ಸಮಗ್ರ ನ್ಯೂಸ್: ಲೈಂಗಿಕ ಬಯಕೆಯಿಂದ ಚಿಕ್ಕ ಮಕ್ಕಳ ಖಾಸಗಿ ಅಂಗಗಳನ್ನ ಸ್ಪರ್ಶಿಸುವುದು ಅಪರಾಧ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಅನಗತ್ಯವಾಗಿ ಮಗುವನ್ನ ಸ್ಪರ್ಶಿಸುವುದು ಸಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ.
ಮುಂಬೈ ಹೈಕೋರ್ಟ್ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಪರಿಗಣಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಪೋಕ್ಸೊ ಕಾಯ್ದೆಯ ಸೆಕ್ಷನ್ 7ನ್ನ ಉಲ್ಲೇಖಿಸಿದೆ. ಮಗುವಿಗೆ ಯಾವುದೇ ರೀತಿಯ ಗಾಯವಿಲ್ಲದಿದ್ದರೆ ಮತ್ತು ಯಾವುದೇ ಕಾರಣವಿಲ್ಲದೇ ಯಾರಾದರೂ ಲೈಂಗಿಕ ಬಯಕೆಯಿಂದ ಅವರ ಖಾಸಗಿ ಅಂಗಗಳನ್ನ ಸ್ಪರ್ಶಿಸಿದರೆ ಅದು ಪೋಕ್ಸೊ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2013ರಲ್ಲಿ ಆರೋಪಿಗಳು ತಪ್ಪು ಉದ್ದೇಶದಿಂದ ಅಪ್ರಾಪ್ತ ಬಾಲಕಿಯ ದೇಹವನ್ನು ಸ್ಪರ್ಶಿಸಿದ್ದರು. ಈ ಕೃತ್ಯಕ್ಕಾಗಿ 2017ರಲ್ಲಿ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯ ವಿರುದ್ಧ ಆರೋಪಿಗಳು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.