Ad Widget .

ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಉರುಳಿ ಬಿದ್ದು, 30ಕ್ಕೂ ಹೆಚ್ಚು ಜನ ಸೇಫ್

ಹಂಸಭಾವಿ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್‌ ಉರುಳಿ ಬಿದ್ದು, ಶಾಲಾ ಮಕ್ಕಳನ್ನೊಳಗೊಂಡ 30ಕ್ಕೂ ಅಧಿಕ ಜನ ಪ್ರಾಣಾಪಾಯದಿಂದ ಪಾರಾದ ಘಟನೆಯೊಂದು ಕೋಡ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನಡೆದಿದೆ.

Ad Widget . Ad Widget .

ಉರುಳಿ ಬಿದ್ದ ಬಸ್‌ ರಾಣೆಬೆನ್ನೂರಿನಿಂದ ಕೋಡ ಮಾರ್ಗವಾಗಿ ಹಿರೇಕೆರೂರಿಗೆ ಹೋಗುತ್ತಿದ್ದ ವೇಳೆ ಕೋಡ ಗ್ರಾಮದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಉರುಳಿಬಿದ್ದಿದೆ.

Ad Widget . Ad Widget .

ಬಸ್‌ ಬಿದ್ದ ಕೂಡಲೇ ಒಳಗಿದ್ದ ಪ್ರಯಾಣಿಕರು ಹೊರಬರಲು ಆಗದೇ ಪರದಾಡುತ್ತಿದ್ದರು. ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರಗೆ ತಂದರು.

ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಕೆಲ ಶಾಲಾ ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಂಸಭಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *