಾಡುತ್ತಲೇ ಇದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಉರುಳಿಸಿದ್ದು, ಇದೇ ಮಾದರಿಯನ್ನು ದೆಹಲಿಗೆ ಅಳವಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಬಿಹಾರದಲ್ಲಿಯೂ ಇಂತಹದ್ದೊಂದು ಪ್ರಯತ್ನವನ್ನೂ ಬಿಜೆಪಿ ಮಾಡಿತ್ತು ಆದರೆ ಯಶಸ್ವಿಯಾಗುವಲ್ಲಿ ಸೋತಿತ್ತು.

Ad Widget . Ad Widget .

ಇದೀಗ ಬಿಜೆಪಿಯ ಕಣ್ಣು ದೆಹಲಿ ಸರ್ಕಾರದ ಮೇಲೆ ಬಿದ್ದಿದೆಯೇ ಎಂಬ ಅನುಮಾನ ಮೂಡಿದೆ. ಬಿಜೆಪಿಯು ನಮ್ಮ ಶಾಸಕರನ್ನು ಸೆಳೆದುಕೊಳ್ಳುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿಗಳ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕರ ಮಹತ್ವದ ಸಭೆಯನ್ನು ಕರೆದಿದೆ.

Ad Widget . Ad Widget .

ದೆಹಲಿಯಲ್ಲಿ ಕೇಜ್ರಿವಾಲ್​​ ನೇತೃತ್ವದ ಸರ್ಕಾರವನ್ನು ಉರುಳಿಸಬೇಕೆಂದು ಬಿಜೆಪಿಯು ಆಪ್​ನ ಶಾಸಕರಿಗೆ ಬೆದರಿಕೆ ಹಾಗೂ ಆಮಿಷವೊಡ್ಡುತ್ತಿದೆ ಎಂದು ಆಮ್​ ಆದ್ಮಿ ಪಕ್ಷ ಆರೋಪ ಮಾಡುತ್ತಿದೆ. ಬಿಜೆಪಿಗೆ ಆಪ್​ ಪಕ್ಷ ಮಾತ್ರ ವಿರೋಧಿಯಾಗಿರುವ ಕಾರಣ ಬಿಜೆಪಿಯು ಈ ರೀತಿ ಹುನ್ನಾರ ನಡೆಸಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಆರೋಪಿಸಿದ್ದಾರೆ .

ಆಮ್​ ಆದ್ಮಿ ಪಕ್ಷದ ನಾಯಕ ಸೌರಭ್​ ಭಾರಧ್ವಾಜ್​​ ಈ ವಿಚಾರವಾಗಿ ಮಾತನಾಡಿದ್ದು ರಾಷ್ಟ್ರ ರಾಜಧಾನಿಯಲ್ಲಿ ಕೇಜ್ರಿವಾಲ್​ ನೇತೃತ್ವದ ಸರ್ಕಾರವನ್ನು ಪತನಗೊಳಿಸಲು ಆಪ್​ ಶಾಸಕರಿಗೆ 20 ಕೋಟಿ ರೂಪಾಯಿಗಳನ್ನು ಬಿಜೆಪಿ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷವನ್ನು ಕೆಳಗಳಿಸಬೇಕೆಂದು ಬಿಜೆಪಿಯು ಆಪ್​ನ ಶಾಸಕರಿಗೆ 20 ಕೋಟಿ ರೂಪಾಯಿ ಆಫರ್​ ಮಾಡಿದೆ ಎಂದು ಸೌರಭ್​ ಸುದ್ದಿಗೋಷ್ಠಿ ಕರೆದು ಆರೋಪಿಸಿದ್ದರು.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆದಿದ್ದ ಆಪ್​​ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಸಂಜಯ್​ ಸಿಂಗ್​ ಕೂಡ ಇದೇ ಆರೋಪ ಮಾಡಿದ್ದಾರೆ.ಬಿಜೆಪಿಯು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕುದುರೆ ವ್ಯಾಪಾರ ನಡೆಸುತ್ತಿದೆ. ಮಹಾರಾಷ್ಟ್ರದಲ್ಲಿ ಇದೇ ಬಿಜೆಪಿ ರಣತಂತ್ರ ಹೂಡಿ ಶಾಸಕರನ್ನು ಖರೀದಿ ಮಾಡಿ ಮಹಾ ಅಘಾಡಿ ಸರ್ಕಾರವನ್ನು ಪತನಗೊಳಿಸಿತ್ತು. ಇದೀಗ ಬಿಜೆಪಿಯ ಕಣ್ಣು ದೆಹಲಿಯ ಮೇಲೆ ಬಿದ್ದಿದೆ. ಇವರ ಹಣದ ಆಫರ್​ ಒಪ್ಪದೇ ಹೋದಲ್ಲಿ ಅಂತಹ ಶಾಸಕರಿಗೆ ಇಡಿ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *