Ad Widget .

ಹೊಗೆ ಬಿಡುವ ಆನೆ ನೋಡಿದ್ದೀರಾ? ಇಲ್ಲಿದೆ ವೈರಲ್ ವಿಡಿಯೋ

ಸಮಗ್ರ ನ್ಯೂಸ್: ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ವಿಡಿಯೋಗಳು ತುಂಬಾ ವೈರಲ್ ಆಗುತ್ತವೆ. ಕೆಲವರು ಪ್ರಾಣಿಗಳ ವಿಡಿಯೋಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಾರೆ. ಪ್ರಾಣಿಗಳಿಗೆ ಸಂಬಂಧಪಟ್ಟ ವಿಡಿಯೋಗಳಿದ್ದರೆ ಜನ ಅದನ್ನು ಬಹಳ ಇಷ್ಟಪಡುತ್ತಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪ್ರಾಣಿಗಳು ಯಾವ ಹೊತ್ತಿನಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ನೀಡುತ್ತವೆ. ಆನೆಗೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

Ad Widget . Ad Widget . Ad Widget .

ಆನೆಗಳು ವಿಶ್ವದ ಅತಿದೊಡ್ಡ ಭೂ ಪ್ರಾಣಿಗಳಾಗಿವೆ. ಆನೆಯು ಸರಿಯಾದ ಬೆಳವಣಿಗೆ ಹೊಂದಲು 16 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಂಪೂರ್ಣವಾಗಿ ಬೆಳೆವಣಿಗೆಯಾದ ಆನೆ ದಿನಕ್ಕೆ 400 ಕೆಜಿ ಆಹಾರ ತಿನ್ನುತ್ತದೆ ಮತ್ತು 150 ಲೀಟರ್ ನೀರನ್ನು ಕುಡಿಯುತ್ತದೆಯಂತೆ. ಆನೆಯನ್ನು ಇಷ್ಟಪಡದವರು ಬಹಳ ಕಡಿಮೆ. ಆದರೆ ಆನೆಗಳಿಗೆ ಮದವೇರಿದಾಗ ಮಾತ್ರ ಅವುಗಳು ಎಲ್ಲವನ್ನೂ ಸರ್ವನಾಶ ಮಾಡಿ ಬಿಡುತ್ತವೆ. ಆನೆಗಳು ಶಾಂತವಾಗಿದ್ದಾಗ ಅವುಗಳನ್ನು ನೋಡುವುದೇ ಚಂದ. ಅವುಗಳ ನೀರಾಟವಂತೂ ಬಲು ಸೊಗಸು. ಇದೇ ಕಾರಣಕ್ಕೆ ಆನೆಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬರುತ್ತಿದ್ದಂತೆಯೇ ಅದು ವೈರಲ್ ಆಗಿ ಬಿಡುತ್ತವೆ.

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆ ಬಾಯಿಯಿಂದ ಹೊಗೆ ಬಿಡುವುದನ್ನು ನೋಡಬಹುದು. ಸೊಂಡಿಲಿನಿಂದ ಅದೇನನ್ನೋ ಬಾಯಿಗೆ ಹಾಕಿಕೊಂಡ ಆನೆಯ ಬಾಯಿಯಿಂದ ಹೊಗೆ ಬರಲು ಆರಂಭವಾಗುತ್ತದೆ. ಆದರೆ ಆನೆ ಏನನ್ನು ಎತ್ತಿಕೊಂಡು ಬಾಯಿಗೆ ಹಾಕುತ್ತದೆ ಎನ್ನುವುದು ಮಾತ್ರ ಸ್ಪಷ್ಟವಾಗುವುದಿಲ್ಲ. ಇದು ಕಾಡ್ಗಿಚ್ಚಿನಿಂದ ಉಳಿದಿರುವ ಸುಟ್ಟ ಮರದ ತುಂಡು ಎಂದು ಹೇಳಲಾಗುತ್ತಿದೆ. ಹಲ್ಲು ನೋವು ಕಾಣಿಸಿಕೊಂಡಾಗ ಆನೆಗಳು ಇದನ್ನು ಬಳಸುತ್ತವೆ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.

Leave a Comment

Your email address will not be published. Required fields are marked *